More

    ಟ್ರಕ್​ ಹರಿದು ರಸ್ತೆಯಲ್ಲಿ ನರಳುತ್ತಾ ಸಹಾಯಕ್ಕೆ ಅಂಗಲಾಚಿದ್ರೂ ನೆರವಿಗೆ ಬಾರದೇ ಸೆಲ್ಫಿ ಕ್ಲಿಕ್ಕಿಸಿಕೊಂಡ ದಾರಿಹೋಕರು

    ಭುವನೇಶ್ವರ: ಬುಧವಾರ ಬೆಳಗ್ಗೆ ಟ್ರಕ್​ ಹರಿದು 35 ವರ್ಷದ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಒಡಿಶಾದ ಕೋಸ್ಟಲ್​ ಭದ್ರಕ್​ ಜಿಲ್ಲೆಯಲ್ಲಿ ನಡೆದಿದೆ.

    ಅಪಘಾತ ಸಂಭವಿಸಿದ ಬಳಿಕ ಗಂಭೀರ ಗಾಯಗಳಿಂದ ಸುಮಾರು ಅರ್ಧಗಂಟೆಯವರೆಗೂ ರಸ್ತೆಯಲ್ಲಿ ನರಳಾಡುತ್ತಿದ್ದ ಆತನನ್ನು ದಾರಿಹೋಕರು ಆಸ್ಪತ್ರೆಗೆ ದಾಖಲಿಸಿದೆ, ಸೆಲ್ಫಿ ಫೋಟೋ ಮತ್ತು ವಿಡಿಯೋಗಳನ್ನು ತೆಗೆದುಕೊಂಡು ಅಮಾನವೀಯವಾಗಿ ನಡೆದುಕೊಂಡಿದ್ದಾರೆ.

    ಗೆಲ್ಪುರ್​ ಗ್ರಾಮದವರಾದ ದೇವೇಂದ್ರ ಸಾಹು ಭದ್ರಕ್​ ಜಿಲ್ಲೆಗೆ ತೆರಳಿದ್ದರು. ಇದೇ ವೇಳೆ ಸಿಮೆಂಟ್​ ತುಂಬಿದ ಟ್ರಕ್​ ಆತನಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಮೇಲೆ ಹರಿದಿದೆ. ಭದ್ರಕ್​ನ ಶಹಪುರ್​ ಚೌಕ್ ಬಳಿಕ ರಾಷ್ಟ್ರೀಯ ಹೆದ್ದಾರಿ 16ರಲ್ಲಿ ಅಪಘಾತ ನಡೆದಿದೆ.​ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲೇ ಸುಮಾರು 30 ನಿಮಿಷಗಳವರೆಗೆ ನರಳಾಡುತ್ತಿದ್ದ ವ್ಯಕ್ತಿ ದಾರಿಹೋಕರನ್ನು ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಆದರೆ, ನೆರವಿಗೆ ಬಾರದ ಮಂದಿ ಆಸ್ಪತ್ರೆಗೆ ದಾಖಲಿಸುವ ಬದಲು ತಮ್ಮ ಸ್ಮಾರ್ಟ್​ಫೋನ್​ಗಳನ್ನು ಫೋಟೋ ಮತ್ತು ವಿಡಿಯೋಗಳನ್ನು ತೆಗೆದುಕೊಂಡು ಕ್ರೂರತ್ವ ಮೆರೆದಿದ್ದಾರೆ. ಇನ್ನು ಮುಂದೆ ಹೋಗಿ ಒಡಿಯಾ ಡೈಲಿ ವೆಬ್​ಸೈಟ್​ ವರದಿಗಾರ ಫೇಸ್​ಬುಕ್​ ಲೈವ್​ಗೆ ಬಂದಿದ್ದ ಎಂದು ಹೇಳಲಾಗಿದೆ.

    ಬಳಿಕ ದಾರಿಹೋಕರು ಪೊಲೀಸರಿಗೆ ಮಾಹಿತಿ ತಿಳಿಸಿದಾದರೂ, ಅವರ ಬರುವಷ್ಟರಲ್ಲಿ ಸಮಯ ಮೀರಿತ್ತು. ಆತನನ್ನು ಬಳಿಕ ಭದ್ರಕ್​ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಿದಾದರೂ ಆಗಲೇ ಸಾಕಷ್ಟು ರಕ್ತ ಹರಿದಿದ್ದರಿಂದ ಉಳಿಸಲು ಸಾಧ್ಯವಾಗಲಿಲ್ಲ ಎಂದು ವೈದ್ಯರು ಹೇಳಿದ್ದಾಗಿ ರಸ್ತೆ ಸುರಕ್ಷತಾ ಸಮಿತಿಯ ಸದಸ್ಯ ಅತಿಶ್​ ಕುಮಾರ್​ ಬೆಹೆರಾ ತಿಳಿಸಿದ್ದಾರೆ. ದಾರಿಹೋಕರು ಸಮಯಪ್ರಜ್ಞೆ ತೋರಿದ್ದರೆ ಆತನನ್ನು ಬದಕಿಸಬಹುದಿತ್ತು ಎಂದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts