More

    ಕೊರೊನಾ ಭಯಕ್ಕೆ ಬಿಲ್ಡಿಂಗ್​ಗಳಿಂದ ಸಾಕು ಪ್ರಾಣಿಗಳನ್ನ ಎಸೆಯುತ್ತಿರುವ ಚೀನಿಗರು: ಇದೆಂಥಾ ನ್ಯಾಯವೆಂದು ಪ್ರಾಣಿ ಪ್ರಿಯರ ಪ್ರಶ್ನೆ

    ಬೀಜಿಂಗ್​: ಚೀನಾದಲ್ಲಿ ಕೊರೊನಾ ವೈರಸ್​ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅಲ್ಲಿನ ಜನರು ಕೊರೊನಾ ಭಯದೊಟ್ಟಿಗೆ ಜೀವನ ಸಾಗಿಸುವಂತಾಗಿದೆ. ಸಾಕು ಪ್ರಾಣಿಗಳಿಂದ ಕೊರೊನಾ ವೈರಸ್​ ಹರಡುತ್ತದೆ ಎನ್ನುವ ಸುಳ್ಳು ಸುದ್ದಿಯೊಂದು ಹರಡಿದ್ದು, ಇದರಿಂದಾಗಿ ಚೀನಾದ ಜನರು ತಮ್ಮ ಮನೆಯ ಪ್ರಾಣಿಗಳನ್ನು ನಿರ್ಮಾನುಷವಾಗಿ ಬಿಲ್ಡಿಂಗ್​ನಿಂದ ಹೊರಗೆ ಎಸೆದಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ.

    ಮನೆಯಲ್ಲಿ ಸಾಕುವ ಬೆಕ್ಕು, ನಾಯಿಗಳನ್ನು ಬಿಲ್ಡಿಂಗ್​ನಿಂದ ಎಸೆದು ಕೊಂದಿರುವ ಫೋಟೋ ಕಳೆದೆರೆಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೊರೊನಾ ವೈರಸ್​ ಇಂತಹ ಪ್ರಾಣಿಗಳಿಂದ ಹರಡುತ್ತದೆ ಎನ್ನುವ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದ್ದು, ಇದರಿಂದಾಗಿ ಅನೇಕ ಪ್ರಾಣಿಗಳು ಹೀಗೆ ರಸ್ತೆಯಲ್ಲಿ ಪ್ರಾಣ ಬಿಡುವಂತಾಗಿದೆ ಎಂದು ಅನೇಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ಸತ್ತ ಪ್ರಾಣಿಗಳ ಫೋಟೋವನ್ನು ನೋಡಿರುವ ಪ್ರಾಣಿ ಪ್ರಿಯರು ಈ ವಿಚಾರವಾಗಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಪ್ರಾಣಿಗಳನ್ನು ಕೊಂದಾಯಿತು, ಮುಂದೆ ಏನು ಮಾಡುತ್ತೀರಿ, ಮನುಷ್ಯರಾಗಿ ಯೋಚಿಸಿ, ಸುಳ್ಳು ಸುದ್ದಿಗೆ ಪ್ರಾಣಿಯನ್ನೇ ಬಲಿ ಕೊಡುವುದಕ್ಕೆ ನೀವ್ಯಾರು?, ಪ್ರಾಣಿಗಳೇನು ತರಕಾರಿಗಳೇ, ಈ ರೀತಿಯಲ್ಲಿ ನಿರ್ಮಾನುಷವಾಗಿ ನಡೆದುಕೊಳ್ಳುವುದಕ್ಕೆ ಎನ್ನುವಂತಹ ಸಾಲು ಸಾಲು ಆಕ್ರೋಶಭರಿತ ಟ್ವೀಟ್​ಗಳನ್ನು ಮಾಡುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts