More

    ಕಳೆದ ವರ್ಷ ಬಜೆಟ್​ ಪ್ರತಿ ತಯಾರಿಕೆಯಲ್ಲಿ 57 ಲಕ್ಷ ಪುಟಗಳ ಮುದ್ರಣ ಕಡಿಮೆ ಮಾಡಿ, 700 ಮರಗಳನ್ನು ಉಳಿಸಿದ್ದ ಒಡಿಶಾ ರಾಜ್ಯ ಸರ್ಕಾರ…

    ಭುವನೇಶ್ವರ್: ರಾಜ್ಯದಲ್ಲಿ 2019-20ನೇ ಆರ್ಥಿಕ ವರ್ಷದಲ್ಲಿ ಒಡಿಶಾ ರಾಜ್ಯಸರ್ಕಾರ ಬಜೆಟ್​ನ್ನು ಭಾಗಶಃ ಕಾಗದ ರಹಿತಗೊಳಿಸುವ ಮೂಲಕ 700 ದೊಡ್ಡ ಮರಗಳನ್ನು ಉಳಿಸಿದೆ ಎಂದು ರಾಜ್ಯಪಾಲ ಗಣೇಶಿ ಲಾಲ್​ ತಿಳಿಸಿದ್ದಾರೆ.

    ಶುಕ್ರವಾರ ಬಜೆಟ್ ಅಧಿವೇಶನ ಶುರುವಾಗುವುದಕ್ಕೂ ಮೊದಲು ಮಾತನಾಡಿದ ಅವರು, ಕಳೆದ ಬಾರಿ ಬಜೆಟ್​ನಲ್ಲಿ ಡಿಜಿಟಲ್​ ವಿಧಾನಗಳನ್ನು ಬಳಸಿಕೊಂಡಿದ್ದರಿಂದ ಸುಮಾರು 57 ಲಕ್ಷ ಪುಟಗಳ ಮುದ್ರಣ ಮಾಡುವುದು ಕಡಿಮೆಯಾಗಿತ್ತು. ಇದರಿಂದಾಗಿ 700 ದೊಡ್ಡ ದೊಡ್ಡ ಮರಗಳು ಉಳಿದಿವೆ ಎಂದು ಹೇಳಿದರು.

    ಭವಿಷ್ಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಕಾಗದ ರಹಿತ ಬಜೆಟ್​ ತಯಾರಿ ಮಾಡುವ, ಪೂರ್ಣವಾಗಿ ಡಿಜಿಟಲ್​ಗೆ ಪರಿವರ್ತನೆಯಾಗುವ ಉದ್ದೇಶ ಹೊಂದಿದೆ. ಇದರಿಂದ ತುಂಬ ಅನುಕೂಲವಾಗಲಿದೆ ಎಂದು ಗಣೇಶಿ ಲಾಲ್​ ತಿಳಿಸಿದರು.
    ಅಷ್ಟೇ ಅಲ್ಲ ರಾಜ್ಯ ಸರ್ಕಾರದ ಉದ್ಯೋಗಿಗಳಿಗೆ ಒಂದೇ ಪುಟದ ಸ್ಯಾಲರಿ ಬಿಲ್​ ಹಾಗೂ ಪಿಂಚಣಿ ಪೇಪರ್​ಗಳನ್ನು ಪರಿಚಯಿಸಲಾಗಿದೆ. ಇವುಗಳನ್ನು ಸಂಯೋಜಿತ ಹಣಕಾಸು ನಿರ್ವಹಣಾ ವ್ಯವಸ್ಥೆ (Integrated Financial Management System (IFMS))ಯ ಮೂಲಕ ವಿದ್ಯುನ್ಮಾನವಾಗಿ ಪರಿಷ್ಕರಿಸಲಾಗುತ್ತಿದೆ ಎಂದು ತಿಳಿಸಿದರು.

    ಸರ್ಕಾರದ ಎಲ್ಲ ಇಲಾಖೆಗಳು, ಸಚಿವಾಲಯಗಳಲ್ಲಿ ಒಡಿಶಾ ಸೆಕ್ರೆಟರಿಯಟ್ ವರ್ಕ್​​ಫ್ಲೋ ಆಟೊಮೇಷನ್ ಸಿಸ್ಟಮ್​​ನ್ನು(ಒಎಸ್​ಡಬ್ಲ್ಯೂಎಎಸ್​) ರಾಜ್ಯ ಸರ್ಕಾರ ಜಾರಿ ಮಾಡಿದೆ.

    ಈ ಒಎಸ್​ಡಬ್ಲ್ಯೂಎಎಸ್​ನಿಂದಾಗಿ ಕಾಗದ ಬಳಕೆ ಕಡಿಮೆಯಾಗಿದೆ. ಇದರಿಂದ ಹೆಚ್ಚಿನ ಡಾಟಾಗಳ ಸಂಗ್ರಹ, ನಿರ್ವಹಣೆ, ಮರುಬಳಕೆ ಸುಲಭವಾಗಿ ಆಗುತ್ತಿದೆ. ಬೇಕಾದ ದಾಖಲೆಗಳನ್ನು ವೇಗವಾಗಿ ಹುಡುಕಬಹುದು. ಆಗಿಂದಾಗೆ ಅನುಮೋದನೆಗಳನ್ನು ಪಡೆಯಬಹುದು, ಇದರಲ್ಲಿ ತುರ್ತು ಆಗಬೇಕಾದ ಕೆಲಸಗಳ ದಾಖಲೆಗಳ ಬಗ್ಗೆ ಎಸ್​ಎಂಎಸ್​ ಅಲರ್ಟ್​ ಕೂಡ ಬರುತ್ತದೆ. ಈ ಎಲ್ಲ ಕೆಲಸಗಳನ್ನು ಕಡಿಮೆ ಪ್ರಮಾಣದ ಕಾಗದ ಬಳಸಿ ಮಾಡಬಹುದು ಎಂದು ಹೇಳಿದ್ದರು.(ಪಿಟಿಐ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts