More

    ಪಾಕ್ ಮಾಜಿ​ ಕ್ರಿಕೆಟರ್​ ಅಬ್ದುಲ್​ ರಜಾಕ್ ಮದುವೆಯಾಗಲಿದ್ದಾರಾ ತಮನ್ನಾ? ಮಿಲ್ಕಿ ಬ್ಯೂಟಿ ಹೇಳಿದ್ದೇನು?​

    ಮುಂಬೈ: ದಕ್ಷಿಣ ಭಾರತದ ಪ್ರಖ್ಯಾತ ನಟಿ ತಮನ್ನಾ ಅವರು ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರ ಹಾದಿಯನ್ನು ಹಿಡಿಯಲಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ. ಅಂದರೆ, ತಮನ್ನಾ ಅವರು ಪಾಕಿಸ್ತಾನಿ ಕ್ರಿಕೆಟರ್​ ಒಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ.

    ಹೌದು, ತಮನ್ನಾ ಅವರು ಪಾಕ್​ ಮಾಜಿ ಕ್ರಿಕೆಟರ್​ ಅಬ್ದುಲ್​ ರಜಾಕ್​ ಅವರನ್ನು ವರಿಸಲಿದ್ದಾರಂತೆ. ಹೀಗೊಂದು ಚರ್ಚೆ ಜಾಲತಾಣದಲ್ಲಿ ನಡೆಯುತ್ತಿದೆ. ಅದಕ್ಕೆ ಕಾರಣ ತಮನ್ನಾ ಹಾಗೂ ರಜಾಕ್​ ಅವರು ಚಿನ್ನಾಭರಣ ಹಿಡಿದುಕೊಂಡು ಒಟ್ಟಿಗೆ ಪೋಸ್​ ಕೊಟ್ಟಿರುವ ಫೋಟೋ ಕಾರಣವಾಗಿದೆ. ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

    ಇದನ್ನೂ ಓದಿ: ನಮಗಾಗಿ ನಿಂತೋಯ್ತು!

    ಅಂದಹಾಗೆ ವೈರಲ್​ ಫೋಟೋವನ್ನು 2017ರಲ್ಲಿ ಸೆರೆಹಿಡಿಯಲಾಗಿದೆ. ದುಬೈನಲ್ಲಿ ನಡೆದು ಜ್ಯುವೆಲ್ಲರಿ ಶಾಪ್​ವೊಂದರ ಉದ್ಘಾಟನೆ ವೇಳೆ ತಮನ್ನಾ ಹಾಗೂ ರಜಾಕ್​ ಪಾಲ್ಗೊಂಡಿದ್ದರು. ಇದೇ ಫೋಟೋ ಇದೀಗ ಕರೊನಾ ವೈರಸ್​ ಲಾಕ್​ಡೌನ್​ ನಡುವೆ ವೈರಲ್​ ಆಗಿದ್ದು, ಇಬ್ಬರು ಮದುವೆಯಾಗಲಿದ್ದಾರೆ ಎಂಬ ವದಂತಿಯನ್ನು ಹಬ್ಬಿಸಿದ್ದಾರೆ.

    ತಮನ್ನಾ ಅವರಿನ್ನು ಫೋಟೋ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ಲಾಕ್​ಡೌನ್​ ಹಿನ್ನೆಲೆಯಲ್ಲಿ ಅವರು ಹೋಮ್​ ಕ್ವಾರಂಟೈನ್​ನಲ್ಲಿದ್ದಾರೆ. ಈ ಹಿಂದೆ ಹಲವು ವದಂತಿಗಳ ಬಗ್ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಅಸಮಾಧಾನ ಹೊರಹಾಕಿದ್ದರು.

    ಇದನ್ನೂ ಓದಿ: ‘ರಾಬರ್ಟ್’ ಬಿಡುಗಡೆ ಯಾವಾಗ? – ತರುಣ್ ಹೇಳುತ್ತಾರೆ ಕೇಳಿ …

    ಒಂದು ದಿನ ಸಿನಿಮಾ ನಟನೊಂದಿಗೆ ನನ್ನನ್ನು ತಳುಕು ಹಾಕಿದರು. ಮತ್ತೊಂದು ದಿನ ಓರ್ವ ಕ್ರಿಕೆಟರ್​ ಜತೆ ನನ್ನ ಹೆಸರು ಕೇಳಿಬಂತು. ಮತ್ತೊಂದು ದಿನ ತಮನ್ನಾ ಅವರು ವೈದ್ಯರೊಬ್ಬರನ್ನು ಮದುವೆಯಾಗಲಿದ್ದಾರೆ ಎಂದರು. ಇಂತಹ ವಂದತಿಗಳೆಲ್ಲ ಆಧಾರರಹಿತ ಎಂದು ಬೇಸರ ವ್ಯಕ್ತಪಡಿಸಿದ್ದರು. (ಏಜೆನ್ಸೀಸ್​)

    ಪಾಕ್ ಮಾಜಿ​ ಕ್ರಿಕೆಟರ್​ ಅಬ್ದುಲ್​ ರಜಾಕ್ ಮದುವೆಯಾಗಲಿದ್ದಾರಾ ತಮನ್ನಾ? ಮಿಲ್ಕಿ ಬ್ಯೂಟಿ ಹೇಳಿದ್ದೇನು?​

    ಆಹಾರ ತ್ಯಜಿಸಿದ್ದ ಬಸವನ ಚಿಕಿತ್ಸೆಗೆ ನಟ ದರ್ಶನ್ ನೆರವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts