More

  ಸರ್ಕಾರಕ್ಕೆ ಬುದ್ಧಿ ಕಲಿಸಲು ಸಂಘಟನೆ ಅನಿವಾರ್ಯ

  ಗುಂಡ್ಲುಪೇಟೆ: ಕೃಷಿ ಸಂಸ್ಕೃತಿಯನ್ನು ಹಾಳು ಮಾಡುತ್ತಿರುವ ಸರ್ಕಾರಗಳಿಗೆ ಬುದ್ಧಿ ಕಲಿಸಲು ಸಂಘಟನೆಗೊಳ್ಳುವುದು ಅನಿವಾರ್ಯ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್ ಹೇಳಿದರು.

  ತಾಲೂಕಿನ ರಾಘವಾಪುರ ಗ್ರಾಮದಲ್ಲಿ ಶುಕ್ರವಾರ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು.

  ಪ್ರಸ್ತುತ ದೇಶದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ರೈತ ವಿರೋಧಿ ಕಾನೂನನ್ನು ಜಾರಿಗೆ ತರುತ್ತಿದೆ. ಇದರಿಂದ ರೈತರ ಸ್ವಾವಲಂಬನೆಗೆ ಅವಕಾಶ ಸಿಗುತ್ತಿಲ್ಲ. ಈಗಲೂ ನಮ್ಮ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಟ್ಟರೆ ನಾವೇ ಸರ್ಕಾರಗಳಿಗೆ ಸಾಲ ಕೊಡುವ ಮಟ್ಟದ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಹೇಳಿದರು.

  ಐದು ಕೆಜಿ ಅಕ್ಕಿ ಕೊಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಿತ್ತಾಡುತ್ತಿವೆ. ದಿನದಿಂದ ದಿನಕ್ಕೆ ಭೂಮಿಯ ತಾಪಮಾನ ಏರಿಕೆಯಾಗುತ್ತಿದ್ದು, ನಮ್ಮ ಭೂಮಿಯನ್ನು ಉಳಿಸಿಕೊಳ್ಳುವುದರ ಜತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕಿದೆ. ನಾವು ಬೆಳೆದ ಪದಾರ್ಥಗಳನ್ನು ಮೌಲ್ಯವರ್ಧನೆ ಮಾಡಿ ಮಾರುಕಟ್ಟೆಯನ್ನು ಹುಡುಕಿಕೊಳ್ಳಬೇಕು. ಇದಕ್ಕಾಗಿ ರೈತ ಸಂಘ ಹಗಲಿರುಳು ಕೆಲಸ ಮಾಡುತ್ತದೆ ಎಂದರು.

  ಸಂಘಟನೆಯ ತಾಲೂಕು ಅಧ್ಯಕ್ಷ ವೀರನಪುರದ ನಾಗಪ್ಪ, ಕಾರ್ಯದರ್ಶಿ ಮಂಚಳ್ಳಿ ಮಣಿ, ಮುಖಂಡರಾದ ಬೆಟ್ಟದ ಮಾದಳ್ಳಿ ಷಣ್ಮುಖಸ್ವಾಮಿ, ಉತ್ತಿಂಗೇರಿ ಹುಂಡಿ ಮಹೇಶ್, ಶ್ರೀನಿವಾಸ್, ಸ್ವಾಮಿ, ಪ್ರಕಾಶ್ ಹಲವರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts