More

    ನಿಯಮ ಬಾಹಿರವಾಗಿ ವಾಹನ ಗುತ್ತಿಗೆಗೆ ಆಕ್ಷೇಪ

    ಚಿಕ್ಕಮಗಳೂರು: ಕಾರ್ಮಿಕ ಇಲಾಖೆ ನಿಯಮ ಬಾಹಿರವಾಗಿ ಗುತ್ತಿಗೆ ಆಧಾರದ ಮೇಲೆ ವಾಹನ ಪಡೆದವರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ದಲಿತ ಪ್ರಗತಿಪರ ಒಕ್ಕೂಟದ ಮುಖಂಡರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರ್ ಮನು ಅವರಿಗೆ ಮನವಿ ಸಲ್ಲಿಸಿದರು.
    ಒಕ್ಕೂಟದ ಅಧ್ಯಕ್ಷ ದಂಟರಮಕ್ಕಿ ಶ್ರೀನಿವಾಸ್ ಮಾತನಾಡಿ,ಜಿಲ್ಲಾ ಕಾರ್ಮಿಕ ಇಲಾಖೆಯಲ್ಲಿ ನಿಯಮ ಬಾಹಿರವಾಗಿ ನಾಲ್ಕುಚಕ್ರ ವಾಹನವನ್ನು ಬಾಡಿಗೆ ಪಡೆಯಲಾಗುತ್ತಿದೆ. ನಿಯಮದ ಪ್ರಕಾರ ಪತ್ರಿಕಾ ಪ್ರಕಟಣೆ ಅಥವಾ ಸೂಚನಾ ಫಲಕದಲ್ಲಿ ಪ್ರಕಟಿಸದೇ ಅನಧಿಕೃತವಾಗಿ ವಾಹನ ಬಾಡಿಗೆಗೆ ಪಡೆಯಲಾಗುತ್ತಿದೆ. ಕೂಡಲೇ ಗುತ್ತಿಗೆ ನವೀಕರಣ ರದ್ಧುಗೊಳಿಸಬೇಕು. ಜತೆಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
    ಕಳೆದ ಮೂರು ವರ್ಷಗಳಿಂದ ಒಂದೇ ವಾಹನವನ್ನು ಅಧಿನಕೃತವಾಗಿ ಪಡೆಯುತ್ತಿರುವ ಪರಿಣಾಮ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ. ಅದಲ್ಲದೇ ಮೇಲ್ನೋಟಕ್ಕೆ ಬಾಡಿಗೆ ಪಡೆದಿರುವ ವಾಹನ ಮಾಲೀಕರಿಂದ ಲಂಚ ಪಡೆದುಕೊಂಡು ಭ್ರಷ್ಟಚಾರ ನಡೆಸುತ್ತಿರುವ ಶಂಕೆಯಿದೆ ಎಂದು ದೂರಿದರು.
    ಕೂಡಲೇ ಜಿಲ್ಲಾಡಳಿತ ಕಾರ್ಮಿಕ ಇಲಾಖೆಯಲ್ಲಿ ಆಗಿರುವ ಲೋಪ ಸರಿಪಡಿಸಬೇಕು. ಗುತ್ತಿಗೆ ನವೀಕರಣ ರದ್ದುಪಡಿಸಿ ಹೊಸದಾಗಿ ಟೆಂಡರ್ ಕರೆಯಬೇಕು. ಜತೆಗೆ ಇಲಾಖೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತಕ್ರಮ ಕೈಗೊಂಡು ಅರ್ಹ ಫಲಾನುಭವಿಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
    ಒಕ್ಕೂಟದ ಮುಖಂಡರಾದ ಜಗದೀಶ್ ಹಿರೇಮಗಳೂರು, ಚಿದಾನಂದ್, ಸುರೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts