More

    ಶಿಸ್ತುಬದ್ಧ ಜೀವನದಿಂದ ವ್ಯಕ್ತಿತ್ವ ವಿಕಸನ, ವಿದ್ಯಾರ್ಥಿ ಸಂಸತ್ ಕಾರ್ಯಕ್ರಮದಲ್ಲಿ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅಭಿಮತ

    ಮಂಗಳೂರು: ವಿದ್ಯಾರ್ಥಿಗಳು ಸಾಮಾಜಿಕ ಮೌಲ್ಯಗಳನ್ನು ಎಳವೆಯಲ್ಲಿಯೇ ಬೆಳೆಸಿಕೊಳ್ಳಬೇಕು. ಜೀವನ ಕ್ರಮದಲ್ಲಿ ಶಿಸ್ತು ಬಹು ಮುಖ್ಯ. ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೂ ನಾಂದಿಯಾಗುತ್ತದೆ ಎಂದು ಬಿಜಿಎಸ್ ಎಜುಕೇಶನ್ ಸೆಂಟರ್ ಸಂಸ್ಥೆ ಕಾರ್ಯದರ್ಶಿ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.

    ಕಾವೂರಿನ ಬಿಜಿಎಸ್ ಎಜುಕೇಶನ್ ಸೆಂಟರ್ ವಿದ್ಯಾರ್ಥಿ ಸಂಸತ್ ಪ್ರತಿನಿಧಿಗಳಿಗೆ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ವಿದ್ಯಾರ್ಥಿಗಳು ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ನಾಯಕತ್ವವನ್ನು ರೂಡಿಸಿಕೊಳ್ಳಬೇಕು. ಶಿಸ್ತುಬದ್ಧ ಜೀವನ ಇದ್ದರೆ ಬಹುರೂಪಿಯಾಗಿ ಬೆಳೆಯಬಹುದಾಗಿದೆ ಎಂದರು,.

    ಲೋಕಾಯುಕ್ತ ಪೊಲೀಸ್ ಉಪಅಧೀಕ್ಷಕ ಚೆಲುವರಾಜು ಇದ್ದರು. ಬಿಜಿಎಸ್ ಎಜುಕೇಶನ್ ಸೆಂಟರ್‌ನ ಪ್ರಾಂಶುಪಾಲೆ ರೇಶ್ಮಾ ಸಿ.ನಾಯರ್ ವಿದ್ಯಾರ್ಥಿ ಸಂಸತ್ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಿಜಿಎಸ್ ಸಂಸ್ಥೆ ವ್ಯವಸ್ಥಾಪಕ ಸುಬ್ಬ ಕಾರಡ್ಕ, ಬಿಜಿಎಸ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸುಬ್ರಹ್ಮಣ್ಯ ಸಿ ಹಾಗೂ ಹೈಸ್ಕೂಲ್ ಮುಖ್ಯ ಶಿಕ್ಷಕಿ ಪ್ರಿಯಾ ಬಂಗೇರ ಉಪಸ್ಥಿತರಿದ್ದರು. ಶಿಕ್ಷಕಿ ಭಾಗ್ಯಲಕ್ಷ್ಮಿ ಸ್ವಾಗತಿಸಿ, ನಿವೇದಿತಾ ವಂದಿಸಿದರು. ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts