More

    ಬ್ಯಾಂಕ್ ಯೂನಿಯನ್ ಸ್ಟ್ರೈಕ್ ಕಾರಣಕ್ಕೆ ಎರಡು ದಿನ ಬ್ಯಾಂಕಿಂಗ್ ವಹಿವಾಟಿಗೆ ಅಡಚಣೆ ಆಗಬಹುದು ಎಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

    ನವದೆಹಲಿ: ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್​ಗಳು ಕೆಲವು ಜನವರಿ 31 ಮತ್ತು ಫೆಬ್ರವರಿ 1ಕ್ಕೆ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಕಾರಣ ಆ ಎರಡು ದಿನಗಳಲ್ಲಿ ಬ್ಯಾಂಕಿಂಗ್ ವಹಿವಾಟು ತೊಂದರೆಗೀಡಾಗಬಹುದು ಎಂದು ದೇಶದ ಮುಂಚೂಣಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ತಿಳಿಸಿದೆ.

    ತನ್ನ ಎಲ್ಲ ಶಾಖೆಗಳಲ್ಲಿ ಸಹಜ ಬ್ಯಾಂಕಿಂಗ್ ವಹಿವಾಟಿಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದಿರುವ ಎಸ್​ಬಿಐ, ಮುಷ್ಕರದ ಪರಿಣಾಮ ಇತರೆ ಬ್ಯಾಂಕುಗಳಂತೆ ನಮ್ಮಲ್ಲೂ ಆಗಲಿದೆ ಎಂದು ಹೇಳಿಕೊಂಡಿದೆ.

    ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್​ (ಐಬಿಎ) ಜತೆಗೆ ವೇತನ ಪರಿಷ್ಕರಣೆ ಸಂಬಂಧದ ಮಾತುಕತೆ ಫಲಪ್ರದವಾಗದ ಕಾರಣ ಯೂನಿಯನ್​ಗಳು ಮುಷ್ಕರಕ್ಕೆ ಕರೆ ನೀಡಿವೆ.ಹೀಗಾಗಿ ಐಬಿಎ ನೀಡಿರುವ ಸಲಹೆ ಮೇರೆಗೆ ನಾವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಎಸ್​ಬಿಐ ಹೇಳಿದೆ.

    ಒಂಭತ್ತು ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್​ಗಳ ಕನ್ಸೋರ್ಟಿಯಂ ಆಗಿರುವ ಯುನೈಟೆಡ್ ಫಾರಂ ಆಫ್ ಬ್ಯಾಂಕ್ ಯೂನಿಯನ್ಸ್​ ಈ ಮುಷ್ಕರಕ್ಕೆ ಕರೆ ನೀಡಿರುವಂಥದ್ದು. ಇದರಲ್ಲಿ, ಆಲ್​ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್, ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕಾನ್ಫೆಡರೇಷನ್, ನ್ಯಾಷನಲ್ ಕಾನ್ಫಡರೇಷನ್​ ಆಫ್ ಬ್ಯಾಂಕ್ ಎಂಪ್ಲಾಯೀಸ್, ಆಲ್ ಇಂಡಿಯಾ ಬ್ಯಅಂಕ್ ಆಫೀಸರ್ಸ್ ಅಸೋಸಿಯೇಷನ್, ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್​ ಆಫ್ ಇಂಡಿಯಾ, ಇಂಡಿಯನ್ ನ್ಯಾಷನಲ್ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್, ಇಂಡಿಯನ್ ನ್ಯಾಷನಲ್ ಬ್ಯಾಂಕ್ ಆಫೀಸರ್ಸ್ ಕಾಂಗ್ರೆಸ್​, ನ್ಯಾಷನಲ್ ಆರ್ಗನೈಸೇಷನ್​ ಆಫ್ ಬ್ಯಾಂಕ್ ವರ್ಕರ್ಸ್, ನ್ಯಾಷನಲ್ ಆರ್ಗನೈಸೇಷನ್ ಆಫ್ ಬ್ಯಾಂಕ್ ಆಫೀಸರ್ಸ್​ ಈ ಕನ್ಸೋರ್ಟಿಯಂನಲ್ಲಿ ಇವೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts