More

    2020ರ 92ನೇ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ನಿರೂಪಕರಿರುವುದಿಲ್ಲ; ಹೀಗಾಗುತ್ತಿರುವುದು ಎರಡನೇ ಬಾರಿ!

    ನವದೆಹಲಿ: ಪ್ರತಿಷ್ಠಿತ ಆಸ್ಕರ್​ ಪ್ರಶಸ್ತಿ ಪ್ರದಾನ 2020ರ ಕಾರ್ಯಕ್ರಮ ಈ ಬಾರಿಯೂ ನಿರೂಪಕರಿಲ್ಲದೆ ನಡೆಯಲಿದೆ.

    2019ರಲ್ಲಿ ಕೂಡ ನಿರೂಪಕರಿಲ್ಲದೆ ಕಾರ್ಯಕ್ರಮ ನಡೆದಿತ್ತು. ಈ ಮೊದಲು ಕಾರ್ಯಕ್ರಮದಲ್ಲಿ ನಟ ಕೇವಿನ್​ ಹಾಟ್ಸ್​ ಅವರು ಸಲಿಂಗ ಕಾಮದ ಬಗ್ಗೆ ಮಾತನಾಡಿ ವಿವಾದಕ್ಕಿಡಾಗಿದ್ದರು. ನಂತರ ಕಾರ್ಯಕ್ರಮವನ್ನು ನಿರೂಪಕರಿಲ್ಲದೆ ನಡೆಸಲಾಗುತ್ತಿದೆ.

    ಪ್ರತಿವರ್ಷದಂತೆ ಈ ಬಾರಿಯ 92ನೇ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಎಬಿಸಿ ವಾಹಿನಿ ಅಕಾಡೆಮಿ ಆಫ್​​ ಮೋಷನ್​ ಪಿಕ್ಚರ್ಸ್​ ಆಟ್ಸ್ ಆ್ಯಂಡ್​ ಸೈನ್ಸ್​ (ಎಎಂಪಿಎಎಸ್) ಜತೆಗೆ ಪ್ರಸಾರ ಮಾಡುತ್ತದೆ.

    ಎಬಿಸಿ ಎಂಟರ್​ಟೈನ್​ಮೆಂಟ್​ ಅಧ್ಯಕ್ಷ ಕರೇ ಬರ್ಕೆ ಈ ಬಗ್ಗೆ ಬುಧವಾರ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಈ ವರ್ಷವೂ ನಿರೂಪಕರಿರುವುದಿಲ್ಲ ಎಂದು ದೃಢೀಕರಿಸುತ್ತೇನೆ ಎಂದರು.

    ಕಳೆದ ವರ್ಷ ನಡೆದಂತೆ ಕಾರ್ಯಕ್ರಮ ಆಯೋಜಿಸಲು ಈ ಬಾರಿಯೂ ತೀರ್ಮಾನಿಸಲಾಗಿದೆ. ಸತತ ಎರಡನೇ ವರ್ಷವೂ ನಿರೂಪಕರು ಬೇಕೇ ಬೇಡವೇ ಬಗ್ಗೆ ಎಎಂಪಿಎಎಸ್ ಚಿಂತನೆ ನಡೆಸುತ್ತಿದೆ ಎಂದರು.

    ವಿವಿಧ ವಿಭಾಗಗಳಲ್ಲಿ ಹಾಲಿವುಡ್​ ಹೆಸರುಗಳನ್ನು ಅಂತಿಮಗೊಳಿಸಲಾಗಿತ್ತು. ಆದ್ದರಿಂದ ಕಾರ್ಯಕ್ರಮಕ್ಕೆ ಹೆಚ್ಚು ರೇಟಿಂಗ್​ ದೊರೆಯುವುದರ ಜತೆಗೆ ಬಲವಾದ ವಿಮರ್ಶೆಗಳು ಬಂದಿದ್ದವು. ಕಾರ್ಯಕ್ರಮವೂ ಫೆಬ್ರವರಿ 9ರಂದು ಪ್ರಸಾರವಾಗಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts