More

    ಓದುವ ಬೆಳಕು ಅಭಿಯಾನಕ್ಕೆ ಚಾಲನೆ ಸಿಇಒ ಚಾಲನೆ

    ಚಿತ್ರದುರ್ಗ: ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಜನ್ಮ ದಿನ-ಮಕ್ಕಳ ದಿನಾಚರಣೆ ಅಂಗವಾಗಿ ಜಿಪಂ,ವಿವಿಧ ತಾಪಂಗಳ ಆಶ್ರಯದಲ್ಲಿ ಜಿಲ್ಲೆಯ ಹಲವು ಗ್ರಾಪಂಗಳಲ್ಲಿ ಓದುವ ಬೆಳಕು ಕಾರ‌್ಯಕ್ರಮಕ್ಕೆ ಶನಿವಾರ ಚಾಲನೆ ದೊರೆಯಿತು. ಚಿತ್ರದುರ್ಗ ತಾಲೂಕು ತಮಟಕಲ್ಲು ಗ್ರಾಮದ ಶ್ರೀ ಆಂಜನೇಯ ದೇವಾಲಯ ಆವರಣದಲ್ಲಿ ಈ ಅಭಿಯಾನಕ್ಕೆ ಜಿಪಂ ಸಿಇಒ ಚಾಲನೆ ನೀಡಿ ಮಾತನಾಡಿದರು.

    ಕೋವಿಡ್‌ನ ಈ ಸಂಕಷ್ಟದ ಸಮಯದಲ್ಲಿ 6-18 ವರ್ಷದೊಳಗಿನ ಮಕ್ಕಳಲ್ಲಿ ಓದುವ ಹವ್ಯಾಸ ರೂಢಿಸಿ,ಅವರ ಮಾನಸಿಕ,ಶೈಕ್ಷಣಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಕಾರ‌್ಯಕ್ರಮ ರೂಪಿಸಿದೆ. ತಾಲೂಕಿಗೆ ಒಂದರಂತೆ ಜೋಳಿಗೆ ಹೊಂದಿರುವ ಆಟೋಗಳು ಆಯಾ ತಾಲೂಕುಗಳಲ್ಲಿ ಸಂಚರಿಸಿ ಜನರಿಂದ ಪುಸ್ತಕಗಳನ್ನು ದಾನ ಪಡೆದು ಸ್ಥ ಳೀಯ ಗ್ರಾಪಂ ಗ್ರಂಥಾಲಯಗಳಿಗೆ ಕೊಡಲಿವೆ. ಕಾಪೋರೇಟ್ ಸಂಸ್ಥೆಗಳು,ಸ್ವಯಂ ಸೇವಾ ಸಂಸ್ಥೆಗಳು ಮತ್ತಿತರ ಸಂಸ್ಥೆಗಳಿಂದಲೂ ಪುಸ್ತ ಕಗಳ ದಾನ ಪಡೆಯಲಾಗುವುದು.

    ನ.14ರಿಂದ ಜ.4ವರೆಗೆ ಗ್ರಂಥಾಲಯ ಸದಸ್ಯತ್ವಕ್ಕಾಗಿ ಮಕ್ಕಳ ಹೆಸರನ್ನು ನೋಂದಾಯಿಸಲಾಗುವುದು. ಎಷ್ಟು ಮಕ್ಕಳು ಸದಸ್ಯತ್ವಕ್ಕೆ ನೋಂದಾಯಿಸಿದ್ದಾರೆ ಎಂಬ ಮಾಹಿತಿಯನ್ನು ನಿತ್ಯ ಪಡೆಯಲಾಗುವುದು. ಸದಸ್ಯತ್ವ ಪಡೆದ ಮಗುವಿಗೆ ಒಂದು ಪುಸ್ತಕವನ್ನು ಉಚಿತ ವಾಗಿ ಕೊಡಲಾಗುವುದು. ಸದಸ್ಯತ್ವ ಠೇವಣಿ,ಉಚಿತ ಪುಸ್ತಕಕ್ಕಾಗಿ ಗ್ರಂಥಾಲಯ ಸೆಸ್ ಬಳಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ 189 ಗ್ರಾ ಪಂಗಳ ವ್ಯಾಪ್ತಿಯಲ್ಲೂ ಗ್ರಂಥಾಲಯಗಳಿದ್ದು,ಆಯ್ದ ಗ್ರಂಥಾಲಯಗಳನ್ನು ಹೈಟೆಕ್ ಗೊಳಿಸುವ ಚಿಂತನೆ ಇದೆ ಎಂದರು. ತಾಪಂ ಇಒ ಕೃಷ್ಣನಾಯಕ್,ಜಿಆರ್‌ಹಳ್ಳಿ ಪಿಡಿಒ ಇ.ಶೃತಿ,ತಾಪಂ ಐಇಸಿ ಕೋ ಆರ್ಡಿನೇಟರ್ ಸತ್ಯನಾರಾಯಣ,ತಾಂತ್ರಿಕ ಸಹಾಯಕ ದಿನೇಶ್, ರೇವಣ್ಣ,ಸಣ್ಣ ಹನುಮಂತಪ್ಪ,ಮಾರುತಿ,ಗಿರೀಶ್,ರಮೇಶ್ ಮೊದಲಾದ ಗ್ರಾಮಸ್ಥರು ಇದ್ದರು.

    ಮುಹೂರ್ತ ಟ್ರೇಡಿಂಗ್​ನಲ್ಲಿ ಸಾರ್ವಕಾಲಿಕ ಎತ್ತರಕ್ಕೇರಿದ ಸೆನ್ಸೆಕ್ಸ್, ನಿಫ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts