More

  ಕಾಡು ಹಂದಿ ದಾಳಿಗೆ ಅಡಕೆ ಸಸಿ ನಾಶ

  ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಗದ್ದೆಗಳಲ್ಲಿ ಭಾನುವಾರ ರಾತ್ರಿ ಕಾಡು ಹಂದಿಗಳು ದಾಳಿ ಮಾಡಿ 250ಕ್ಕೂ ಹೆಚ್ಚು ಅಡಕೆ ಸಸಿಗಳನ್ನು ನಾಶ ಮಾಡಿವೆ.

  ಸನವಳ್ಳಿ ಗ್ರಾಮದ ಅರಣ್ಯ ಅಂಚಿನಲ್ಲಿರುವ ದಿವಾಕರ ಬಸವಂತರಾವ್ ಎಂಬುವವರ ಸರ್ವೆ ನಂಬರ 34/35/2ರ ತೋಟದಲ್ಲಿ ಮೂರ್ನಾಲ್ಕು ವರ್ಷದ 250 ಅಡಕೆ ಸಸಿಗಳನ್ನು ಕಾಡು ಹಂದಿಗಳು ದಾಳಿ ಮಾಡಿ ತಿಂದು, ತುಳಿದು ಹಾನಿಮಾಡಿವೆ.

  ಸಾಲ ಮಾಡಿ ಬೆಳೆದ ಅಡಕೆ ಸಸಿಗಳನ್ನು ಕಾಡು ಹಂದಿಗಳು ನಾಶಮಾಡುತ್ತಿವೆ. ಒಂದೆಡೆ ನೀರಿಲ್ಲದೆ ಸಸಿಗಳು ಒಣಗುತ್ತಿದ್ದರೆ, ಮತ್ತೊಂದು ಕಡೆ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ನಾಶವಾಗುತ್ತಿದೆ. ಇದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts