More

    VIDEO| ರೈಲು ಇಳಿಯುತ್ತಿದ್ದಂತೆ ನಿಲ್ದಾಣದಿಂದ ಎದ್ನೋ ಬಿದ್ನೋ ಎಂದು ಓಡಿದ ಜನರು: ಕಾರಣ ಕೇಳಿದ್ರೆ ದಂಗಾಗ್ತೀರಾ!

    ಪಟನಾ: ಎಲ್ಲಿ ನಮ್ಮನೆಲ್ಲ ಹಿಡಿದು ಕರೊನಾ ವೈರಸ್​ ಟೆಸ್ಟ್​ ಮಾಡಿಸುತ್ತಾರೋ ಎಂಬ ಭಯದಲ್ಲಿ ಮಕ್ಕಳು, ಯುವಕರು ಸೇರಿದಂತೆ ಅನೇಕರು ರೈಲು ನಿಲ್ದಾಣದಲ್ಲಿ ಯರ್ರಾಬಿರ್ರಿ ಓಡಿದ ಘಟನೆ ಬಿಹಾರದ ಬುಕ್ಸರ್​ನಲ್ಲಿ ಗುರುವಾರ ನಡೆದಿದೆ.​

    ರೈಲು ಇಳಿದು ನಿಲ್ದಾಣದಿಂದ ಹೊರ ಹೋಗುವ ಮುಂಚೆ ಕರೊನಾ ಟೆಸ್ಟ್​ ಮಾಡಿಸಲು ಅಲ್ಲಿನ ಆರೋಗ್ಯ ಕಾರ್ಯಕರ್ತರು ಕೇಳಿದಾಗ, ಟೆಸ್ಟ್​ ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ಜನರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ರೈಲು ನಿಲ್ದಾಣಗಳಲ್ಲಿ ಟೆಸ್ಟಿಂಗ್​ ಮಾಡುವಂತೆ ಇತ್ತೀಚೆಗಷ್ಟೇ ಬಿಹಾರ ಸಿಎಂ ನಿತೀಶ್​ ಕುಮಾರ್​ ಸೂಚನೆ ನೀಡಿದ್ದಾರೆ. ದೇಶದ ವಿವಿಧ ಭಾಗಗಳಿಂದ ತವರಿಗೆ ಬರುವ ಜನರ ಪರೀಕ್ಷೆ ಮಾಡಬೇಕೆಂದು ನಿತೀಶ್​ ಅವರು ಹೇಳಿದ್ದರು. ಆದರೆ, ಜನರು ಕರೊನಾ ಟೆಸ್ಟ್​ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದು, ಅವರಲ್ಲಿರುವ ಭಯವೇ ಕಾರಣ ಎನ್ನಲಾಗಿದೆ.

    ಇದನ್ನೂ ಓದಿರಿ: ಕೋಟಿ ಗಳಿಕೆಯ ಮಾರ್ಗ ತುಂಬ ಸುಲಭ!

    ನಾವು ಜನರನ್ನು ನಿಲ್ಲಿಸಲು ಯತ್ನಿಸಿದಾಗ ಅವರು ನಮ್ಮೊಂದಿಗೆ ವಾಗ್ವಾದಕ್ಕೆ ಇಳಿದರು. ಅಲ್ಲಿ ಯಾವೊಬ್ಬ ಪೊಲೀಸ್​ ಸಹ ಇರಲಿಲ್ಲ. ಇದಾದ ಬಳಿಕ ಮತ್ತೊಬ್ಬ ಮಹಿಳಾ ಪೊಲೀಸ್​ ಬಂದರು. ಆದರೆ ಒಬ್ಬಳೇ ಇದ್ದಿದ್ದರಿಂದ ನಾನು ಅಸಹಾಯಕನೆಂದರು ಎಂದು ಬುಕ್ಸರ್​ನ ಸ್ಥಳೀಯ ಕೋವಿಡ್​ ಸಮಾಲೋಚಕ್ ಜೈ ತಿವಾರಿ ಹೇಳಿದರು.

    ಬಿಹಾರದಲ್ಲೂ ಸಹ ದಿನೇ ದಿನೆ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶುಕ್ರವಾರವಷ್ಟೇ ನಿತೀಶ್​ ಕುಮಾರ್​ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದು, ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಇನ್ನು ಬಿಹಾರದಲ್ಲಿ 6253 ಹೊಸ ಪ್ರಕರಣಗಳು ಮತ್ತು 13 ಹೊಸ ಸಾವಿನ ಪ್ರಕರಣಗಳು ವರದಿಯಾಗಿವೆ. (ಏಜೆನ್ಸೀಸ್​)

    ತಮಿಳು ಚಿತ್ರರಂಗದ​ ಹಿರಿಯ ಹಾಸ್ಯ ಕಲಾವಿದ ವಿವೇಕ್​ ವಿಧಿವಶ

    ವಿಜಯವಾಣಿ ರಾಜ್ ಉತ್ಸವ: ಡಾ ರಾಜ್ ನಿರ್ಮಾಪಕರಾದಾಗ…

    ಕೃಷ್ಣಾ ಟಾಕೀಸ್ ಚಿತ್ರ ವಿಮರ್ಶೆ: ಊಹೆಗೆ ನಿಲುಕುವ ಹಾರರ್ ಕಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts