More

    ನಿವೇಶನ ಒತ್ತುವರಿ ತೆರವು ಮಾಡಲು ಆಗ್ರಹ

    ದೇವದುರ್ಗ: ಗಬ್ಬೂರು ಗ್ರಾಮದ ಸರ್ವೇ ನಂ. 942/*/1 ಜಾಗದ 1.30 ಎಕರೆ ಪ್ರದೇಶವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದು ತೆರವು ಮಾಡಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡುವಂತೆ ಶಿರಸ್ತೇದಾರ್ ಗೋವಿಂದಗೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮಂಗಳವಾರ ಮನವಿ ಸಲ್ಲಿಸಿತು.

    1.3 ಎಕರೆ ಜಾಗವನ್ನು ಆಶ್ರಯ ಯೋಜನೆಯಡಿ ಹಂಚಿಕೆ ಮಾಡಲಾಗಿದೆ. ಆದರೆ, ಈ ಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ನಿವೇಶನ ಮಾಡುತ್ತಿದ್ದಾರೆ. ಇದರಿಂದ ನೈಜ ಫಲಾನುಭವಿಗಳಿಗೆ ಸಂಕಷ್ಟವಾಗುತ್ತಿದೆ. ಈ ಬಗ್ಗೆ ದೂರು ನೀಡಿದರೂ ಕ್ರಮಕೈಗೊಳ್ಳುತ್ತಿಲ್ಲ.

    ಇದನ್ನೂ ಓದಿ: ಅಭಯಾರಣ್ಯ ಒತ್ತುವರಿ ಮಾಡಿದ್ದ ಐವರ ಮೇಲೆ ಕೇಸ್

    ವಸತಿ ಫಲಾನುಭವಿಗಳು ಗ್ರಾಪಂಗೆ 3,495 ರೂ. ಕರ ತುಂಬಿದ್ದಾರೆ. ಸದರಿ ಜಾಗ 39 ಫಲಾನುಭವಿಗಳಿಗೆ ಸೇರಿದೆ. ಆದರೆ, ಹಲವರು ಜಾಗ ಅತಿಕ್ರಮಣ ಮಾಡಿ ಬಣವೆ, ಶೆಡ್ ಹಾಕಿಕೊಂಡಿದ್ದು, ಫಲಾನುಭವಿಗಳು ಕೇಳಿದರೆ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು.

    ಒತ್ತುವರಿ ಮಾಡಲಾದ ಜಾಗ ತೆರವು ಮಾಡಿ ಫಲಾನುಭವಿಗಳಿಗೆ ಹದ್ದುಬಸ್ತು ಮಾಡಿಕೊಡಬೇಕು. ನಿರ್ಲಕ್ಷ್ಯ ಮಾಡಿದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪುರ, ರಾಮಣ್ಣ ತವುಗಾ, ರಮೇಶ ಕಾರ್ಪೇಂಟರ್, ರಂಗಪ್ಪ, ಪರಶುರಾಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts