More

    ಆನ್​ಲೈನ್ ಆರ್ಡರ್… ವ್ಯಾಪಾರ ಸೂಪರ್..

    ಹುಬ್ಬಳ್ಳಿ: ಹೋಟೆಲ್, ಡಾಬಾ, ರೆಸ್ಟೋರೆಂಟ್, ಪಬ್, ಕ್ಲಬ್​ಗಳಿಗೆ ಹೋಗಿ ಭಕ್ಷ್ಯ ಭೋಜನ ಸವಿದು ಸಂಭ್ರಮಿಸುತ್ತಿದ್ದವರಿಗೆ ಜನತಾ ಕರ್ಫ್ಯೂ, ಲಾಕ್​ಡೌನ್ ತಡೆಯೊಡ್ಡಿದೆ. ಆದರೆ, ಹೋಮ್ ಡೆಲಿವರಿಯಂಥ ಸೇವೆಯಿಂದ ತಮಗಿಷ್ಟವಾದ ಆಹಾರವನ್ನು ಮನೆಗೇ ತರಿಸಿಕೊಂಡು ಕುಟುಂಬದವರೆಲ್ಲರೂ ಕೂಡಿ ಸವಿಯುವ ಸದಾವಕಾಶವನ್ನು ಇದು ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಹಲವು ಆನ್​ಲೈನ್ ವ್ಯಾಪಾರಿಗಳಿಗೆ ಈಗ ಭರ್ಜರಿ ಸುಗ್ಗಿಕಾಲ ಎನ್ನುವಂತಾಗಿದೆ. ಇವರ ವಹಿವಾಟು ಸಾಮಾನ್ಯ ದಿನಗಳಿಗಿಂತ ಎರಡು, ಮೂರು ಪಟ್ಟು ಹೆಚ್ಚಾಗಿದೆ.

    ಜನತಾ ಕರ್ಫ್ಯೂ, ಲಾಕ್​ಡೌನ್ ವೇಳೆಯಲ್ಲೂ ಕೆಲವು ಕಂಪನಿಗಳಿಗೆ ಹೋಮ್ ಡೆಲಿವರಿ ಮಾಡಲು ಸರ್ಕಾರ ಅನುಮತಿ ನೀಡಿದೆ. ಹಾಗಾಗಿ, ಆನ್​ಲೈನ್ ಮೂಲಕ ಆರ್ಡರ್ ಮಾಡಿ ಜನ ತಮಗಿಷ್ಟವಾದ ತಿಂಡಿ ತಿನಿಸುಗಳನ್ನು ಮನೆ ಬಾಗಿಲಿಗೇ ತರಿಸಿಕೊಳ್ಳುತ್ತಿದ್ದಾರೆ. ನಗರದ ಪ್ರಸಿದ್ಧ ಹೋಟೆಲ್​ಗಳಲ್ಲಿ ದೊರೆಯುವ ಬಗೆ ಬಗೆಯ ಖಾದ್ಯಗಳನ್ನು ನಾ ಮುಂದು ತಾ ಮುಂದು ಎಂಬಂತೆ ಬುಕ್ ಮಾಡುತ್ತಿದ್ದಾರೆ.

    ಲಾಕ್​ಡೌನ್ ಅವಧಿಯಲ್ಲೂ ಹಲವು ಹೋಟೆಲ್​ಗಳು ಸೇವೆ ಒದಗಿಸುತ್ತಿವೆ. ಪಾರ್ಸಲ್​ಗೆ, ಹೋಮ್ ಡೆಲಿವರಿಗೆ ಅವಕಾಶ ನೀಡಿವೆ. ಹೋಮ್ ಡೆಲಿವರಿ ಕಂಪನಿಗಳ ಜತೆಗೆ ಒಡಂಬಡಿಕೆ ಮಾಡಿಕೊಂಡಿವೆ. ಈ ಮೂಲಕ ಜನರಿಗೆ ಸುಲಭವಾಗಿ ಸೇವೆ ಒದಗಿಸುತ್ತಿವೆ. ಈ ಸಂದರ್ಭದಲ್ಲಿ ಶಾಖಾಹಾರ, ಮಾಂಸಾಹಾರ ಊಟ, ಉಪಾಹಾರ, ಕೇಕ್, ಪಿಜ್ಜಾ, ಬರ್ಗರ್​ನಂಥ ಪದಾರ್ಥಗಳು ಬಿಸಿ ಬಿಸಿ ದೋಸೆಯಂತೆ ಖಚಾರ್ಗತ್ತಿವೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಕೆಂಪು, ಕಿತ್ತಳೆ ಬಣ್ಣದ ಟೀ ಶರ್ಟ್ ಧರಿಸಿದ ಡಿಲಿವರಿ ಮಾಡುವ ಯುವಕರು ಕಂಡುಬರುತ್ತಿದ್ದಾರೆ.

    ಸಣ್ಣ ಹೋಟೆಲ್​ಗಳಿಗೆ ಬರೆ

    ದೊಡ್ಡ ದೊಡ್ಡ ಹೋಟೆಲ್​ನವರು ಆನ್​ಲೈನ್ ಮಾರುಕಟ್ಟೆ ಮೂಲಕ ಭರ್ಜರಿ ವ್ಯಾಪಾರ ಮಾಡುತ್ತಿದ್ದಾರೆ. ಆದರೆ, ನೇರ ಗ್ರಾಹಕರನ್ನೇ ನೆಚ್ಚಿಕೊಂಡಿರುವ ಸಣ್ಣ ಹೋಟೆಲ್, ಬೇಕರಿಯವರು ವ್ಯಾಪಾರವಿಲ್ಲದೆ ಕುಳಿತಿದ್ದಾರೆ. ಕಟ್ಟುನಿಟ್ಟಿನ ಲಾಕ್​ಡೌನ್ ಹಿನ್ನೆಲೆಯಲ್ಲಿ ಜನ ಹೊರಗೆ ಬರುತ್ತಿಲ್ಲ. ಹೀಗಾಗಿ, ಪಾರ್ಸೆಲ್ ತೆಗೆದುಕೊಳ್ಳುವವರೂ ಕಡಿಮೆಯಾಗಿದ್ದಾರೆ. ಇನ್ನು ಬೀದಿ ಬದಿ ವ್ಯಾಪಾರ ಸಂಫೂರ್ಣ ಬಂದ್ ಆಗಿರುವುದರಿಂದ ಹಲವರು ಸಂಕಷ್ಟಕ್ಕೆ ತುತ್ತಾಗಿದ್ದಾರೆ.

    ನಮ್ಮಲ್ಲಿ ಕೇಕ್, ಪಿಜ್ಜಾಗೆ ಹೆಚ್ಚು ಬೇಡಿಕೆ ಬರುತ್ತಿದೆ. ಸಾಮಾನ್ಯ ದಿನಕ್ಕಿಂತಲೂ ಈಗ ಮೂರು ಪಟ್ಟು ಹೆಚ್ಚು ವ್ಯಾಪಾರವಾಗುತ್ತಿದೆ. ಲಾಕ್​ಡೌನ್ ವೇಳೆ ಆನ್​ಲೈನ್ ಮಾರಾಟಕ್ಕೆ ಅವಕಾಶ ನೀಡಿರುವುದರಿಂದ ಇದು ಸಾಧ್ಯವಾಗಿದೆ.

    | ರಿತ್ವಿಕ್ ಸುಬ್ರಹ್ಮಣ್ಯ, ಎಂಡಿ, ಡೋಫೇಜ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts