More

    ಅನಾಥವಾದ ಪುರಾತನ ಶಿಲಾಶಾಸನಗಳು!

    | ಕಿಶೋರ ಮಿಠಾರಿ ಕಕ್ಕೇರಿ

    ಐತಿಹಾಸಿಕ ಪಳಿಯುಳಿಕೆಗಳು ಹಾಗೂ ಶಿಲಾ ಶಾಸನಗಳನ್ನು ರಕ್ಷಿಸಲು ಸರ್ಕಾರ ಎಲ್ಲ ತರಹ ಪ್ರಯತ್ನ ಮಾಡುತ್ತಿದೆ. ಅದಕ್ಕೆಂದೆ ಪ್ರತ್ಯೇಕವಾದ ಇಲಾಖೆಯನ್ನೂ ತೆರೆದಿದೆ. ಆದರೆ, ಕೆಲ ಐತಿಹಾಸಿಕ ಕುರುಹುಗಳು ನಿರ್ಲಕ್ಷೃದಿಂದ ನಶಿಸಿ ಹೋಗುತ್ತಿವೆ. ಅದಕ್ಕೆ ತಾಜಾ ಉದಾಹರಣೆ ಎಂಬಂತೆ ಸಮೀಪದ ಗೋಲಿಹಳ್ಳಿ ಗ್ರಾಮದಲ್ಲಿ ಶಿಲಾ ಶಾಸನಗಳು ಅನಾಥವಾಗಿ ಬಿದ್ದಿವೆ.

    ಗ್ರಾಮದ ತಂಗುದಾಣದ ಸಮೀಪದಲ್ಲಿ ಪುರಾತನ ಶಿಲಾ ಶಾಸನಗಳು, ಮಾಸ್ತಿ ಕಲ್ಲುಗಳು ಬಿದ್ದಿವೆ. ಗಿಡಗಂಟಿ ಆವರಿಸಿದ್ದು, ಅದೇ ಜಾಗದ ಸುತ್ತಮುತ್ತ ಜನರು ಶೌಚ ಮಾಡುತ್ತಿರುವುದು ಅತ್ಯಂತ ವಿಷಾದನೀಯ. ಪುರಾತನ ಹಿನ್ನೆಲೆಯುಳ್ಳ ಈ ಶಾಸನಗಳು ಯಾವುದೋ ಇತಿಹಾಸ ಹೇಳುತ್ತವೆ ಎಂಬುದು ನಿಸ್ಸಂಶಯ. ಅಂಥ ಮಹತ್ವದ ಪಳಿಯುಳಿಕೆಗಳು ಇತಿಹಾಸದ ಕಾಲಗರ್ಭದಲ್ಲಿ ಹೂತು ಹೋಗುತ್ತಿರುವುದು ದುರಂತ.

    ಅನಾಥವಾಗಿ ಬಿದ್ದಿರುವ ಶಿಲಾ ಶಾಸನಗಳನ್ನು ರಕ್ಷಿಸಬೇಕಾದ ಪ್ರಾಚ್ಯವಸ್ತು ಇಲಾಖೆ ಕೂಡ ಇತ್ತ ದೃಷ್ಟಿ ಹಾಯಿಸಿಲ್ಲ. ಇಲಾಖೆಯ ಗಮನಕ್ಕೆ ತರುವ ಪ್ರಯತ್ನಗಳೂ ನಡೆದಿಲ್ಲ. ಇನ್ನಾದರೂ ಈ ಅಮೂಲ್ಯ ಶಿಲಾಶಾಸನಗಳ ಮಹತ್ವ ಅರಿತು ಅವುಗಳಿಗೆ ಯೋಗ್ಯ ಸ್ಥಾನಮಾನ ಕಲ್ಪಿಸುವ ಅಗತ್ಯವಿದೆ. ಇಲ್ಲವಾದಲ್ಲಿ ಈಗಾಗಲೇ ಮಳೆ, ಚಳಿ, ಗಾಳಿಗೆ ಮೈಯೊಡ್ಡಿಯೂ ಶತಮಾನಗಟ್ಟಲೆ ಅಸ್ತಿತ್ವ ಉಳಿಸಿಕೊಂಡು ಬಂದಿರುವ ಇತಿಹಾಸದ ಕುರುಹುಗಳು, ಸೂಕ್ತ ರಕ್ಷಣೆ ಇಲ್ಲದೆ ಹೋದರೆ ನಶಿಸಿ ಹೋಗುತ್ತವೆ ಎನ್ನುವುದು ಇತಿಹಾಸ ಪ್ರೇಮಿಗಳ ಅಳಲು.

    ಬೆಳಗಾವಿ ಜಿಲ್ಲಾ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳಾದ ಪ್ರದೀಪ ಮಿಠಾರಿ, ರವಿ ಅಂಬಡಗಟ್ಟಿ, ಪಾಸ್ಕಲ್ ಸೋಜ್, ಬಸವರಾಜ ವೀರಾಪುರ, ರಾಮು ಚನ್ನಾಪುರಿ, ಬಾಳಗೌಡ ಪಾಟೀಲ, ದತ್ತಾ ಬೀಡಕರ, ಕೇಶವಮೂರ್ತಿ ಇತರರು ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

    ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಅನಾಥವಾಗಿ ಬಿದ್ದಿರುವ ಶಿಲಾ ಶಾಸನಗಳನ್ನು ರಕ್ಷಿಸಲು ಮನಸ್ಸು ಮಾಡಬೇಕಿದೆ. ಪ್ರಾಚ್ಯವಸ್ತು ಇಲಾಖೆ ಇತ್ತ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು.
    | ಪ್ರಕಾಶ ಮುರಗೋಡ ಜಿಲ್ಲಾ ಹಿತರಕ್ಷಣಾ ಸಮಿತಿ ಅಧ್ಯಕ್ಷ

    ಗೋಲಿಹಳ್ಳಿಯಲ್ಲಿ ಶಿಲಾ ಶಾಸನಗಳು ಅನಾಥವಾಗಿ ಬಿದ್ದಿರುವ ಸಂಗತಿ ಗಮನಕ್ಕೆ ಬಂದಿದೆ. ಪುರಾತತ್ವ ಇಲಾಖೆಗೆ ಲಿಖಿತ ಮನವಿ ಸಲ್ಲಿಸಿ ಶಿಲಾ ಶಾಸನಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು.
    | ಗಣೇಶ ಕೆ.ಎಸ್., ಪಿಡಿಒ, ಬೀಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts