More

    ಸಂಭ್ರಮದಲ್ಲಿ ಮುಳುಗಿದ ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ತಂಡ

    ಸೌಥಾಂಪ್ಟನ್: ಚೊಚ್ಚಲ ಐಸಿಸಿ ಟ್ರೋಫಿ ಜಯಿಸಿದ ನ್ಯೂಜಿಲೆಂಡ್ ತಂಡದ ಕೆಲ ಕ್ರಿಕೆಟಿಗರು ಭರ್ಜರಿ ಸಂಭ್ರಮದ ಬಳಿಕ ತವರಿಗೆ ವಾಪಸಾದರು. ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು 8 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಕೆಲ ಆಟಗಾರರು ರಾತ್ರಿ ಪೂರ್ತಿ ಸಂಭ್ರಮದಲ್ಲಿ ತೇಲಿದರು. ಕನಸಿನ ಟ್ರೋಫಿಯೊಂದಿಗೆ ಕೆಲ ಆಟಗಾರರು ತವರಿಗೆ ಮರಳಿದರೆ, ನಾಯಕ ಕೇನ್ ವಿಲಿಯಮ್ಸನ್ ಸೇರಿದಂತೆ ಕೆಲ ಆಟಗಾರರು ಇಂಗ್ಲೆಂಡ್‌ನಲ್ಲೇ ಉಳಿದುಕೊಂಡಿದ್ದಾರೆ ಜುಲೈ 21 ರಿಂದ ನಡೆಯಲಿರುವ ದ ಹಂಡ್ರೆಡ್ ಟೂರ್ನಿಯಲ್ಲಿ ಆಡುವ ಸಲುವಾಗಿ ವಿಲಿಯಮ್ಸನ್, ಡೆವೊನ್ ಕಾನ್‌ವೇ, ಕೈಲ್ ಜೇಮಿಸನ್, ಕಾಲಿನ್ ಡಿ ಗ್ರಾೃಂಡ್‌ಹೋಮ್ ಇಂಗ್ಲೆಂಡ್‌ನಲ್ಲೇ ಉಳಿದುಕೊಂಡಿದ್ದಾರೆ.

    ಇದನ್ನೂ ಓದಿ: ಬಿಸಿಸಿಐಗೆ ಸಿಕ್ತು ನ್ಯೂಜಿಲೆಂಡ್ ಆಟಗಾರರಿಂದ ಸಿಹಿ ಸುದ್ದಿ..

    ತಂಡ ರಾತ್ರಿಪೂರ್ತಿ ಸಂಭ್ರಮದಲ್ಲಿ ಮುಳುಗಿತ್ತು. ಒಂದು ಅದ್ಭುತವಾದ ಕ್ರಿಕೆಟ್ ಪಂದ್ಯ ಗೆದ್ದಿದ್ದೇವೆ. 2 ವರ್ಷಗಳಿಂದ ಇಂಥ ಸಂಭ್ರಮಕ್ಕೆ ಕಾಯುತ್ತಿದ್ದೇವೆ’ ಎಂದು ನಾಯಕ ಕೇನ್ ವಿಲಿಯಮ್ಸನ್ ತಿಳಿಸಿದ್ದಾರೆ. ವಿಲಿಯಮ್ಸನ್ ಎರಡು ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 49 ಮತ್ತು ಅಜೇಯ 52 ರನ್ ಸಿಡಿಸಿದ್ದರು. ಬುಧವಾರ ಮುಕ್ತಾಯಗೊಂಡ ಚೊಚ್ಚಲ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ 21 ವರ್ಷಗಳ ನ್ಯೂಜಿಲೆಂಡ್ ತಂಡ ಚೊಚ್ಚಲ ಐಸಿಸಿ ಟ್ರೋಫಿ ಗೆದ್ದುಕೊಂಡಿತು.

    ಭಾರತ ತಂಡ ಮಣಿಸಿ ಟೆಸ್ಟ್ ವಿಶ್ವ ಚಾಂಪಿಯನ್ ಆದ ನ್ಯೂಜಿಲೆಂಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts