More

    ಐಪಿಎಲ್ ಆರೆಂಜ್ ಕ್ಯಾಪ್​​ಗೆ ನಿಕಟ ಪೈಪೋಟಿ, ರಾಹುಲ್‌ಗೆ ಮೂವರಿಂದ ಸವಾಲು

    ಬೆಂಗಳೂರು: ಆರ್‌ಸಿಬಿ ತಂಡ ಐಪಿಎಲ್‌ನಿಂದ ಹೊರಬಿದ್ದಿರುವ ನಡುವೆಯೂ ವೇಗಿ ಹರ್ಷಲ್ ಪಟೇಲ್ ಈ ಬಾರಿ ಪರ್ಪಲ್ ಕ್ಯಾಪ್ ಸಂಪಾದಿಸುವುದು ಬಹುತೇಕ ಖಚಿತವೆನಿಸಿದೆ. ಹರ್ಷಲ್ ಟೂರ್ನಿಯಲ್ಲಿ ಸರ್ವಾಧಿಕ 32 ವಿಕೆಟ್ ಕಬಳಿಸಿದ್ದರೆ, 2ನೇ ಸ್ಥಾನದಲ್ಲಿರುವ ಡೆಲ್ಲಿ ವೇಗಿ ಆವೇಶ್ ಖಾನ್ 23 ವಿಕೆಟ್ ಗಳಿಸಿದ್ದಾರೆ. 9 ವಿಕೆಟ್ ಹಿನ್ನಡೆಯಲ್ಲಿರುವ ಅವರು, ಹರ್ಷಲ್‌ರನ್ನು ಹಿಂದಿಕ್ಕುವುದು ಅನುಮಾನವೆನಿಸಿದೆ. ಆದರೆ ಟೂರ್ನಿಯ ಸರ್ವಾಧಿಕ ರನ್ ಗಳಿಸಿದ ಬ್ಯಾಟರ್‌ಗೆ ನೀಡಲಾಗುವ ಆರೆಂಜ್ ಕ್ಯಾಪ್ ಈ ಬಾರಿ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.

    ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್ ಸದ್ಯಕ್ಕೆ 626 ರನ್‌ಗಳೊಂದಿಗೆ ಆರೆಂಜ್ ಕ್ಯಾಪ್ ಒಡೆಯರಾಗಿದ್ದಾರೆ. ಆದರೆ ರಾಹುಲ್ ಈಗಾಗಲೆ ಟೂರ್ನಿಯಿಂದ ಹೊರಬಿದ್ದಿದ್ದರೆ, ಅವರಿಗೆ ಸಿಎಸ್‌ಕೆ ತಂಡದ ಋತುರಾಜ್ ಗಾಯಕ್ವಾಡ್ (603) ಮತ್ತು ಫಾಫ್​ ಡು ಪ್ಲೆಸಿಸ್ (547) ನಿಕಟ ಪೈಪೋಟಿ ಒಡ್ಡುತ್ತಿದ್ದಾರೆ. ಡೆಲ್ಲಿ ತಂಡದ ಶಿಖರ್ ಧವನ್ (551) ಕೂಡ ರೇಸ್‌ನಲ್ಲಿದ್ದಾರೆ. ಫೈನಲ್‌ನಲ್ಲಿ ಋತುರಾಜ್ 24 ಮತ್ತು ಪ್ಲೆಸಿಸ್ 80 ರನ್ ಗಳಿಸಿದರೆ ರಾಹುಲ್‌ರನ್ನು ಹಿಂದಿಕ್ಕುವ ಅವಕಾಶ ಹೊಂದಿದ್ದಾರೆ.

    ಡೆಲ್ಲಿ ತಂಡ ಫೈನಲ್‌ಗೇರಿದರೆ ಧವನ್‌ಗೆ ಟೂರ್ನಿಯಲ್ಲಿ ಇನ್ನೂ 2 ಪಂದ್ಯ ಆಡುವ ಅವಕಾಶ ಲಭಿಸಲಿದ್ದು, 76 ರನ್ ಗಳಿಸಿದರೆ ಅವರೂ ರಾಹುಲ್‌ರನ್ನು ಹಿಂದಿಕ್ಕಲಿದ್ದಾರೆ. ಹೀಗಾಗಿ ರಾಹುಲ್ ಬಳಿಯೇ ಆರೆಂಜ್ ಕ್ಯಾಪ್ ಉಳಿಯುವುದೇ ಅಥವಾ ಈ ಮೂವರ ಪೈಕಿ ಯಾರಾದರೂ ಒಲಿಸಿಕೊಳ್ಳುವರೇ ಎಂಬುದು ಕುತೂಹಲ ಮೂಡಿಸಿದೆ.

    ಪಂಜಾಬ್ ಕಿಂಗ್ಸ್ ತೊರೆಯಲಿದ್ದಾರೆ ಕೆಎಲ್ ರಾಹುಲ್! ಹೊಸ ತಂಡ ಯಾವುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts