More

    ಮಾತು ಬರದವಳನ್ನೂ ಬಿಡದ ಕಾಮುಕ; ಮೂಗಿಯನ್ನು ಅತ್ಯಾಚಾರ ಮಾಡಿದ ಚಾಲಕ ಒಂದೇ ಗಂಟೆಯಲ್ಲೇ ಸಿಕ್ಕಿಬಿದ್ದ..

    ಚಿತ್ರದುರ್ಗ: ರಾಜ್ಯದಲ್ಲಿ ಒಂದಾದ ಮೇಲೊಂದರಂತೆ ಅತ್ಯಾಚಾರ ಪ್ರಕರಣಗಳು ಕೇಳಿ ಬರುತ್ತಿದ್ದು, ಮಾತು ಬರದ ಮಹಿಳೆ ಮೇಲೂ ಕಾಮುಕನೊಬ್ಬ ಎರಗಿ ಅತ್ಯಾಚಾರ ಮಾಡಿದ್ದಾನೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ತುಪ್ಪದಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

    ಚಿತ್ರದುರ್ಗ ತಾಲೂಕಿನ ಲಕ್ಷ್ಮೀಸಾಗರ ನಿವಾಸಿ ನಾಗೇಶ್ (ನಾಗರಾಜ್) ಎಂಬಾತ ಆರೋಪಿಯಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಚಾಲಕನಾಗಿ ಕೆಲಸ ಮಾಡುತ್ತಿದ್ದ ಈತ ಮೂಗಿ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ.

    ವಿಷಯ ತಿಳಿದ ಪೊಲೀಸರು ಅತ್ಯಾಚಾರ ನಡೆದ ಒಂದು ಗಂಟೆಯೊಳಗೇ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    ರಾಜಕಾರಣಕ್ಕೂ ಹೆಸರಾಗಿದ್ದ ಆ ರೆಸಾರ್ಟ್​ ಒತ್ತುವರಿ ಮಾಡಿಕೊಂಡಿದ್ದ ಜಾಗ ತೆರವು; ಅಲ್ಲೇ ಕ್ರೀಡಾಸಮುಚ್ಚಯ ನಿರ್ಮಾಣವಾಗಲಿ ಎಂದು ಸಿಎಂಗೆ ಪತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts