More

    ಭಯೋತ್ಪಾದನೆ ಅಂತ್ಯಗೊಳಿಸುವುದಕ್ಕೆ ಇರುವುದು ಇದು ಒಂದೇ ದಾರಿ: ಜನರಲ್​ ಬಿಪಿನ್​ ರಾವತ್​

    ನವದೆಹಲಿ: ಕೆಲವು ರಾಷ್ಟ್ರಗಳ ಪ್ರಾಯೋಜಕತ್ವ ಇರೋವರೆಗೂ ಭಯೋತ್ಪಾದನೆ ಹಾಗೇ ಉಳಿದುಕೊಂಡಿರುತ್ತದೆ. 9/11 ಉಗ್ರ ದಾಳಿಯ ನಂತರ ಅಮೆರಿಕ ಕೈಗೊಂಡ ಕಾರ್ಯಾಚರಣೆ ಮಾದರಿಯೊಂದೇ ಭಯೋತ್ಪಾದನೆಯನ್ನು ಕೊನೆಗಾಣಿಸಲು ಇರುವ ಒಂದೇ ಒಂದು ಮಾರ್ಗವಾಗಿದೆ ಎಂದು ಮೂರು ಸೇನಾ ಪಡೆಗಳ ಮುಖ್ಯಸ್ಥ ಜನರಲ್​ ಬಿಪಿನ್​ ರಾವತ್​ ತಿಳಿಸಿದ್ದಾರೆ.

    ಕೆಲವು ರಾಷ್ಟ್ರಗಳು ಭಯೋತ್ಪಾದಕರನ್ನು ಬದಲಿ ಪ್ರತಿನಿಧಿಗಳಾಗಿ ಬಳಸಿಕೊಳ್ಳುತ್ತಿದ್ದು, ಅವರಿಗೆ ಶಶ್ತ್ರಾಸ್ತ್ರಗಳು ದೊರೆಯುವಂತೆ ಮಾಡಿ, ದುಷ್ಕೃತ್ಯವನ್ನು ಎಸಗಲು ಅವರಿಗೆ ನಿಧಿಯನ್ನು ನೀಡುತ್ತಿದ್ದಾರೆ. ಎಲ್ಲಿಯವರೆಗೆ ಇದು ಮುಂದುವರಿಯುತ್ತದೆಯೋ ಅಲ್ಲಿಯವರೆಗೂ ಭಯೋತ್ಪಾದನೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾವತ್​ ಅಭಿಪ್ರಾಯಪಟ್ಟರು.

    ನಾವು ಭಯೋತ್ಪಾದನೆಯನ್ನು ಕೊನೆಗಾಣಿಸಲೇಬೇಕಾಗಿದೆ. ಅದು ಸಾಧ್ಯವಾಗಬೇಕಾದರೆ 9/11 ದಾಳಿಯ ನಂತರ ಅಮೆರಿಕ ಆರಂಭಿಸಿದ ಕಾರ್ಯಾಚರಣೆ ರೀತಿಯಿಂದಲೇ ಮಾತ್ರ ಸಾಧ್ಯವೆಂದರು. ಭಯೋತ್ಪಾದನೆ ವಿರುದ್ಧ ಜಾಗತಿಕ ಯುದ್ಧ ನಡೆಯಬೇಕಾಗಿದೆ. ಉಗ್ರರನ್ನು ಏಕಾಂಗಿಗಳನ್ನಾಗಿ ಮಾಡಬೇಕಾಗಿದೆ. ಭಯೋತ್ಪಾದನೆಗೆ ಪ್ರಾಯೋಜಕತ್ವ ನೀಡುವವರ ಮೇಲೆಯೂ ಸೂಕ್ತ ಕ್ರಮದ ಅವಶ್ಯಕತೆ ಇದೆ ಎಂದು ಆಗ್ರಹಿಸಿದರು.

    ಪ್ರಾಯೋಜಕತ್ವ ನೀಡುವ ರಾಷ್ಟ್ರಗಳ ಮೇಲೆ ಕ್ರಮಕೈಗೊಳ್ಳಲು ಫೈನಾನ್ಶಿಯಲ್​ ಆ್ಯಕ್ಷನ್​ ಟಾಸ್ಕ್​ ಫೋರ್ಸ್​(ಎಫ್​ಎಟಿಎಫ್​)ನ ಕಪ್ಪುಪಟ್ಟಿಯು ಒಳ್ಳೆಯ ಸಾಧನವಾಗಿದೆ. ಅದರಲ್ಲಿರುವ ರಾಷ್ಟ್ರಗಳನ್ನು ಗಂಭೀರವಾಗಿ ಪರಿಗಣಿಸಿ ಅವುಗಳನ್ನು ರಾಜತಾಂತ್ರಿಕವಾಗಿ ಪ್ರತ್ಯೇಕಗೊಳಿಸಬೇಕು ಎಂದು ಒತ್ತಾಯಿಸಿದರು. ಆದರೆ, ಎಲ್ಲಿಯೂ ಪಾಕಿಸ್ತಾನದ ಹೆಸರನ್ನು ಹೇಳದೇ ಪರೋಕ್ಷವಾಗಿಯೇ ಪಾಕ್​ ವಿರುದ್ಧ ಬಿಪಿನ್​ ರಾವತ್​ ಚಾಟಿ ಬೀಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts