More

    ಟೋಯಿಂಗ್ ವಾಹನಕ್ಕೆ ಅಡ್ಡಿ ಪ್ರಕರಣ ದಾಖಲು

    ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ ಪರಿಸರದಲ್ಲಿ ರಸ್ತೆ ಬದಿ ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಟೋಯಿಂಗ್ ಮಾಡಿ ಸಾಗಿಸುತ್ತಿದ್ದಾಗ ದ್ವಿಚಕ್ರ ವಾಹನದ ಮಾಲೀಕ ಬಂದು ಟೋಯಿಂಗ್ ವಾಹನದ ಮುಂಭಾಗದಲ್ಲಿ ನಿಂತು ತಡೆ ಒಡ್ಡಿದ್ದು, ಅವರ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಂಚಾರಿ ಪಶ್ಚಿಮ ಠಾಣೆಯ ಎಎಸ್‌ಐ ಸೂರಜ್ ಶೆಟ್ಟಿ ನೀಡಿದ ದೂರಿನನ್ವಯ ದ್ವಿಚಕ್ರ ವಾಹನದ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಟೋಯಿಂಗ್ ವಾಹನದಲ್ಲಿ ಈ ದ್ವಿಚಕ್ರ ವಾಹನವನ್ನು ರಸ್ತೆ ಬದಿಯಿಂದ ಎತ್ತಿ ಸಾಗಿಸುತ್ತಿರುವ ಹಾಗೂ ಈ ಸಂದರ್ಭ ವಾಹನದ ಮಾಲೀಕ ಬಂದು ತಡೆ ಒಡ್ಡಿರುವ ದೃಶ್ಯದ ವಿಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

    ದ್ವಿಚಕ್ರ ವಾಹನದ ಮಾಲೀಕ ಬಂದು ಟೋಯಿಂಗ್ ವಾಹನಕ್ಕೆ ತಡೆ ಒಡ್ಡಿದ ಸಂದರ್ಭ ಹಲವಾರು ಮಂದಿ ಜಮಾಯಿಸಿ ಆತನಿಗೆ ಸಾಥ್ ನೀಡಿದ್ದರು. ಪಾಂಡೇಶ್ವರ ಪಿಎಸ್‌ಐ ಅನಂತ ಮುರ್ಡೇಶ್ವರ ಹಾಗು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts