More

    ಕಚೇರಿ ಆರಂಭಕ್ಕೆ ಮಾಹಿತಿ ನೀಡಿ: ಅಧಿಕಾರಿಗಳಿಗೆ ವಿಜಯನಗರ ಜಿಲ್ಲೆ ವಿಶೇಷಾಧಿಕಾರಿ ಅನಿರುದ್ಧ್ ಶ್ರವಣ್ ಸೂಚನೆ

    ಬಳ್ಳಾರಿ: ನೂತನ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದಿದ್ದು, ಮೂಲಸೌಕರ್ಯ, ಇಲಾಖೆಗಳ ಆಸ್ತಿ ಹಂಚುವಿಕೆ ಮತ್ತು ಜಿಲ್ಲಾಮಟ್ಟದ ಕಚೇರಿಗಳ ಸ್ಥಾಪನೆ ಸೇರಿದಂತೆ ಸಮಗ್ರವಾಗಿ ಹೊಸ ಜಿಲ್ಲೆ ಕಾರ್ಯನಿರ್ವಹಣೆಗೆ ನೀಲಿನಕ್ಷೆ ತಯಾರಿಸಲು ತ್ವರಿತವಾಗಿ ಅಗತ್ಯ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ವಿಜಯನಗರದ ವಿಶೇಷಾಧಿಕಾರಿ ಅನಿರುದ್ಧ ಶ್ರವಣ್ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಜಯನಗರದಲ್ಲಿ ಜಿಲ್ಲಾಮಟ್ಟದ ವಿವಿಧ ಇಲಾಖೆ ಕಚೇರಿಗಳ ಕಾರ್ಯನಿರ್ವಹಣೆ ಕುರಿತ ಸಭೆಯಲ್ಲಿ ಮಾತನಾಡಿದರು. ಜಿಲ್ಲಾ ಕೇಂದ್ರವಾಗಿರುವ ಹೊಸಪೇಟೆಯಲ್ಲಿ ಈಗಾಗಲೇ ಕೆಲ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಹೊಸದಾಗಿ ಕಚೇರಿಗಳನ್ನು ಆರಂಭಕ್ಕೆ ಸಂಬಂಧಿಸಿದಂತೆ ಫಾರ್ಮ್‌ಗಳನ್ನು ಸಿದ್ಧಪಡಿಸಿದ್ದು, ಅವುಗಳಲ್ಲಿ ಸಂಪೂರ್ಣ ಮಾಹಿತಿ ಭರ್ತಿ ಮಾಡಿ ನೀಡಬೇಕು. ತಾತ್ಕಾಲಿಕವಾಗಿ ಜಿಲ್ಲಾಮಟ್ಟದ ಕಚೇರಿಗಳ ಆರಂಭಿಸಲು ಹೊಸಪೇಟೆಯಲ್ಲಿ ದೊಡ್ಡ ಕಾಂಪ್ಲೆಕ್ಸ್‌ಗಳನ್ನು ಗುರುತಿಸಿ ವರದಿ ನೀಡುವಂತೆ ಹೊಸಪೇಟೆ ಎಸಿ ಸಿದ್ದರಾಮೇಶ್ವರಗೆ ವಿಶೇಷಾಧಿಕಾರಿ ಅನಿರುದ್ಧ್ ಸೂಚಿಸಿದರು.

    ಬಳ್ಳಾರಿ ಜಿಲ್ಲೆಯಲ್ಲಿರುವ ಇಲಾಖೆಗಳಲ್ಲಿ ಸಿಬ್ಬಂದಿ ಸಂಖ್ಯೆ ಮತ್ತು ಹೊಸ ಜಿಲ್ಲೆಗೆ ಎಷ್ಟು ನೌಕರಗಳನ್ನು ನಿಯೋಜಿಸಲಾಗುತ್ತದೆ. ತಾತ್ಕಾಲಿಕವಾಗಿ ಇಲಾಖೆ ಕಚೇರಿ ಆರಂಭಿಸಲು ನಿಗದಿ ಮಾಡಿದ ಸ್ಥಳ ಇಲ್ಲವೆ ತಾಲೂಕು ಕಚೇರಿಗಳನ್ನೇ ವಿಸ್ತರಣೆ ಮಾಡುತ್ತೀರಾ?. ನೂತನ ಜಿಲ್ಲೆಯಲ್ಲಿರುವ ಇಲಾಖೆಗಳ ಆಸ್ತಿಗಳ ಪ್ರಮಾಣ (ಚರ ಮತ್ತು ಸ್ಥಿರಾಸ್ತಿ), ಮರುಹಂಚಿಕೆ ಹಾಗೂ ಇತರ ವಿವರಗಳನ್ನು ಕೂಡಲೇ ಸಲ್ಲಿಸಿದರೆ, ಸರ್ಕಾರದ ಮಟ್ಟದಲ್ಲಿ ಪರಿಶೀಲನೆ ನಡೆಸಿ ಅಧಿಸೂಚನೆ ಹೊರಡಿಸಲು ಅನುಕೂಲವಾಗಲಿದೆ ಎಂದರು. ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

    ಹೊಸ ಜಿಲ್ಲೆ ಹೆಸರು ನಮೂದಿಸಿ
    ವಿಜಯನಗರ ಜಿಲ್ಲೆಗಳಲ್ಲಿರುವ 6 ತಾಲೂಕುಗಳಲ್ಲಿ ಸರ್ಕಾರದ ಯಾವುದೇ ರೀತಿಯ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವಾಗ ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ವಿಜಯನಗರ ಜಿಲ್ಲೆ ಎಂದು ಹೆಸರು ನಮೂದಿಸಬೇಕು ಎಂದು ಅಧಿಕಾರಿಗಳಿಗೆ ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಮತ್ತು ವಿಜಯನಗರ ಜಿಲ್ಲೆ ವಿಶೇಷಾಧಿಕಾರಿ ಅನಿರುದ್ಧ ಶ್ರವಣ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts