More

    ಅಮೃತಮತಿಗೆ ಮತ್ತೊಂದು ಗರಿ; ಸನ್ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ

    ಬೆಂಗಳೂರು: ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಚಿತ್ರವು ಕೆಲವು ದಿನಗಳ ಹಿಂದೆ ಲಾಸ್ ಏಂಜಲೀಸ್ ಇಂಡಿಪೆಂಡೆಂಟ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು. ಈಗ ಲಾಸ್ ಏಂಜಲೀಸ್​ನಲ್ಲೇ ನಡೆಯುತ್ತಿರುವ ಸನ್ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ‘ಅಮೃತಮತಿ’ ಚಿತ್ರವು ಇದುವರೆಗೂ 10 ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿದ್ದು, ಈ ಪೈಕಿ ಎರಡರಲ್ಲಿ ಹರಿಪ್ರಿಯಾ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ.

    ಇನ್ನು, ಅಟ್ಲಾಂಟ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಚಿತ್ರಕ್ಕೆ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ಪ್ರಶಸ್ತಿ ಬಂದರೆ, 11ನೇ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ‘ವಿಶೇಷ ಚಿತ್ರ’ ಎಂಬ ಮನ್ನಣೆಗೆ ಪಾತ್ರವಾಗಿದೆ. ‘ಅಮೃತಮತಿ’ಯು 13ನೇ ಶತಮಾನದ ಕನ್ನಡ ಕವಿ ಜನ್ನನ ‘ಯಶೋಧರ ಚರಿತೆ’ ಕಾವ್ಯವನ್ನು ಆಧರಿಸಿದೆ. ಈ ಕಾವ್ಯವನ್ನಾಧ ರಿಸಿ ಬರಗೂರು ರಾಮಚಂದ್ರಪ್ಪ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹರಿಪ್ರಿಯಾ, ಕಿಶೋರ್, ಸುಂದರ್​ರಾಜ್, ವತ್ಸಲಾ ಮೋಹನ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಶಮಿತಾ ಮಲ್ನಾಡ್ ಸಂಗೀತ ಈ ಚಿತ್ರಕ್ಕಿದೆ.

    ಅಪ್ಪನ ಹೆಣ ಬೇಡ, ಅವರ ಹಣ ಬೇಕು; ಅನಾಥ ಶವ ಎಂದರೂ ಸರಿ ಎಂದ, 6 ಲಕ್ಷ ಇದೆ ಎಂದಾಗ 5 ನಿಮಿಷ ಎಂದು ಹೇಳಿದ ಮಗ!

    ಸಂಬಂಧಿಕರಿಗಾಗಿ ಕಾಯುತ್ತಿವೆ ಕೋವಿಡ್‌ನಿಂದ ಮೃತಪಟ್ಟ ಸಾವಿರಾರು ಜನರ ಅಸ್ಥಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts