More

    ಆಂಬ್ಯುಲೆನ್ಸ್ ಮಾದರಿಯಲ್ಲಿ ಆಕ್ಸಿಜನ್ ಟ್ಯಾಂಕರ್​​ಗಳ ಸುಗಮ ಸಂಚಾರ; ಆಮ್ಲಜನಕ ಸ್ಥಾವರ ಸ್ಥಾಪನೆ

    ಬೆಂಗಳೂರು: ಆಸ್ಪತ್ರೆಗಳಿಗೆ ಆಮ್ಲಜನಕ ಕೊರತೆ ನೀಗಿಸುವ‌ ಉದ್ದೇಶದಿಂದ ಆಕ್ಸಿಜನ್ ತುಂಬಿದ ಟ್ಯಾಂಕರ್​​ಗಳಿಗೆ ಕರೊನಾ ತುರ್ತು ಸೇವೆ ಸ್ಟಿಕ್ಕರ್ ಅಂಟಿಸಿ, ಆಂಬ್ಯುಲೆನ್ಸ್ ಮಾದರಿಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.

    ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಆಮ್ಲಜನಕ ಉತ್ಪಾದಕರು, ಸಿಲಿಂಡರ್ ತಯಾರಕರು, ಸರಬರಾಜು ಸಂಸ್ಥೆಗಳ ಪ್ರತಿನಿಧಿಗಳ ಜತೆ ಇಂದು ಮತ್ತೊಂದು ಸುತ್ತಿನ ಸಭೆ ನಡೆಸಿದ ಬಳಿಕ ಶೆಟ್ಟರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆಕ್ಸಿಜನ್​ ಸಾಗಿಸುವ ಟ್ಯಾಂಕರ್​​ಗಳು ಟೋಲ್ ಗೇಟ್ ಬಳಿ ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸುವಂತೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದ್ದು, ರಾಜ್ಯದ ಸಾರಿಗೆ, ವಾಣಿಜ್ಯ, ಇಂಧನ ಸೇರಿದಂತೆ ಆಯಾ ಜಿಲ್ಲಾ ಆಡಳಿತಗಳಿಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಸೂಚನೆ ನೀಡಲಿದ್ದಾರೆ.

    ಇದನ್ನೂ ಓದಿ: ಉಸಿರಾಟದ ಸಮಸ್ಯೆಗೆ ಚಿಕಿತ್ಸೆ ಸಿಗದೆ ನಾನ್​ ಕೋವಿಡ್ ರೋಗಿ ಸಾವು!

    ಜಿಂದಾಲ್ ಕಂಪನಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಆಮ್ಲಜನಕ ಉತ್ಪಾದನೆ, ಪೂರೈಕೆಗೆ ಒಪ್ಪಿಕೊಂಡಿದೆ. ಆಮ್ಲಜನಕ ಸ್ಥಾವರ ಸ್ಥಾಪಿಸಲು ಮುಂದೆ ಬಂದಿರುವ ಯುನಿವರ್ಸಲ್ ಕಂಪನಿಗೆ ಅಗತ್ಯವಾದ ಅನುಮತಿ ತ್ವರಿತವಾಗಿ ನೀಡಬೇಕು ಎಂದು ಸೂಚಿಸಲಾಗಿದೆ. ಉತ್ತರಪ್ರದೇಶ ಮಾದರಿಯಲ್ಲಿ ಡಿಆರ್​​ಡಿಒ ರಾಜ್ಯದಲ್ಲಿ ಕೂಡ ಆಮ್ಲಜನಕ ಉತ್ಪಾದನಾ ಪ್ಲ್ಯಾಂಟ್ಅನ್ನು ಐದಾರು ದಿನಗಳೊಳಗೆ ಸ್ಥಾಪಿಸಲಿದೆ ಎಂದು ಶೆಟ್ಟರ್ ಹೇಳಿದ್ದಾರೆ.

    ಕೈಗಾರಿಕಾ ಉದ್ದೇಶಿತ ಆಮ್ಲಜನಕವನ್ನು ಮೆಡಿಕಲ್ ಉದ್ದೇಶಕ್ಕೆ ಪೂರೈಕೆ ಹಾಗೂ ಬಳಕೆಗೆ ಸರ್ಕಾರ ಅನುಮತಿ ನೀಡಿ ಸುತ್ತೋಲೆ ಹೊರಡಿಸಿದೆ. ಬೆಂಗಳೂರಿನಲ್ಲಿ ಹೆಚ್ಚು‌ ಕರೊನಾ ಪ್ರಕರಣಗಳು ವರದಿಯಾಗುತ್ತಿದ್ದು, ಬೇಡಿಕೆಗೆ ತಕ್ಕಂತೆ ಆಮ್ಲಜನಕ ಸಿಲಿಂಡರ್ ಸುಗಮ ಸಾಗಣೆ, ತ್ವರಿತ ಪೂರೈಕೆಗೆ ಕ್ರಮ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಗದೀಶ ಶೆಟ್ಟರ್ ಹೇಳಿದ್ದಾರೆ.

    ವಲಸೆ ಕಾರ್ಮಿಕರು ತುಂಬಿದ್ದ ಬಸ್ ಪಲ್ಟಿ ; ಮೂವರ ದುರ್ಮರಣ

    VIDEO | “ಎಲ್ಲಿಗೆ ಹೋಗುತ್ತಿದ್ದೀರಿ ?” ಕೇಳುತ್ತಿದ್ದಾರೆ ಗರ್ಭಿಣಿ ಪೊಲೀಸ್ ಅಧಿಕಾರಿ !

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts