More

    ರಾಜ್ಯರಾಜಧಾನಿಯಲ್ಲಿ ಪೊಲೀಸರ ಜತೆ ಕೆಲಸ ಮಾಡುವಾಸೆಯೆ?- ಇಲ್ಲಿದೆ ಅವಕಾಶ!

    ಬೆಂಗಳೂರು: ನಗರ ಪೊಲೀಸ್ ಇಲಾಖೆಗೆ ಸ್ವಯಂಸೇವಕರು ಬೇಕಾಗಿದ್ದಾರೆ. ಈ ಮೊದಲು ಲಾಕ್​ಡೌನ್ 1 ಮತ್ತು 2 ಘೋಷಣೆ ಮಾಡಿದಾಗ 20 ಕಂಟೇನ್ಮೆಂಟ್ ಜೋನ್ ಇದ್ದವು. ಇದೀಗ ಅವುಗಳ ಸಂಖ್ಯೆ 2 ಸಾವಿರ ಆಗಿದೆ. ಪ್ರತಿ ಠಾಣೆಗೆ 18 ದ 40 ವರ್ಷದ ನಡುವಿನ 100 ಯಂಸೇವಕರ ಅಗತ್ಯವಿದೆ.

    ವಾರದಲ್ಲಿ 10 ಗಂಟೆ ಅವರ ಸೇವೆ ಪಡೆಯಲಾಗುತ್ತದೆ. ಅವರಿಗೆ ಜಾಕೆಟ್ ಮತ್ತು ಕ್ಯಾಪ್ ನೀಡಲಾಗುತ್ತದೆ. ಲಾಠಿ ಕೊಡುವುದಿಲ್ಲ. ಪೊಲೀಸರ ಜತೆಗಿದ್ದು, ಬ್ಯಾರಿಕೇಡ್ ಅಳವಡಿಸುವುದು, ಣೆಗಳಲ್ಲಿ ಹೆಲ್ಪ್ ಡೆಸ್ಕ್, ಬರಹ ಸೇವೆಗೆ ನಿಯೋಜಿಸಲಾಗುತ್ತದೆ.ಇದಕ್ಕಾಗಿ ವೆಬ್​ಸೈಟ್ (www.bcp.gov.in) ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

    ಇದನ್ನೂ ಓದಿ: ಕರೊನಾಕ್ಕೆ ಹೆದರುವ ಅಗತ್ಯವಿಲ್ಲ..ಅದು ಇತರ ವೈರಾಣುಗಳಷ್ಟು ಪರಿಣಾಮಕಾರಿಯಲ್ಲ: ಡಾ.ಗಿರಿಧರ್​ ಕಜೆ

    ಅನಗತ್ಯ ಸಂಚರಿಸಿದರೆ ಕೇಸ್: ಲಾಕ್​ಡೌನ್ ಜಾರಿಯಾಗಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ವಿಶೇಷ ಪಾಸ್ ನೀಡಲಾಗುವುದಿಲ್ಲ. ಅನಗತ್ಯವಾಗಿ ಹೊರಬಂದರೆ ಕೇಸ್ ದಾಖಲಿಸಲಾಗುವುದು ಎಂದು ಆಯುಕ್ತ ಭಾಸ್ಕರ್​ರಾವ್ ಎಚ್ಚರಿಕೆ ನೀಡಿದ್ದಾರೆ.

    ಕೇಂದ್ರ ಸರ್ಕಾರದಿಂದ ನಿಗದಿ ಮಾಡಿರುವ ವಿಮಾನ ಮತ್ತು ರೈಲು ಟಿಕೆಟ್ ಇರುವರಿಗೆ ಮಾತ್ರ ಸಂಚಾರಕ್ಕೆ ಅವಕಾಶವಿರಲಿದೆ. ಬಿಎಂಟಿಸಿ, ಕೆಎಸ್ಆರ್​ಟಿಸಿ ಬಸ್​ಗಳ ಸೇವೆ ಇರುವುದಿಲ್ಲ. ಲಾಕ್​ಡೌನ್ ವೇಳೆ ಸಂಚಾರಕ್ಕೆ ಯಾವುದೇ ವಿಶೇಷ ಪಾಸ್ ವಿತರಿಸುವುದಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

    ಬೆಳಗ್ಗೆ 5 ರಿಂದ ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಆಪ್ ಆಧಾರಿತ ಆಹಾರ ಸೇವೆ ರಾತ್ರಿ 8 ಗಂಟೆವರೆಗೆ ಸಿಗಲಿದೆ. ಔಷಧ ಅಂಗಡಿ ಹೊರತು ಎಲ್ಲ ಸೇವೆ ಬಂದ್ ಆಗಲಿವೆ. ಹೋಟೆಲ್ ಸೇವೆ ರಾತ್ರಿ 8 ಗಂಟೆವರೆಗೂ ಸಿಗಲಿದ್ದು, ಅಲ್ಲಿನ ಸಿಬ್ಬಂದಿ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಬೇಕು ಎಂದು ತಿಳಿಸಿದರು.

    ಹಾಸಿಗೆ ಮಾರಾಟಕ್ಕೆ ಹೊರಟು 91,000 ರೂಪಾಯಿ ಕಳ್ಕೊಂಡ್ರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts