More

    ಆಪರೇಷನ್ ಅಜಯ್; ಇಸ್ರೇಲ್‌ನಿಂದ ದೆಹಲಿಗೆ ಬಂದಿಳಿದ 143 ಮಂದಿ

    ನವದೆಹಲಿ: ಕೇಂದ್ರ ಸರ್ಕಾರದ ‘ಆಪರೇಷನ್ ಅಜಯ್’ ಕಾರ್ಯಾಚರಣೆ ಭಾಗವಾಗಿ ಇಸ್ರೇಲ್ ನಿಂದ ಸೋಮವಾರ ಇಬ್ಬರು ನೇಪಾಳಿಯನ್ನರು ಸೇರಿದಂತೆ 143 ಭಾರತೀಯರನ್ನು ಹೊತ್ತ ವಿಶೇಷ ವಿಮಾನವು ಭಾನುವಾರ ದೆಹಲಿಗೆ ಬಂದಿಳಿಯಿತು.

    ಇದನ್ನೂ ಓದಿ: ಗಾಜಾ ಮೇಲೆ ದಾಳಿ ತೀವ್ರಗೊಳಿಸಿದ ಇಸ್ರೇಲ್​: ಹಮಾಸ್‌ ಹಿರಿಯ ಕಮಾಂಡರ್ ಮುಹಮ್ಮದ್ ಕಟಮಾಶ್, 70 ಪ್ಯಾಲೆಸ್ತೇನಿಯನ್ನರು ಸಾವು

    ಹಮಾಸ್​ ಉಗ್ರರು ಅ.7ರಂದು ಇಸ್ರೇಲ್ ಮೇಲೆ ನಡೆಸಿದ ದಾಳಿಯ ನಂತರ ಸ್ವದೇಶಕ್ಕೆ ಮರಳಲು ಬಯಸುವ ಭಾರತೀಯರಿಗೆ ಅ.12ರಂದು ಪ್ರಾರಂಭಿಸಲಾದ ಆಪರೇಷನ್ ಅಜಯ್‌ನ ಭಾಗವಾಗಿ ಇದು ಆರನೇ ವಿಮಾನ ಭಾರತಕ್ಕೆ ಯಶಸ್ವಿಯಾಗಿ ಬಂದಿದೆ.

    ಈ ವಿಮಾನದಲ್ಲಿ ಇಬ್ಬರು ನೇಪಾಳದ ನಾಗರಿಕರು ಸಹ ಬಂದಿದ್ದಾರೆ ‘ಆಪರೇಷನ್ ಅಜಯ್ ಮುಂದುವರಿಯುತ್ತದೆ. ಈ ವಿಮಾನವು ಟೆಲ್ ಅವೀವ್‌ನಿಂದ ಬಂದಿದೆ ಎಂದು ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ರಾಯಭಾರ ಕಚೇರಿಯು ಎಲ್ಲರಿಗೂ ಸುರಕ್ಷಿತ ಪ್ರಯಾಣವನ್ನು ಬಯಸುತ್ತದೆ’ ಎಂದು ಅಲ್ಲಿನ ಭಾರತೀಯ ರಾಯಭಾರ ಕಚೇರಿಯು ಟ್ವೀಟ್ ಮಾಡಿದೆ.
    ಕಳೆದ ಮಂಗಳವಾರ 5ನೇ ವಿಮಾನ ಇಸ್ರೇಲ್‌ನಿಂದ ಭಾರತಕ್ಕೆ ಬಂದಿತ್ತು. ವಿಮಾನದಲ್ಲಿ 18ನೇಪಾಳ ಪ್ರಜೆಗಳಿಗೆ ಬರಲು ಅವಕಾಶ ಕಲ್ಪಿಸಲಾಗಿತ್ತು. ಆಗ 286 ಭಾರತೀಯರು ವಾಪಸ್ಸಾಗಿದ್ದರು.

    ಇಸ್ರೇಲ್‌ನಲ್ಲಿ ಸಿಲುಕಿ, ಅಲ್ಲಿಂದ ವಾಪಸಾಗಲು ಬಯಸುವ ಭಾರತೀಯರಿಗೆ ಮರಳಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ಪ್ರಾರಂಭಿಸಿದ ‘ಆಪರೇಷನ್ ಅಜಯ್’ ಅಡಿಯಲ್ಲಿ ಒಟ್ಟು ನಾಲ್ಕು ವಿಮಾನಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ತನಕ ಸುಮಾರು 1,200 ಪ್ರಯಾಣಿಕರೊಂದಿಗೆ ಆರು ವಿಮಾನಗಳು ದೆಹಲಿಗೆ ಬಂದಿಳಿದಿವೆ.

    ಗಾಜಾ-ಲೆಬನಾನ್ ಮೇಲೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್; ಉನ್ನತ ಮಟ್ಟದ ಸಭೆ ಕರೆದ ನೆತನ್ಯಾಹು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts