More

    ಆನ್‌ಲೈನ್‌ನಲ್ಲಿ ಬೊಂಬೆಗಳ ಕಲರವ: 27ರಿಂದ ಮಾ.2ವರೆಗೆ ಬೊಂಬೆ ಪ್ರದರ್ಶನ, ಕೇಂದ್ರ ಸರ್ಕಾರದಿಂದ ಆಯೋಜನೆ

    ಚನ್ನಪಟ್ಟಣ:  ದೇಶಿಯ ಆಟಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಪ್ರಪ್ರಥಮ ಬಾರಿಗೆ ‘ದಿ ಇಂಡಿಯಾ ಟಾಯ್ ಟಾಯ್ ೇರ್ ’ ’ ಎಂಬ ಬೃಹತ್ ಮಾರಾಟ ಮತ್ತು ಪ್ರದರ್ಶನವನ್ನು ಆನ್‌ಲೈನ್‌ನಲ್ಲಿ ಆಯೋಜಿಸಿದೆ.
    ಫೆ.27ರಿಂದ ಮಾ.2ರವರೆಗೆ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಕಾರ್ಯಕ್ರಮದ ಉಸ್ತುವಾರಿಯನ್ನು ಇಸಿಪಿಎಚ್ (ಎಕ್ಸಪೋರ್ಟ್ ಪ್ರಮೋಷನ್ ಕೌನ್ಸಿಲ್ ಫಾರ್ ಹ್ಯಾಂಡಿಕ್ರಾಫ್ಟ್) ಮತ್ತು ಡಿಸಿಎಚ್ ಸಂಸ್ಥೆಗಳು ವಹಿಸಿಕೊಂಡಿದ್ದು, ಸ್ಥಳೀಯ ಬೊಂಬೆ ತಯಾರಕರು ಭಾಗವಹಿಸಲಿದ್ದಾರೆ.
    ದೇಶೀಯ ಆಟಿಕೆಗಳ ಬಳಕೆಗೆ ಉತ್ತೇಜನ ನೀಡುವ ಸಲುವಾಗಿಯೇ ಹಬ್ಬ ಏರ್ಪಡಿಸಲಾಗುತ್ತಿದೆ. ಇತ್ತೀಚೆಗೆ ಚನ್ನಪಟ್ಟಣದ ರೈಲು ನಿಲ್ದಾಣದಲ್ಲಿ ಸ್ಥಳೀಯ ಬೊಂಬೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

    ಇದಾದ ಬಳಿಕ ಒಂದು ವಾರ ವರ್ಚ್ಯುಯಲ್‌ನಲ್ಲಿ ಬೊಂಬೆ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಬೊಂಬೆಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಈಗಾಗಲೇ ಸಕಲ ಸಿದ್ಧತೆಗಳು ನಡೆದಿದ್ದು, ಆನ್‌ಲೈನ್‌ನಲ್ಲಿ ಬೊಂಬೆಗಳು ಕಲರವ ಮೂಡಿಸಲಿವೆ.

    ತಾಲೂಕಿನಿಂದ 16 ಹಾಗೂ ಕಿನ್ನಾಳ ಗ್ರಾಮದ 11 ಮಂದಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇವರಿಗೆ ಈ ಕಾರ್ಯಕ್ರಮದಲ್ಲಿ ಹೇಗೆ ಭಾಗವಹಿಸಬೇಕು ಹಾಗೂ ಬೊಂಬೆ ಮಾರಾಟ ಹೇಗೆ ಮಾಡಬೇಕೆಂಬ ಬಗ್ಗೆ ತರಬೇತಿ ನೀಡಲಾಗುತ್ತಿದೆ.

    ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿರುವ ಸಂಸ್ಥೆಯ ತಾಂತ್ರಿಕ ವಿಭಾಗದ ಸಿಬ್ಬಂದಿ ಕರಕುಶಲಕರ್ಮಿಗಳಿಗೆ ತರಬೇತಿ ನೀಡಿದ್ದಾರೆ. ಇದರೊಂದಿಗೆ ವಿವಿಧ ಮಾದರಿಯ ಬೊಂಬೆಗಳ ಚಿತ್ರ ಮತ್ತು ವಿಡಿಯೋಗಳನ್ನು ವರ್ಚ್ಯುವಲ್‌ನಲ್ಲಿ ಪ್ರದರ್ಶನ ಮಾಡುವ ಸಲುವಾಗಿ ಚಿತ್ರಿಕರಣವೂ ಮುಗಿದಿದೆ.

    ಆನ್‌ಲೈನ್‌ನಲ್ಲೇ ಖರೀದಿ : ವರ್ಚ್ಯುವಲ್ ನಡೆಸುವ ಸಲುವಾಗಿಯೇ ಕೇಂದ್ರ ಸರ್ಕಾರ ವೆಬ್‌ಸೈಟ್ ಲಿಂಕ್ ನೀಡಿದೆ. ಇದರಲ್ಲಿ ಸ್ಥಳೀಯ ಕರಕುಶಲ ಕರ್ಮಿಯ ಹೆಸರು, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಬೊಂಬೆಗಳ ಚಿತ್ರ, ವಿಡಿಯೋ ಹಾಗೂ ಅದರ ಬೆಲೆ ಹಾಕಿರುತ್ತಾರೆ. ಫೆ.27ರಂದು ಆರಂಭವಾಗಲಿರುವ ಪ್ರದರ್ಶನದಲ್ಲಿ ಇವುಗಳ ಕುರಿತು ಮಾಹಿತಿ ನೀಡಲಾಗುತ್ತದೆ.

    ಆಸಕ್ತರು, ಖರೀದಿ ಮಾಡಬಹುದಾಗಿರುತ್ತದೆ. ಸಾಮಾಜಿಕ ಜಾಲತಾಣದ ಮೂಲಕ ಬೊಂಬೆ ಉದ್ಯಮಕ್ಕೆ ವಿಭಿನ್ನ ಮಾರುಕಟ್ಟೆ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ.
    ಆನ್‌ಲೈನ್‌ನಲ್ಲಿ ನಡೆಯಲಿರುವ ಪ್ರದರ್ಶನ ಮತ್ತು ಮಾರಾಟಕ್ಕೆ ಈಗಾಗಲೇ ನೊಂದಣಿಯಾಗಿರುವ ಕರಕುಶಲ ಕರ್ಮಿಗಳು ಸಿದ್ಧತೆ ನಡೆಸಿದ್ದಾರೆ.

    ಎಲ್ಲೆಡೆ ಕೋವಿಡ್ ಇರುವ ಕಾರಣ, ಪ್ರದರ್ಶನವನ್ನು ಸಂಪೂರ್ಣವಾಗಿ ಆನ್‌ಲೈನ್ ಮಾಡಲಾಗಿದೆ. ಹಾಗಾಗಿ ಇಲ್ಲಿ ಮಾರಾಟ ಮಾಡುವವರು ಹಾಗೂ ಖರೀದಿಸುವವರು ವೆಬ್‌ಸೈಟ್ ಮೂಲಕವೇ ಕಾರ್ಯನಿರ್ವಹಿಸಬೇಕಾಗುತ್ತದೆ. ದಿನದ 24 ಗಂಟೆಯೂ ವ್ಯಾಪಾರ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts