More

    ಅಧಿಕಾರಿಗಳ ಮನವೊಲಿಕೆ; ಮತದಾನ ಬಹಿಷ್ಕಾರ ನಿರ್ಧಾರದಿಂದ ಹಿಂದೆ ಸರಿದ ಹಬೊಹಳ್ಳಿ ತಾಲೂಕಿನ ಸಕ್ರಿಹಳ್ಳಿ ಗ್ರಾಮಸ್ಥರು

    ಹಗರಿಬೊಮ್ಮನಹಳ್ಳಿ: ಸದಸ್ಯ ಸ್ಥಾನಕ್ಕಾಗಿ ಗ್ರಾಪಂ ಚುನಾವಣೆಯ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದ ತಾಲೂಕಿನ ಸಕ್ರಿಹಳ್ಳಿ ಗ್ರಾಮಸ್ಥರ ಮನವೊಲಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

    ಜನಸಂಖ್ಯೆಗೆ ಅನುಗುಣವಾಗಿ ಸದಸ್ಯ ಸ್ಥಾನ ನೀಡಿಲ್ಲ ಎಂದು ಸೊನ್ನ ಗ್ರಾಪಂ ವ್ಯಾಪ್ತಿಯ ಸಕ್ರಿಹಳ್ಳಿ ಗ್ರಾಮಸ್ಥರು ನಾಲ್ಕು ದಿನಗಳ ಹಿಂದೆ ಮತದಾನ ಬಹಿಷ್ಕಾರ ಮಾಡುವುದಾಗಿ ಘೋಷಿಸಿದ್ದರು. ಬಳಿಕ ತಾಲೂಕು ಮಟ್ಟದ ಅಧಿಕಾರಿಗಳ ತಂಡ ಸಭೆ ನಡೆಸಿ ಮನವೊಲಿಕೆಗೆ ಯತ್ನಿಸಿದ್ದರೂ ವಿಫಲವಾಗಿತ್ತು. ಬುಧವಾರ ಮತ್ತೆ ಚುನಾವಣಾಧಿಕಾರಿ, ತಹಸೀಲ್ದಾರ್ ಕೆ.ಶರಣಮ್ಮ ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ಸೋಮಶೇಖರ್ ಗ್ರಾಮಕ್ಕೆ ಭೇಟಿ ನೀಡಿ ಮನವೊಲಿಸಿದರು.

    ನೋಡಲ್ ಅಧಿಕಾರಿ ಸೋಮಶೇಖರ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಮಹತ್ವವಿದೆ. ಮತದಾನ ಮಾಡುವ ಮೂಲಕ ಬೇಡಿಕೆ ಈಡೇರಿಸಿಕೊಳ್ಳಿ ಎಂದು ಮನವಿ ಮಾಡಿದರು. ತಹಸೀಲ್ದಾರ್ ಕೆ.ಶರಣಮ್ಮ ಮಾತನಾಡಿ, ಚುನಾವಣೆ ಬಳಿಕ ತಮ್ಮ ಬೇಡಿಕೆಯನ್ನು ಡಿಸಿ ಸಹಕಾರದೊಂದಿಗೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಗ್ರಾಮಸ್ಥರು ಮತದಾನ ಬಹಿಷ್ಕಾರ ನಿರ್ಧಾರ ಹಿಂಪಡೆದರು.

    ಸಿಪಿಐ ಮಲ್ಲಿಕಾರ್ಜುನ ಡಪ್ಪಿನ, ಮುಖಂಡರಾದ ಮಲ್ಲಿಕಾರ್ಜುನಗೌಡ, ಮಂಜುನಾಥ, ಜುಟ್ಲ ನಿಂಗಪ್ಪ, ಎಂ.ಮಣ್ಣುಬಸಪ್ಪ, ಎ.ಕರಿಬಸಪ್ಪ, ಹನುಮಂತಪ್ಪ, ದೇವರಾಜ, ಸಿ.ಕರಿಬಸಪ್ಪ, ಎಚ್.ಹನುಮಂತಪ್ಪ, ಜಿನ್ ಬಸವರಾಜಪ್ಪ, ಎಚ್.ನಾಗಪ್ಪ, ಉಜ್ಜಿನಿ ಪಂಪಾಪತಿ, ಗುರುವಿನ ಮಂಜಯ್ಯ, ಕೊಂಡೇನಹಳ್ಳಿ ಮಂಜುನಾಥ, ಮಡಿವಾಳ ಸಂಜೀವಪ್ಪ, ಅಟವಳಿಗಿ ಜನಾರ್ಧನಪ್ಪ, ಜಿ.ಮಲ್ಲನಗೌಡ, ಗಡ್ಡಿ ಮುದುಕಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts