More

    ಜುಲೈ 10, 11ರಂದು ಅಂತಾರಾಷ್ಟ್ರೀಯ ವೆಬಿನಾರ್

    ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ದಶಮಾನೋತ್ಸವದ ನಿಮಿತ್ತ ವಿವಿಯಲ್ಲಿ ಜುಲೈ 10, 11ರಂದು ‘ಸಂಶೋಧನಾ ವಿಧಿ ವಿಧಾನಗಳಲ್ಲಿನ ವಿದ್ಯಮಾನಗಳು ಹಾಗೂ ನೈತಿಕ ಕಾಳಜಿಗಳು’ ಎಂಬ ವಿಷಯದ ಕುರಿತು ಅಂತಾರಾಷ್ಟ್ರೀಯ ವೆಬಿನಾರ್ ಆಯೋಜಿಸಲಾಗಿದೆ.

    10ರಂದು ಬೆಳಗ್ಗೆ 10 ಗಂಟೆಗೆ ವಿವಿ ಕುಲಪತಿ ಪ್ರೊ. ಎಂ.ರಾಮಚಂದ್ರಗೌಡ ಉದ್ಘಾಟಿಸುವರು. ಜರ್ಮನಿಯ ವೂರ್ಜ್‌ಬರ್ಗ್ ವಿವಿ ಪ್ರಾಧ್ಯಾಪಕ ಪ್ರೊ.ಬಿ.ಎ.ವಿವೇಕ ರೈ ದಿಕ್ಸೂಚಿ ಭಾಷಣ ಮಾಡುವರು. ಪ್ರಸಾರಾಂಗದ ನಿರ್ದೇಶಕ ಪ್ರೊ.ಅಶೋಕ ಡಿಸೋಜಾ ಅಧ್ಯಕ್ಷತೆ ವಹಿಸುವರು. 11ರಂದು ಸಂಜೆ 4ಕ್ಕೆ ಗುಲ್ಬರ್ಗಾ ಕೇಂದ್ರೀಯ ವಿವಿ ಕುಲಪತಿ ಪ್ರೊ.ಎಚ್.ಎಂ. ಮಹೇಶ್ವರಯ್ಯ ಸಮಾರೋಪ ಭಾಷಣ ಮಾಡುವರು.

    ರಾಣಿ ಆರ್‌ಸಿಯು ಕುಲಸಚಿವ ಪ್ರೊ.ಬಸವರಾಜ ಪದ್ಮಶಾಲಿ, ಪ್ರೊ. ಬಿ.ಎ. ವಿವೇಕ ರೈ, ಪದ್ಮಶ್ರೀ ಗಣೇಶ ಎನ್.ದೇವಿ, ಪ್ರೊ.ರಾಜೇಂದ್ರ ಚೆನ್ನಿ, ಡಾ.ಚಂದ್ರಶೇಖರ ನಂಗಲಿ, ಡಾ.ಎಂ.ಎಸ್. ಆಶಾದೇವಿ, ರೂಪೇಶ ಕುಮಾರ, ಪ್ರೊ.ಶಿವರಾಮ ಪಡಿಕ್ಕಲ್, ಡಾ. ಸ್ಮೀತಾ ಎಕ್ಕ ದೇವಾನ, ಡಾ.ರಾಜೇಂದ್ರ ಬೈಕಾಡಿ, ಡಾ.ಜಾಜಿ ದೇವೇಂದ್ರಪ್ಪ ಸಂಶೋಧನೆಯ ಹಲವು ವಿಷಯಗಳನ್ನು ಚಿಂತನೆಗೆ ಒಳಪಡಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts