More

    ಭೈರವೇಶ್ವರಸ್ವಾಮಿಗೆ ಪಾನಕದ ನೈವೇಧ್ಯ

    ಹಿರೀಸಾವೆ: ಹೋಬಳಿಯ ಉಳ್ಳಾವಳ್ಳಿ ಗ್ರಾಮದಲ್ಲಿ ಶ್ರೀ ಭೈರವೇಶ್ವರಸ್ವಾಮಿಯ ಹಬ್ಬ ಹಾಗೂ ಜಾತ್ರಾ ಮಹೋತ್ಸವದ ಪ್ರಯುಕ್ತ ಶನಿವಾರ ರಾತ್ರಿ ರಂಗದ ಕುಣಿತ ಹಾಗೂ ಜಾಗರಣಾ ಕಾರ್ಯಕ್ರಮ ನೆರವೇರಿತು.

    ಹಬ್ಬದ ಹಿಂದಿನ ರಾತ್ರಿ ಜಾಗರಣಾ ಕಾರ್ಯಕ್ರಮ ಜರುಗುವುದು ವಾಡಿಕೆಯಾಗಿದೆ. ಅದರಂತೆಯೇ ಶನಿವಾರ ಸಂಜೆಯಿಂದಲೇ ಪೂಜಾ ವಿದಿವಿಧಾನಗಳು ಪ್ರಾರಂಭಗೊಂಡಿದ್ದು ಸ್ವಾಮಿಗೆ ಅಭಿಷೇಕ ಹಾಗೂ ಕುಂಕುಮಾರ್ಚಣೆಯೊಂದಿಗೆ ಅಲಂಕಾರ ನಡೆಯಿತು.

    ವಿಶೇಷ ಪೂಜೆ ನೆರವೇರಿದ ಬಳಿಕ ಪಾನಕ ಹಾಗೂ ಪ್ರಸಾದ ವಿನಿಯೋಗ ಜರುಗಿತು. ರಂಗದ ಕುಣಿತ ಪ್ರಾರಂಭಗೊಂಡಿತು. ಜಾಗರಣೆ ಹಾಗೂ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಸಿ.ಎನ್.ಬಾಲಕೃಷ್ಣ ಗ್ರಾಮಸ್ಥರೊಂದಿಗೆ ಸೇರಿ ರಂಗದ ಕುಣಿತದಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

    ಹಿರಿಯರಾದ ಪುಟ್ಟರಾಜು ಎಂಬುವರು ರಂಗದ ಬೀದಿಗೆ ತಂದ ಕುಡುಕ ಅಜ್ಜನ ಪಾತ್ರದ ಹಾಸ್ಯವು ರಂಗದ ಕುಣಿತ ವೀಕ್ಷಿಸಲು ನೆರೆದಿದ್ದ ಜನತೆಯನ್ನು ನಗೆಗಡಲಲ್ಲಿ ತೇಲಿಸಿತು. ರಾತ್ರಿ 9.30 ರಿಂದ ಮಧ್ಯರಾತ್ರಿವರೆಗೂ ರಂಗದ ಕುಣಿತ ಮುಂದುವರಿಯಿತು. ಪ್ರಮುಖರಾದ ಪುಟ್ಟರಾಜು, ಎಂ.ಆರ್.ವಾಸು, ನರಿಹಳ್ಳಿ ತಾತೇಗೌಡ, ಎಚ್.ಕೆ.ಯೋಗೇಶ್, ಉಮೇಶ್, ರಾಮಚಂದ್ರ, ತ್ಯಾಗರಾಜ್, ಅಣ್ಣಪ್ಪಸ್ವಾಮಿಗೌಡ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts