More

    ಬ್ಯಾಂಕ್ ಸಾಲದಿಂದ ತಪ್ಪಿಸಿಕೊಳ್ಳಲು ನಕಲಿ ನಂಬರ್ ಪ್ಲೇಟ್ ಬಳಕೆ​; ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದ!

    ಬೆಂಗಳೂರು: ಬ್ಯಾಂಕ್ ಸಾಲದ ಕಂತು ಪಾವತಿ ಮಾಡದೆ ಬ್ಯಾಂಕ್​ನವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ದ್ವಿಚಕ್ರ ವಾಹನಕ್ಕೆ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಓಡಿಸುತ್ತಿದ್ದ ಸವಾರ, ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸುಬ್ರಹ್ಮಣ್ಯಪುರ ಪೊಲೀಸರು ಈತನನ್ನು ಬಂಧಿಸಿದ್ದಾರೆ.

    ಇಲಿಯಾಸ್‌ನಗರದ ಸೈಯದ್ ಅಫ್ತಾಬ್ ಬಂಧಿತ. ಚುಂಚುಘಟ್ಟದಲ್ಲಿ ವೆಲ್ಡಿಂಗ್​ ಕೆಲಸ ಮಾಡುತ್ತಿದ್ದ ಸೈಯದ್, ತನ್ನ ದ್ವಿಚಕ್ರ ವಾಹನದ ಸಾಲದ ಕಂತು ಪಾವತಿ ಮಾಡಿರಲಿಲ್ಲ. ಫೈನಾನ್ಸ್ ಸಿಬ್ಬಂದಿ ವಾಹನ ಜಪ್ತಿ ಮಾಡುತ್ತಾರೆ ಎಂಬ ಭಯದಿಂದ ಬನಶಂಕರಿಯ ವ್ಯಕ್ತಿಯೊಬ್ಬರ ದ್ವಿಚಕ್ರ ವಾಹನದ ನಂಬರ್‌ ತನ್ನ ವಾಹನಕ್ಕೆ ಹಾಕಿಕೊಂಡು ಓಡಾಡಿಸುತ್ತಿದ್ದ.

    ಇದನ್ನೂ ಓದಿ: ಕಾವೇರಿ ನದಿಗೆ ಹಾರಿದ ಬಿಕಾಂ ವಿದ್ಯಾರ್ಥಿ; ಕೊಚ್ಚಿಕೊಂಡು ಹೋದವ ಇನ್ನೂ ನಾಪತ್ತೆ..

    ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ವಾಹನ ಸಮೇತ ಸವಾರರನ್ನು ಬಂಧಿಸಿ ಪರಿಶೀಲನೆ ನಡೆಸಿದಾಗ ನಕಲಿ ನಂಬರ್​ ಪ್ಲೇಟ್ ಬಳಕೆ ದೃಢಪಟ್ಟಿದೆ. ಅಲ್ಲದೆ, 19 ಸಂಚಾರ ಉಲ್ಲಂಘನೆ ಪ್ರಕರಣ ಇರುವುದು ಬೆಳಕಿಗೆ ಬಂದಿದೆ. ವಂಚನೆ, ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಸುಬ್ರಹ್ಮಣ್ಯಪುರ ಠಾಣೆಗೆ ಸವಾರನ ವಿರುದ್ಧ ದೂರು ನೀಡಲಾಗಿತ್ತು. ಆರೋಪಿಯನ್ನು ಬಂಧಿಸಿದ ಪೊಲೀಸರು, ಕೋರ್ಟ್‌ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಬ್ಯಾಂಕ್ ಸಾಲದಿಂದ ತಪ್ಪಿಸಿಕೊಳ್ಳಲು ನಕಲಿ ನಂಬರ್ ಪ್ಲೇಟ್ ಬಳಕೆ​; ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದ!

    ಸುಟ್ಟು ಕರಕಲಾದ ಶವ: ಸತ್ತ ಪತ್ನಿಯ ಗುರುತು, ಕೊಂದ ಪತಿಯ ಪತ್ತೆಯೇ ಇಂಟರೆಸ್ಟಿಂಗ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts