More

    ನನ್ನನ್ನು ಹೊಡೆದು ಹಾಕುವುದಾಗಿ ಪೊಲೀಸ್​ ಅಧಿಕಾರಿ ಬೆದರಿಸಿದ್ದಾರೆ: ಅತೀಕ್​ ಅಹ್ಮದ್​ ಸಹೋದರ ಅಶ್ರಫ್​ ಆರೋಪ

    ಬರೇಲಿ: ಎರಡು ವಾರದೊಳಗೆ ನನ್ನನ್ನು ಹೊಡೆದು ಹಾಕುವುದಾಗಿ ಪೊಲೀಸ್​ ಅಧಿಕಾರಿಯೊಬ್ಬರು ಬೆದರಿಸಿದ್ದಾರೆ. ಈ ಬಗ್ಗೆ ಉತ್ತರಪ್ರದೇಶ ಮುಖ್ಯಮಂತ್ರಿ ಹಾಗೂ ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ(CJI)ಗೆ ಪತ್ರ ಬರೆಯಲಾಗುವುದು ಎಂದು ಅಪಹರಣ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಗ್ಯಾಂಗ್​ಸ್ಟಾರ್​​ ಅತೀಕ್​ ಅಹ್ಮದ್​ ಸಹೋದರ ಖಲೀದ್​ ಆಶ್ರಫ್​ ಹೇಳಿದ್ದಾರೆ.

    ಉಮೇಶ್​ ಪಾಲ್​ ಅಪಹರಣ ಪ್ರಕರಣದಲ್ಲಿ ಮಂಗಳವಾರ ಪ್ರಯಾಗ್​ರಾಜ್​ ನ್ಯಾಯಾಲಯವು ಆಶ್ರಫ್​ ಸೇರಿದಂತೆ ಇತರೆ ಆರು ಮಂದಿಯನ್ನು ಪ್ರಕಣದಿಂದ ಖುಲಾಸೆ ಮಾಡಿದ ನಂತರ ಪೊಲೀಸ್​ ಅಧಿಕಾರಿ ಒಬ್ಬರು ನನ್ನ ಬಳಿ ಬಂದು ನಿನ್ನನು ಎರಡು ವಾರಗಳಲ್ಲಿ ಹೊಡೆದು ಹಾಕಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ. ಆ ಅಧಿಕಾರಿಯ ಹೆಸರನ್ನು ಯುಪಿ ಸಿಎಂ ಹಾಗೂ ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿಗೆ ಎನ್​ವಲಪ್​ನಲ್ಲಿ ಕಳಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.

    ನನ್ನನ್ನು ಹೊಡೆದು ಹಾಕುವುದಾಗಿ ಪೊಲೀಸ್​ ಅಧಿಕಾರಿ ಬೆದರಿಸಿದ್ದಾರೆ: ಅತೀಕ್​ ಅಹ್ಮದ್​ ಸಹೋದರ ಅಶ್ರಫ್​ ಆರೋಪ

    ಇದನ್ನೂ ಓದಿ: ಟೆಕ್​ ದೈತ್ಯ ಗೂಗಲ್​ಗೆ ಬಿತ್ತು ಭಾರಿ ಮೊತ್ತದ ದಂಡ; CCI ಆದೇಶ ಎತ್ತಿ ಹಿಡಿದ NCLAT

    ತನ್ನಗೆ ನ್ಯಾಯಾಂಗದಲ್ಲಿ ನಂಬಿಕೆ ಇದ್ದು ಬೇರೆ ಪ್ರಕರಣಗಳಲ್ಲಿ ದೋಷಮುಕ್ತನಾಗುತ್ತೇನೆ ಎಂಬ ವಿಶ್ವಾಸವಿದೆ. ಉಮೇಶ್​ ಪಾಲ್​ ಹತ್ಯೆ ಪ್ರಕರಣದಲ್ಲಿ ತಾನು ಭಾಗಿಯಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ತೋರಿಸಿರುವುದು ಸಂಪೂರ್ಣ ಆಧಾರರಹಿತ. ನನ್ನ ಕುಟುಂದವರನ್ನು ಸಿಲುಕಿಸಲು ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

    ನಮ್ಮ ಮೇಲಿರುವ ಪ್ರಕರಣಗಳ ವಿಚಾರಣೆಯನ್ನು ಹೈಕೋರ್ಟ್​ ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆಸುವುದಕ್ಕೆ ಅನುಮತಿ ನೀಡಿರುವ ಸಮಯದಲ್ಲಿ ನಮ್ಮನ್ನು ಜೈಲಿನಿಂದ ಹೊರಗಡೆ ಏಕೆ ಕರೆದುಕೊಂಡು ಬರಲಾಗುತ್ತಿದೆ. ನಾವು ಜೈಲಿನಿಂದ ಹೊರ ಬಂದ ಸಮಯದಲ್ಲಿ ನಮ್ಮ ಜೊತೆ ವಕೀಲರು ಇರಬೇಕು. ಆದರೆ, ಪೊಲೀಸ್​ ಅಧಿಕಾರಿಗಳನ್ನು ಬಿಟ್ಟರೆ ಬೇರೆ ಯಾರು ನಮ್ಮೊಂದಿಗೆ ಇರುವುದಿಲ್ಲ ಎಂದು ಅತೀಕ್​ ಅಹ್ಮದ್​ ಸಹೋದರ ಅಶ್ರಫ್​ ದೂರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts