More

    ಒಲಿಂಪಿಕ್ಸ್ ಬೆಳ್ಳಿ ವಿಜೇತ ರವಿ ದಹಿಯಾ ಕಲಿತ ಶಾಲೆಗೆ ಅವರದೇ ಹೆಸರು ನಾಮಕರಣ!

    ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ರಜತ ಪದಕ ಗೆದ್ದು ಇತಿಹಾಸ ಬರೆದ ಪೈಲ್ವಾನ್ ರವಿ ಕುಮಾರ್ ದಹಿಯಾ ಅವರು ದೆಹಲಿಯಲ್ಲಿ ವಿದ್ಯಾಭ್ಯಾಸ ಪಡೆದಿದ್ದ ಸರ್ಕಾರಿ ಶಾಲೆಗೆ ಇದೀಗ ಅವರದೇ ಹೆಸರು ಇಡಲಾಗಿದೆ. ರವಿ ದಹಿಯಾ ಅವರನ್ನು ಸನ್ಮಾನಿಸಿದ ಸಮಾರಂಭದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಈ ೋಷಣೆ ಮಾಡಿದ್ದು, ‘ರವಿ ದಹಿಯಾ ಬಾಲ್ ವಿದ್ಯಾಲಯ’ ಎಂದು ಶಾಲೆಗೆ ಮರುನಾಮಕರಣ ಮಾಡಲಾಗಿದೆ. ಆದರ್ಶ ನಗರದ ಸರ್ಕಾರಿ ಶಾಲೆ ಈ ಮುನ್ನ ‘ರಾಜಕೀಯ ಬಾಲ್ ವಿದ್ಯಾಲಯ’ ಎಂಬ ಹೆಸರು ಹೊಂದಿತ್ತು.

    ‘ದೆಹಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿ ರವಿ ದಹಿಯಾ ಈಗ ದೇಶದ ಯುವ ಜನತೆಯ ಐಕಾನ್ ಆಗಿದ್ದಾರೆ’ ಎಂದು ಸಿಸೋಡಿಯಾ ಹೇಳಿದರು. ಪ್ರತಿಯಾಗಿ ರವಿ ದಹಿಯಾ, ದೆಹಲಿ ಸರ್ಕಾರದಿಂದ ತಮ್ಮ ಒಲಿಂಪಿಕ್ಸ್ ಪದಕ ಸಾಧನೆಗೆ ಸಾಕಷ್ಟು ಆರ್ಥಿಕ ಬೆಂಬಲ ಲಭಿಸಿದೆ ಎಂದು ಹೇಳಿದರು.

    ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಪಿವಿ ಸಿಂಧು ಕೋಚ್ ಹಿಂಬಾಲಕರ ಸಂಖ್ಯೆ ಬರೋಬ್ಬರಿ ಏರಿಕೆ!

    ಹರಿಯಾಣದ ಸೋನೆಪತ್ ಜಿಲ್ಲೆಯ ನಹ್ರಿ ಗ್ರಾಮದವರಾದ ರವಿ ದಹಿಯಾ, 10ನೇ ವಯಸ್ಸಿನಿಂದಲೇ ದೆಹಲಿಯ ಛತ್ರಶಾಲ ಸ್ಟೇಡಿಯಂನಲ್ಲಿ ಕೋಚ್ ಸತ್ಪಾಲ್ ಸಿಂಗ್ ಅವರಿಂದ ಕುಸ್ತಿ ತರಬೇತಿ ಪಡೆಯಲಾರಂಭಿಸಿದ್ದರು. ಅವರ ತಂದೆ ರಾಕೇಶ್ ದಹಿಯಾ ಕೃಷಿಕರು. ಮಗನ ಡಯೆಟ್‌ಗೆ ಹಾಲು ಮತ್ತು ಹಣ್ಣುಗಳನ್ನು ನೀಡುವ ಸಲುವಾಗಿ ಸುಮಾರು 10 ವರ್ಷಗಳ ಕಾಲ ನಿರಂತರವಾಗಿ ನಹ್ರಿಯಿಂದ ದೆಹಲಿಗೆ (60 ಕಿಮೀ) ರೈಲಿನಲ್ಲಿ ಹೋಗಿಬರುತ್ತಿದ್ದರು.

    ಬೆಳಗ್ಗೆ 3.30ಕ್ಕೆ ಎದ್ದು ದೆಹಲಿಗೆ ತೆರಳುತ್ತಿದ್ದ ಅವರು, ಮರಳಿ ಬಂದು ಕೃಷಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದರು. 2015ರ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆಲ್ಲುವ ಮೂಲಕ ಮೊದಲ ಬಾರಿ ಮಿಂಚಿದ್ದ ರವಿ, ಬಳಿಕ 2018ರಲ್ಲಿ ವಿಶ್ವ 23 ವಯೋಮಿತಿ ಚಾಂಪಿಯನ್‌ಷಿಪ್‌ನಲ್ಲೂ ಬೆಳ್ಳಿ ಗೆದ್ದಿದ್ದರು. 2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದಿದ್ದರೆ, 2020 ಮತ್ತು 2021ರ ಏಷ್ಯನ್ ಚಾಂಪಿಯನ್‌ಷಿಪ್‌ಗಳಲ್ಲಿ ಚಿನ್ನ ಜಯಿಸಿದ್ದರು.

    ಮಗುವಿನ ಶಸ್ತ್ರಚಿಕಿತ್ಸೆಗಾಗಿ ಒಲಿಂಪಿಕ್ಸ್ ಪದಕ ಹರಾಜು! ಖರೀದಿಸಿದವರು ನೀಡಿದ ಟ್ವಿಸ್ಟ್ ಏನು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts