More

    ಆಫ್ ಸೀಜನ್ ಲಿಚ್ಚಿ ಹಣ್ಣಿನ ಕ್ಷೇತ್ರೋತ್ಸವ

    ಸಿದ್ದಾಪುರ: ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರ, ಭಾರತೀಯ ಕೃಷಿ ಅನುಸಂಧಾನ ಪರಿಷತ್, ಚೆಟ್ಟಳ್ಳಿಯ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಆಫ್ ಸೀಜನ್ ಲಿಚ್ಚಿ ಹಣ್ಣಿನ ಕ್ಷೇತ್ರೋತ್ಸವ ಹಾಗೂ ಬೇಸಾಯ ಕ್ರಮಗಳ ಕುರಿತು ಗುರುವಾರ ಕಾರ್ಯಾಗಾರ ಆಯೋಜಿಸಲಾಗಿತ್ತು.

    ಅಖಿಲ ಭಾರತ ಸಂಘಟಿತ ಸಂಶೋಧನಾ ಯೋಜನೆಯಡಿ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರದಲ್ಲಿ ಆಯೋಜಿಸಿದ್ದ ಲಿಚ್ಚಿ ಹಣ್ಣಿನ ವಸ್ತು ಪ್ರದರ್ಶನ, ಕ್ಷೇತ್ರ ಭೇಟಿ, ರೈತ-ವಿಜ್ಞಾನಿಗಳ ಸಂವಾದ, ಲಿಚ್ಚಿಯಲ್ಲಿ ಗರ್ಡಲಿಂಗ್ ತಂತ್ರಜ್ಞಾನದ ಮಾಹಿತಿ ಕಾರ್ಯಾಗಾರ ಗಮನ ಸೆಳೆಯಿತು.

    ಆಫ್ ಸೀಜನ್ ಲಿಚ್ಚಿ ಹಣ್ಣಿಗೆ ಬರುವ ಸಮಸ್ಯೆಗಳ ಕುರಿತು ಕೇಂದ್ರದ ಹಣ್ಣು ವಿಜ್ಞಾನಿ ಡಾ.ಮುರುಳೀಧರ್ ಹಾಗೂ ಯಶಸ್ವಿ ಲಿಚ್ಚಿ ಬೇಸಾಯಕ್ಕೆ ಬೇಕಾಗುವ ತಾಂತ್ರಿಕತೆಗಳು ಎಂಬ ವಿಷಯ ಕುರಿತು ಐಸಿಏಆರ್‌ಎನ್‌ಆರ್‌ಸಿ ಯ ನುರಿತ ತಜ್ಞರು ಹಾಗೂ ನಿರ್ದೇಶಕ ಡಾ.ಬಿಕಾಸ್‌ದಾಸ್ ಬೆಳೆಗಾರರಿಗೆ ಮಾಹಿತಿ ನೀಡಿದರು.

    ಬೆಂಗಳೂರಿನ ಐಸಿಎಆರ್‌ಐಐಎಚ್‌ಆರ್‌ನ ನಿರ್ದೇಶಕ ಡಾ.ಸಂಜಯ್ ಕುಮಾರ್ ಸಿಂಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ಪ್ರಕಾಶ್ ಪಾಟೀಲ್, ಪ್ರಗತಿಪರ ಕಾಫಿ ಬೆಳೆಗಾರ ಬೋಸ್ ಮಂದಣ್ಣ, ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಕೇಂದ್ರದ ಮೇಲ್ವಿಚಾರಕ ಡಾ.ರಾಜೇಂದಿರನ್ ಪಾಲ್ಗೊಂಡಿದ್ದರು. ಕಾರ್ಯಾಗಾರದಲ್ಲಿ 200ಕ್ಕೂ ಅಧಿಕ ಜನರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts