More

    ಸಂಘಟಿತ ಹೋರಾಟವೇ ಸಮಸ್ಯೆಗೆ ಮದ್ದು

    ಹುಣಸೂರು: ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಘಟಿತ ಹೋರಾಟವೇ ಮದ್ದು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವಿ ಅಭಿಪ್ರಾಯಪಟ್ಟರು.

    ನಗರದ ಕಲ್ಕುಣಿಕೆಯಲ್ಲಿ ವಿಘ್ನೇಶ್ವರ ಪ್ರದೇಶ ಮಟ್ಟದ ಮಹಿಳಾ ಒಕ್ಕೂಟ ಮತ್ತು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಇಂದಿನ ಸಮಾಜದಲ್ಲಿ ಜಾಗೃತಿ ಮೂಡುತ್ತಿದ್ದರೂ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ದೇಶದಲ್ಲಿ ಪ್ರತಿ 4 ಗಂಟೆಗೆ ಒಂದು ಅತ್ಯಾಚಾರ, ಪ್ರತಿ ಎರಡು ನಿಮಿಷಕ್ಕೆ ದೌರ್ಜನ್ಯ ನಡೆಯುತ್ತಿದೆ. ದಿನದಲ್ಲಿ ಸರಾಸರಿ 86 ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ಎಲ್ಲ ಸಮಸ್ಯೆಗಳಿಗೆ ಸಂಘಟನಾತ್ಮಕ ಹೋರಾಟವೊಂದೇ ಉತ್ತರ ಎಂದರು.
    ಅಧ್ಯಕ್ಷೆ ಕೆ.ಸಿಆಶಾ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಹಿಳೆಯರು ವಸತಿ, ಶಿಕ್ಷಣ, ಆರೋಗ್ಯದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರ ನೋವಿಗೆ ಸ್ಪಂದಿಸುವ ಮತ್ತು ಪರಿಹಾರೋಪಾಯಗಳನ್ನು ಕಂಡುಹಿಡಿಯುವತ್ತ ಹೋರಾಟ ನಡೆಯಬೇಕು ಎಂದರು.

    ಮಹಿಳೆಯರಿಗೆ ಆಟೋಟ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉಪಾಧ್ಯಕ್ಷೆ ಪದ್ಮಾವತಿ, ನಗರಸಭೆ ಸದಸ್ಯೆ ಆಶಾ, ಜನವಾದಿ ಮಹಿಳಾ ಸಂಘಟನೆಯ ಕಾರ್ಯದರ್ಶಿ ಪ್ರೀತಿ ಪುನೀತ್ ಕುಮಾರ್, ಕೆ.ಎಸ್.ಗೀತಾ, ಭಾಗ್ಯ, ರಂಜಿತಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts