ಬೆಂಗಳೂರು: ನಗರದಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ ಒಂದೂವರೆ ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್ ಮಾಡಿದ್ದಾರೆ.
ಎಲ್ಎಸ್ಡಿ, ಎಂಡಿಎಂಎ, ಎಕ್ಸ್ಟೇಸಿ ಡ್ರಗ್ಸ್ ಅನ್ನು ಸೀಜ್ ಮಾಡಲಾಗಿದ್ದು, ಕೇರಳ ಮೂಲದ ನಾಲ್ವರು ಡ್ರಗ್ಸ್ ಪೆಡ್ಲರ್ಗಳನ್ನು(ಮಾದಕ ವಸ್ತು ವ್ಯಾಪಾರಿಗಳು) ಬಂಧಿಸಿದ್ದಾರೆ. ಈ ಮಾದಕ ವಸ್ತು ಮಾರಾಟ ಜಾಲದ ಕಿಂಗ್ಪಿನ್ ಧೀರಜ್. ನೆದರ್‌ಲ್ಯಾಂಡ್, ಜರ್ಮನಿಯಿಂದ ಪೋಸ್ಟಲ್ ಮೂಲಕ ಈತ ತರಿಸುತ್ತಿದ್ದ ಡ್ರಗ್ಸ್ ಅನ್ನು ಕೇರಳ ಮೂಲದ ನಾಲ್ವರು ಮಾರಾಟ ಮಾಡುತ್ತಿದ್ದರು. ಧೀರಜ್ಗಾಗಿ ಶೋಧಕಾರ್ಯ ಮುಂದುವರಿದಿದೆ.
ಇದನ್ನೂ ಓದಿರಿ ಲಾಕ್ಡೌನ್ ವೇಳೆ ಗಾಂಜಾ ಮಾರಾಟ, ಮನೆಯಲ್ಲಿರೋ ವಿದ್ಯಾರ್ಥಿಗಳೇ ಇವರ ಟಾರ್ಗೆಟ್ !
ಡ್ರಗ್ಸ್ ಡೀಲರ್ಗಳಾದ ಶಹದ್ ಮೊಹಮದ್, ಅಜ್ಮಲ್, ಅಜಿನ್ ಕೆಜಿವರ್ಗೇಶ್, ನಿತಿನ್ ಮೋಹನ್ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇಂಥವರಿಗೆ ಮಾರಾಟ ಮಾಡ್ಬೇಕು
ಎಂದು ಧೀರಜ್ ಮೆಸೇಜ್ ಕೊಡುತ್ತಿದ್ದ. ಅದರಂತೆ ಅವರು ತನ್ನಕಡೆಯ ಹುಡುಗರ ಮೂಲಕ ಡ್ರಗ್ಸ್ ರಿಸೀವ್ ಮಾಡಿಸಿಕೊಂಡು ಮಾರಾಟ ಮಾಡುತ್ತಿದ್ದರು. ದೊಡ್ಡ ದೊಡ್ಡ ಪಾರ್ಟಿಗಳೂ ಇವರ ಮಾರಾಟದ ಅಡ್ಡೆಯಾಗಿತ್ತು. ಡಿಜೆಗಳಲ್ಲಿ ಹೆಚ್ಚಾಗಿ ಎಲ್ಎಸ್ಡಿ ಮಾರಾಟ ಮಾಡುತ್ತಿದ್ದರು.
ಗೋವಾ, ಪಬ್ ಎಂದು ಓಡಾಡಿಕೊಂಡಿದ್ದ ಧೀರಜ್, ತಾನಿರುವಲ್ಲಿಂದಲೇ ಡ್ರಗ್ಸ್ ಮಾರಾಟ ಮಾಡಿಸುತ್ತಿದ್ದ. ಸದ್ಯ ಈತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ರಾತ್ರಿಯಿಡೀ ಪರದಾಡಿದ ನಟಿ ಸುಧಾರಾಣಿ, ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ; ಡಾ.ಕೆ. ಸುಧಾಕರ್
dE