More

    ನಡೆಯದ ಖೋಖೋ-ಕಬಡ್ಡಿ ಫೈನಲ್ ಆಟ; 15 ದಿನವಾದರೂ ಪಂದ್ಯ ಆಯೋಜನೆಗೆ ನಿರಾಸಕ್ತಿ

    ಯಲಬುರ್ಗಾ: ಪ್ರೌಢಶಾಲೆಗಳ ವಲಯಮಟ್ಟದ ಕ್ರೀಡಾಕೂಟ ನಡೆದು 15 ದಿನ ಕಳೆದರೂ ಖೋ ಖೋ ಹಾಗೂ ಕಬಡ್ಡಿ ಫೈನಲ್ ಪಂದ್ಯ ಇನ್ನೂ ನಡೆಸಿಲ್ಲ. ಇದು ಸೆಮಿಫೈನಲ್‌ನಲ್ಲಿ ಗೆದ್ದ ತಂಡದ ಆಟಗಾರರು ಹಾಗೂ ಕ್ರೀಡಾಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
    ಹಿರೇಅರಳಿಹಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ(ಪ್ರೌಢ ವಿಭಾಗ)ಲ್ಲಿ ಜು.29, 30ರಂದು ಪ್ರೌಢ ಶಾಲೆಗಳ ಕ್ರೀಡಾಕೂಟ ಆಯೋಜಿಸಲಾಗಿತ್ತು. ಒಟ್ಟು 24 ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಖೋಖೋ, ಕಬಡ್ಡಿ, ಥ್ರೋಬಾಲ್, ವಾಲಿಬಾಲ್, ಓಟದ ಸ್ಪರ್ಧೆ, ಗುಂಡು, ಚಕ್ರ ಎಸೆತ ಸೇರಿದಂತೆ ವೈಯಕ್ತಿಕ ಮತ್ತು ಗುಂಪು ಆಟಗಳನ್ನು ಆಡಿಸಲಾಗಿದೆ. ಆದರೆ ಸೆಮಿ ಫೈನಲ್‌ನಲ್ಲಿ ಗೆದ್ದು ಫೈನಲ್ ಪ್ರವೇಶಿಸಿದ ಖೋ ಖೋ ಹಾಗೂ ಕಬಡ್ಡಿ ತಂಡಗಳನ್ನು ಈವರೆಗೆ ಆಡಿಸದೇ ವಿಳಂಬ ಮಾಡಲಾಗುತ್ತಿದೆ.
    ಫೈನಲ್ ಪ್ರವೇಶಿಸಿದ ತಂಡಗಳು: ಪ್ರೌಢಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ಕಬಡ್ಡಿ ಆಟದಲ್ಲಿ ತಾಳಕೇರಿ-ಗಾಣಧಾಳ ಸೆಮಿಫೈನಲ್ ಗೆದ್ದು ಫೈನಲ್ ಪ್ರವೇಶಿಸಿದೆ. ಇನ್ನೂ ತಾಳಕೇರಿ-ಹಿರೇಅರಳಿಹಳ್ಳಿ ಬಾಲಕಿಯರ ಖೋಖೋ ತಂಡ ಫೈನಲ್‌ನಲ್ಲಿ ಟೈ ಆಗಿದೆ. ವಲಯ ಮಟ್ಟದ ಕ್ರೀಡಾಕೂಟ ನಡೆದು 15 ದಿನ ಕಳೆದರೂ ಫೈನಲ್ ಆಡಿಸದಿರುವುದು ಕ್ರೀಡಾಪಟುಗಳಲ್ಲಿ ನಿರಾಸೆ ಮೂಡಿಸಿದೆ.

    ಖೋಖೋ ಹಾಗೂ ಕಬಡ್ಡಿ ಅಂತಿಮ ಪಂದ್ಯವನ್ನು ಆಡಿಸದೇ ದೈಹಿಕ ಶಿಕ್ಷಣ ಅಧಿಕಾರಿಗಳು ಮತ್ತು ಶಿಕ್ಷಕರು ವಿಳಂಬ ಅನುಸರಿಸುತ್ತಿರುವುದು ಸರಿಯಲ್ಲ. ಹೀಗಾದರೆ ಮುಂದೆ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಸಮಸ್ಯೆಯಾಗುತ್ತದೆ. ಕೂಡಲೇ ಫೈನಲ್ ಆಡಿಸಿ ತಾಲೂಕು ಮಟ್ಟಕ್ಕೆ ತಯಾರಿ ನಡೆಸಲು ಅನುವು ಮಾಡಿಕೊಡಬೇಕೆಂದು ಕ್ರೀಡಾಪಟುಗಳ ಒತ್ತಾಯವಾಗಿದೆ.

    ಹಿರೇಅರಳಿಹಳ್ಳಿಯಲ್ಲಿ ನಡೆದ ಪ್ರೌಢಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಫೈನಲ್ ಪ್ರವೇಶಿಸಿದ ಖೋಖೋ ಹಾಗೂ ಕಬಡ್ಡಿ ತಂಡಗಳನ್ನು ಶೀಘ್ರದಲ್ಲಿ ಆಡಿಸಲಾಗುವುದು. ಸಮಯದ ಅಭಾವ, ಮೈದಾನ ಕೊರತೆಯಿಂದ ವಿಳಂಬವಾಗಿದೆ. ಫೈನಲ್‌ನಲ್ಲಿ ಟೈ ಆದ ಹಿರೇಅರಳಿಹಳ್ಳಿ-ತಾಳಕೇರಿ ಬಾಲಕಿಯರ ಖೋಖೋ ಪಂದ್ಯವನ್ನು ಸಡನ್‌ಡೆತ್ ಆಟ ಆಡಿಸಲು ನಿರ್ಣಯಿಸಲಾಗಿದೆ.
    | ವೀರೇಶ ಅಂಗಡಿ
    ದೈಹಿಕ ಶಿಕ್ಷಣಾಧಿಕಾರಿ, ಯಲಬುರ್ಗಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts