More

    ಒಂದೇ ಒಂದು ತಪ್ಪಿನಿಂದ ಹೊತ್ತಿ ಉರಿದ ಮೊಬೈಲ್ ಅಂಗಡಿ; ರಾತ್ರಿಯಿಡೀ ಮೊಬೈಲ್ ಚಾರ್ಚ್​ ಇಡುವ ಮುನ್ನ ಎಚ್ಚರ!

    ಬೆಂಗಳೂರು: ರಾತ್ರಿಯಿಡೀ ಮೊಬೈಲ್ ಚಾರ್ಚ್​​ಗಿಟ್ಟು ನಿದ್ರಿಸುವ ಮುನ್ನ ಎಚ್ಚರಿಕೆ ವಹಿಸಬೇಕು. ಸ್ವಲ್ಪ ಎಡವಟ್ಟಾದರೂ ಅಪಾಯ ಕಟ್ಟಿಟ್ಟಬುತ್ತಿ. ಇದೀಗ ವಿಜಯನಗರದ ಮೊಬೈಲ್ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು, ಅಂಗಡಿ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಇದನ್ನೂ ಓದಿ: ಬಳ್ಳಾರಿ | 30 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಶಾಲಾ ಬಸ್​ಗೆ ಬೆಂಕಿ; ತಪ್ಪಿದ ಅನಾಹುತ

    ಒಂದೇ ಒಂದು ತಪ್ಪಿನಿಂದ ಹೊತ್ತಿ ಉರಿದ ಮೊಬೈಲ್ ಅಂಗಡಿ; ರಾತ್ರಿಯಿಡೀ ಮೊಬೈಲ್ ಚಾರ್ಚ್​ ಇಡುವ ಮುನ್ನ ಎಚ್ಚರ!

    ಅಂಗಡಿಯಾತ ರಾತ್ರಿಯೆಲ್ಲಾ ಮೊಬೈಲ್ ಚಾರ್ಚ್​ಗೆ ಇಟ್ಟಿದ್ದ. ಪರಿಣಾಮ ಬೆಳಗ್ಗೆ ಶಾರ್ಟ್​ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ. ಘಟನೆ ಇಂದು ಬೆಳಗ್ಗೆ 7 ಗಂಟೆ ಹೊತ್ತಿನಲ್ಲಿ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಅಂಗಡಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

    ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ವಿಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬಿಸಿ ಕಾವಲಿಗೆಯ ಮೇಲೆ ಕುಳಿತೇ ಭಕ್ತರಿಗೆ ಆಶೀರ್ವಾದ ಮಾಡ್ತಾರೆ ಈ ಬಾಬಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts