More

    ಸಮ ಸಮಾಜ ನಿರ್ಮಾಣಕ್ಕೆ ಸಂಘಟನೆ ಅಗತ್ಯ

    ಶ್ರೀರಂಗಪಟ್ಟಣ: ಸಮ ಸಮಾಜ ನಿರ್ಮಾಣಕ್ಕೆ ಸದಾ ಸಂಘಟಿಸಲು ಮುಂದಾಗುವ ಒಕ್ಕಲಿಗ ಸಮುದಾಯವನ್ನು ಕೆಲವರು ತಮ್ಮ ಸ್ವಾರ್ಥ ಸಾಧನೆಗೆ ನಿಂದಿಸುತ್ತಿದ್ದು, ಇದರ ವಿರುದ್ಧ ಪ್ರಬಲ ಧನಿ ಎತ್ತಲು ಒಕ್ಕಲಿಗರು ಒಗಟ್ಟಾಬೇಕಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಒಕ್ಕಲಿಗರ ಅಭಿವೃದ್ಧಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೃಷ್ಣೇಗೌಡ ಸಲಹೆ ನೀಡಿದರು.

    ಪಟ್ಟಣದ ರಾಮ ಮಂದಿರದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಹಿಂದುಳಿದ ಒಕ್ಕಲಿಗರ ಅಭಿವೃದ್ಧಿ ಸಂಘದಿಂದ ಕ್ಷೇತ್ರದ ಒಕ್ಕಲಿಗ ಸಮುದಾಯದ ಜನರಿಗೆ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸಮಾಜದಲ್ಲಿನ ಎಲ್ಲ ಜಾತಿ, ಧರ್ಮ, ವರ್ಗದ ಜನರೊಂದಿಗೆ ಮೇಲು-ಕೀಳು ಭಾವನೆ ಇರದೆ ಸಮಾನವಾಗಿ ಇರಲು ಒಕ್ಕಲಿಗ ಸಮುದಾಯ ಶ್ರಮಿಸುತ್ತಿದೆ. ಆದರೆ ಕೆಲವರು ತಮ್ಮ ಸ್ವಾರ್ಥ, ರಾಜಕೀಯ ಹಾಗೂ ಪ್ರಚಾರದ ದುರುದ್ದೇಶಕ್ಕೆ ಸಮುದಾಯದ ವಿರುದ್ಧ ಕಳಂಕ ಹೊರಿಸಲು ಮುಂದಾಗುತ್ತಿದ್ದಾರೆ. ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ಸಮಾಜ, ಸಮಾಜದ ಜನರು ಬದಲಾಗಿದ್ದಾರೆ. ಆದರೆ ಕೆಲ ಹೀನ ಮನಸ್ಥಿತಿಯವರು ಇಂತಹ ಆರೋಪಗಳಲ್ಲೇ ತಮ್ಮ ಬದುಕು ಕಂಡುಕೊಂಡಿದ್ದು, ಅವರಿಗೆ ನಮ್ಮ ಕುಲಬಾಂಧವರು ಸಂಘಟಿತರಾಗಿ ಮುಂದೆ ತಕ್ಕ ಪಾಠ ಕಲಿಸಬೇಕಿದೆ ಎಂದು ಕಿವಿಮಾತು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ರಾಜ್ಯಧ್ಯಕ್ಷ ಎಚ್.ಸೋಮಶೇಖರ್ ಮಾತನಾಡಿ, ಒಕ್ಕಲಿಗ ಸಮುದಾಯ ಈಗಲೂ ಆರ್ಥಿಕ, ಶೈಕ್ಷಣಿಕ ಹಾಗೂ ಸಮಾಜಿಕವಾಗಿ ಹಿಂದುಳಿದಿದೆ. ಸರಿಯಾದ ಮಳೆ, ಬೆಳೆ, ಉತ್ಪಾದಿಸಿದ ಉತ್ಪನ್ನಗಳಿಗೆ ಸೂಕ್ತ ಸಂರಕ್ಷಣೆ, ಮೌಲ್ಯ ಲಭಿಸದ ಕಾರಣ ರೈತರು ಒಕ್ಕಲುತನ ಮಾಡಲಾಗದೆ ದೂರವಾಗುತ್ತಿದ್ದಾರೆ. ನಮ್ಮ ಸಮುದಾಯದ ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಲ್ಲಿ ಲಭ್ಯವಿರುವ ಸಾಲ-ಸೌಲಭ್ಯ ದೊರಕಿಸುವ ಕೆಲಸವಾಗಬೇಕು. ನಮ್ಮವರು ಸಹ ಉತ್ತಮ ಜೀವನ ನಿರ್ವಹಣೆ ನಡೆಸಲು ನಾವೇ ಒಗ್ಗಟ್ಟುಗೊಳ್ಳಬೇಕಿದೆ ಎಂದರು.

    ಸಂಘದ ಮಹಿಳಾ ಘಟಕದ ರಾಜ್ಯಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಹುಚ್ಚೇಗೌಡ, ಪ್ರಚಾರ ಸಮಿತಿ ಅಧ್ಯಕ್ಷ ಮಂಜೇಗೌಡ, ಸಂಘಟನಾ ಕಾರ್ಯದರ್ಶಿ ಈಶ್ವರೇಗೌಡ, ಕಾನೂನು ಸಲಹೆಗಾರ ಮಹಾಬಲೇಗೌಡ, ಗೌರವ ಅಧ್ಯಕ್ಷ ಮೋನಪ್ಪಗೌಡ, ತಿಪಟೂರು ತಾಲೂಕು ಅಧ್ಯಕ್ಷ ಪ್ರಕಾಶ್, ಮಂಡ್ಯ ಜಿಲ್ಲಾ ಮಹಿಳಾ ಯೂತ್ ಅಧ್ಯಕ್ಷೆ ನಾಗರತ್ನಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಶಿಧರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts