ಸಿರವಾರ: ಏಳನೇ ವೇತನ ಆಯೋಗದ ಶಿಫಾರಸು ಜಾರಿಗಾಗಿ ಸದನದಲ್ಲಿ ಧ್ವನಿ ಎತ್ತುವಂತೆ ಒತ್ತಾಯಿಸಿ ಶಾಸಕ ಜಿ.ಹಂಪಯ್ಯ ನಾಯಕಗೆ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಬಲ್ಲಟಗಿಯಲ್ಲಿ ಶುಕ್ರವಾರ ಮನವಿ ಸಲ್ಲಿಸಿದರು.
ಹಳೇ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕು. ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸಬೇಕು. ಸರ್ಕಾರದ ಮುಂದಿರುವ ನೌಕರರ ಇತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು. ಸಿಪಿಐ ಶಶಿಕಾಂತ್ ಎಂ., ಪಿಎಸ್‌ಐ ಗುರುಚಂದ್ರ ಯಾದವ್, ಪಪಂ ಮುಖ್ಯಾಧಿಕಾರಿ ತಿಮ್ಮಪ್ಪ ಜಗಲಿ, ಜೆಸ್ಕಾಂ ಎಇಇ ಬೆನ್ನಪ್ಪ ಕರಿಬಂಟನಾಳ, ನೀರಾವರಿ ಇಲಾಖೆಯ ಎಇಇ ವಿಜಯಲಕ್ಷ್ಮೀ ಪಾಟೀಲ್, ಉಪ ಖಜಾನೆ ಅಧಿಕಾರಿ ಜಂಬುನಾಥ ಇದ್ದರು.