More

    ಅಧಿಕಾರಿಗಳನ್ನು ಜಾತಿ ಆಧಾರಿತವಾಗಿ ನೋಡಬಾರದು: ಶಾಮನೂರು ಹೇಳಿಕೆ ನೂರಕ್ಕೆ ನೂರು ತಪ್ಪು

    ಬೆಂಗಳೂರು: ಜಾತಿ ಆಧಾರದ ಮೇಲೆ ಅಧಿಕಾರಿಗಳಿಗೆ ಪೋಸ್ಟಿಂಗ್ ಕೊಡುವುದು, ಕೇಳುವುದು ಸರಿಯಲ್ಲ ಎಂದು ಶಾಸಕಸ ಬವರಾಜ ರಾಯರೆಡ್ಡಿ ಹೇಳಿದರು.ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಾತಿ ಆಧಾರದಲ್ಲಿಪ್ರಾದೇಶಿಕ ಅಸಮಾನತೆ ತಪ್ಪಿಸಲು ಮಂತ್ರಿ ಮಂಡಲಡ ಮಾಬಹುದು. ಜಾತಿ ಆಧಾರಿತವಾಗಿ ಸಂಪುಟ ರಚಿಸಬಹುದು. ಸಿದ್ದರಾಮಯ್ಯವಅದನ್ನು ಮಾಡಿದ್ದಾರೆ. ಸರಿಯೋ  ತಪ್ಪೋ ಅವರು ಮಾಡಿದ್ದಾರೆ. ಪ್ರಧಾನಿಯಾರು ಬೇಕಾದರೂ ಆಗಬಹುದು. ಆದರೆ ಅಟೆಂಡರ್ ಮಾಡಲುಕೆ ಸಾಧ್ಯವಿಲ್ಲ ಅಟೆಂಡರ್ ಆಗೋಕೆ ಕ್ವಾಲಿಪಿಕೇಶನ್ ಇರಬೇಕು ಎಂದರು.

    ಸಿದ್ದರಾಮಯ್ಯ ಲಿಂಗಾಯತ ವಿರೋಧಿಯಲ್ಲ. ಅವರು ಬಸವತತ್ವ ಪರಿಪಾಲಕರು.ಲಿಗಾಯತರಿಗೆ ಅವರು ಅನ್ಯಾಯ ಮಾಡಿಲ್ಲ. ಎಂದು ಬಸರಾಜ ರಾಯರೆಡ್ಡಿ ಸಮರ್ಥನೆ ಮಾಡಿಕೊಂಡರು. ನಿತೀಶ್ ಪಾಟೀಲ್, ದಿವಾಕರ್, ಗೋವಿಂದರೆಡ್ಡಿ ಲಿಂಗಾಯತ ಡಿಸಿಗಳು. ಶಾಮನೂರರಿಗೆ ಮಾಹಿತಿಯ ಕೊರತೆಯಿದೆ. ದಾವಣಗೆರೆಯಲ್ಲಿ ಮೂವರು ಲಿಂಗಾಯತ ಅಧಿಕಾರಿಗಳಿದ್ದಾರೆ.ದಾವಣಗೆರೆ ಸುರೇಶ್ ಹಿಟ್ನಾಳ್ ಸಿಇಒ ಇದ್ದಾರೆ. ಎಸ್ ಪಿ ಉಮಾರಾಣಿ ಇದ್ದಾರೆ. ಅವರೂ ಲಿಂಗಾಯತರು.ಜಾತಿ ಆಧಾರಿತವಾಗಿ ಮಾತನಾಡುವುದು ಸರಿಯಲ್ಲ. ನಾನು ಕೂಡ ಲಿಂಗಾಯತ ಸಮುದಾಯಕ್ಕೆ ಸೇರಿದವನು. ಲಿಂಗಾಯತರಿಗೆ ಅನ್ಯಾಯ ಅನ್ನೋದನ್ನ ಒಪ್ಪಲ್ಲ. ಬಸವ ತತ್ವ ಸಾಮಾಜಿಕ‌ ನ್ಯಾಯದ ಮೇಲೆ ನಿಂತಿದೆ.ಶಾಮನೂರರ ಹೇಳಿಕೆ 100% ತಪ್ಪು. ಅದನ್ನು ಯಾರೂ ಒಪ್ಪುವುದಿಲ್ಲ. ಶಾಮನೂರು ಶಾಸಕರಾಗಿ ಮಾತನಾಡಿದ್ದು ತಪ್ಪು. ನಾನು ಜಾತಿ ಆಧಾರಿತವಾಗಿ ಮಾತನಾಡಿದ್ರೆ ತಪ್ಪೇ. ನಾವು ಅಧಿಕಾರಿಗಳಲ್ಲಿ ಜಾತಿ ನೋಡಬಾರದು.ಅ ಧಿಕಾರಿಗಳನ್ನ ಈ ರೀತಿ ನೋಡಬಾರದು.ಇಲ್ಲವೇ ಮುಂದೆ ಅನರ್ಹರೆಲ್ಲ ಮಾತನಾಡುತ್ತಾರೆ.ಯಡಿಯೂರಪ್ಪ  ಹೇಳಿಕೆಯೂ ತಪ್ಪೇ? ಶಾಮನೂರರ ಹೇಳಿಕೆಯನ್ನು ಅವರು ಬೆಂಬಲಿಸಿದ್ದು ತಪ್ಪು ಯಾರೇ ಆಗಲಿ ಜಾತಿ ಆಧಾರಿತವಾಗಿ ನೋಡಬಾರದು ಎಂದು ಬಸವರಾಜ ರಾಯರೆಡ್ಡಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts