More

    ಅಧಿಕಾರಿಗಳು-ಸಿಬ್ಬಂದಿ ನಡುವೆ ಸಂವಹನವಿರಲಿ

    ಮಸ್ಕಿ: ಪಟ್ಟಣದ ದೇವನಾಂಪ್ರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿನ ಮಸ್ಟರಿಂಗ್ ಕೇಂದ್ರದಿಂದ ಚುನಾವಣಾ ಸಿಬ್ಬಂದಿ ಮಂಗಳವಾರ ಮತಯಂತ್ರ ಹಾಗೂ ಇತರ ಸಲಕರಣೆಗಳನ್ನು ತೆಗೆದುಕೊಂಡು ಮತಗಟ್ಟೆಗೆ ತೆರಳಿದರು.

    ನಿಷ್ಪಕ್ಷಪಾತ ಚುನಾವಣೆ ನಡೆಸುವುದಕ್ಕಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮಧ್ಯೆ ಉತ್ತಮ ಸಂವಹನ ಇರಬೇಕು. ಯಾವುದೇ ಅನುಮಾನಗಳಿದ್ದಲ್ಲಿ ಚುನಾವಣೆ ಕಿಟ್‌ನಲ್ಲಿ ಒದಗಿಸಿರುವ ಮಾರ್ಗದರ್ಶನ ಪುಸ್ತಕದಲ್ಲಿರುವ ನಿಯಮ ಪಾಲಿಸಬೇಕು. ಒಂದು ವೇಳೆ ಅನುಮಾನ ಬಗೆಹರಿಯದೇ ಇದ್ದಲ್ಲಿ ಮೇಲಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಸಿಬ್ಬಂದಿಗೆ ಚುನಾವಣಾಧಿಕಾರಿ ಆರ್.ದೇವಿಕಾ ಸೂಚಿಸಿದರು.

    ಕ್ಷೇತ್ರದಲ್ಲಿ 231 ಮತಗಟ್ಟೆಗಳಿದ್ದು, 272 ಪಿಆರ್‌ಒ, ಎಪಿಆರ್‌ಒ, ಪಿಒ ಹಾಗೂ 231 ಡಿ.ಗ್ರೂಪ್ ಸಿಬ್ಬಂದಿ ನಿಯೋಜಿಸಲಾಗಿದೆ. ಒಬ್ಬ ಡಿವೈಎಸ್‌ಪಿ, ಐದು ಸಿಪಿಐ, ಆರು ಪಿಎಸ್‌ಐ, 16 ಎಎಸ್‌ಐ, 120 ಪೇದೆಗಳು, 160 ಗೃಹರಕ್ಷಕ ಸಿಬ್ಬಂದಿ, ಒಂದು ಕೆಎಸ್‌ಆರ್‌ಪಿ ತುಕಡಿ, ಒಂದು ಡಿಎಆರ್ ತುಕಡಿ ಹಾಗೂ 140 ಅರೆ ಸೇನಾಪಡೆ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ ಎಂದು ಆರ್.ದೇವಿಕಾ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts