More

  4ರಂದು ಕುಂಟಾಟ ತಂಡಗಳ ಆಯ್ಕೆ

  ನಿಪ್ಪಾಣಿ: ನರದ ಅರುಣ ಶಾಮರಾವ ಪಾಟೀಲ ಪ್ರೌಢಶಾಲೆಯ ಮೈದಾನದಲ್ಲಿ ಜ.4 ರಂದು ಮಧ್ಯಾಹ್ನ 2 ಗಂಟೆಗೆ ಕರ್ನಾಟಕ ರಾಜ್ಯದ ಸೀನಿಯರ್(ಪುರುಷರ ಮತ್ತು ಮಹಿಳೆಯರ) ಹಾಗೂ ಸಬ್ ಜೂನಿಯರ್(ಬಾಲಕರ ಮತ್ತು ಬಾಲಕಿಯರ) ಕುಂಟಾಟ ತಂಡಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

  ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಛಿಸುವ ಕ್ರೀಡಾಪಟುಗಳ ಸೀನಿಯರ್ ತಂಡದವರಿಗೆ ವಯೋಮಿತಿ ಮಾನದಂಡ ಇರುವುದಿಲ್ಲ. ಸಬ್‌ಜೂನಿಯರ್ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವವರು 15 ವರ್ಷದೊಳಗಿನವರಾಗಿರಬೇಕು. ಶಾಲೆಯ ಮುಖ್ಯೋಪಾಧ್ಯಾಯರಿಂದ ದೃಢೀಕರಣ ಪ್ರಮಾಣ ಪತ್ರ ಹಾಗೂ ಜನ್ಮದಿನಾಂಕದ ದಾಖಲೆಯನ್ನು ಕಡ್ಡಾಯವಾಗಿ ತರಬೇಕು. ಪ್ರತಿ ಶಾಲೆ, ಮಹಾವಿದ್ಯಾಲಯದಿಂದ ಗರಿಷ್ಠ ಮೂವರು ಬಾಲಕರು ಮತ್ತು ಮೂವರು ಬಾಲಕಿಯರು ಭಾಗವಹಿಸಬಹುದು.

  ಆಯ್ಕೆಯಾದ ತಂಡಗಳನ್ನು ಜ.31 ರಿಂದ ಫೆ.2ರ ವರೆಗೆ ಮುಂಬೈನ ವಸುಯಿಯ ಎಂ.ಜಿ. ಪುರುಳೆಕರ ಪ್ರೌಢಶಾಲೆಯಲ್ಲಿ ನಡೆಯುವ ರಾಷ್ಟ್ರೀಯ ಕುಂಟಾಟ ಸ್ಪರ್ಧೆಗಾಗಿ ಕಳುಹಿಸಲಾಗುವುದು. ಹೆಚ್ಚಿನ ಮಹಿತಿಗಾಗಿ ಕರ್ನಾಟಕ ರಾಜ್ಯ ಕುಂಟಾಟ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಎಂ.ಕೆ. ಶಿರಗುಪ್ಪಿ (ಮೊ.ನಂ. 9341732259) ಅವರನ್ನು ಸಂಪರ್ಕಿಸಬಹುದು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts