More

    ಶ್ರಮಿಕ ವರ್ಗದವರಿಗೆ ಕೂಸಿನ ಮನೆ ವರದಾನ

    ಕಿಕ್ಕೇರಿ: ಶ್ರಮಿಕ ವರ್ಗದವರ ಕಂದಮ್ಮಗಳ ಲಾಲನೆ-ಪಾಲನೆಗಾಗಿ ಸರ್ಕಾರದ ಕೂಸಿನ ಮನೆ ವರದಾನವಾಗಿದೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.

    ಹೋಬಳಿಯ ಐಕನಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಕೂಸಿನ ಮನೆ ಆರೈಕೆ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

    ಜಾಬ್‌ಕಾರ್ಡ್ ಹೊಂದಿರುವ ಕೂಲಿಕಾರ್ಮಿಕ ಮಕ್ಕಳಿಗಾಗಿ ಈ ಯೋಜನೆ ಸಹಕಾರಿಯಾಗಿದೆ. ಕಾರ್ಮಿಕರು ತಮ್ಮ ಮಕ್ಕಳನ್ನು ಜತೆಯಲ್ಲಿ ಕರೆದುಕೊಂಡು ಕೆಲಸ ಮಾಡಲು ಕಷ್ಟವಾಗಲಿದೆ. ಮಕ್ಕಳ ದೈಹಿಕ, ಮಾನಸಿಕ ಆರೋಗ್ಯಕ್ಕೆ ತೊಂದರೆಯಾಗಲಿದೆ. ಈ ನಿಟ್ಟಿನಲ್ಲಿ 3 ತಿಂಗಳಿನಿಂದ 6 ವರ್ಷದ ಮಕ್ಕಳು ಈ ಕೇಂದ್ರದಲ್ಲಿ ಬಿಟ್ಟರೆ ಈ ಮಕ್ಕಳ ಆಹಾರ ಮತ್ತಿತರ ಕ್ಷೇಮವನ್ನು ಕೇಂದ್ರ ನೋಡಿಕೊಳ್ಳಲಿದೆ ಎಂದರು.

    ಗ್ರಾಪಂ ವ್ಯಾಪ್ತಿಯ ಪ್ರತಿ ಮನೆಯವರು ಕಡ್ಡಾಯವಾಗಿ ಇ-ಸ್ವತ್ತು ಮಾಡಿಸಿಕೊಳ್ಳಲು ಮುಂದಾಗಿ. ತಮ್ಮ ಸೂಕ್ತ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿ ತ್ವರಿತವಾಗಿ ಮಾಡಿಸಿಕೊಳ್ಳಿ. ಗ್ರಾಮೀಣ ಪ್ರದೇಶದಲ್ಲಿ ಇಂಚಿಂಚು ಜಾಗಕ್ಕೂ ಕಲಹ, ವ್ಯಾಜ್ಯಗಳು ನಡೆಯುತ್ತಿದೆ. ಮಾನಸಿಕ, ಆರ್ಥಿಕವಾಗಿ ನೆಮ್ಮದಿ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈಗಿರುವಾಗ ಬದುಕು ಕಟ್ಟಿಕೊಳ್ಳುವುದು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಈ-ಸ್ವತ್ತುಗಳನ್ನು ಮಾಡಿಕೊಡಲು ಅಧಿಕಾರಿಗಳು ಜನರನ್ನು ಅಲೆದಾಡಿಸದಿರಿ. ಅಕ್ರಮವಾಗಿ ಬೇರೆಯವರಿಗೆ ಖಾತೆಗಳನ್ನು ಕೂರಿಸದಂತೆ ಎಚ್ಚರಿಕೆ ಇರಲಿ ಎಂದು ಸಲಹೆ ನೀಡಿದರು.

    ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 17ಮಕ್ಕಳನ್ನು ಕೂಸಿನ ಮನೆ ಆರೈಕೆಗೆ ಗುರುತಿಸಲಾಗಿದ್ದು, ಮಕ್ಕಳಿಗೆ ಸಿಹಿ ಹಂಚಲಾಯಿತು. ಗ್ರಾಪಂ ಅಧ್ಯಕ್ಷೆ ಸುಧಾ ದೇವರಾಜೇಗೌಡ, ಉಪಾಧ್ಯಕ್ಷೆ ಭಾಗ್ಯಮ್ಮ ಅಶೋಕನಾಯಕ್, ತಾಪಂ ಇಒ ಸತೀಶ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ತಾಲೂಕು ಸಹಾಯಕ ನಿರ್ದೇಶಕ ಡಾ.ನರಸಿಂಹರಾಜು, ಶಿಶುಪಾಲನಾ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಅರುಣಕುಮಾರ್, ಪಿಡಿಒ ಬಿ.ಎಸ್.ಅರುಣ್, ಮುಖಂಡರಾದ ಎ.ಎಸ್.ಮಂಜೇಗೌಡ, ಕುಮಾರ್, ಅಂಬುಜಾ ಉದಯಶಂಕರ್, ದೇವರಾಜು, ಸುಮಿತ್ರಾ ಶಂಭುಲಿಂಗಯ್ಯ, ಶಂಕರ್, ಪ್ರಸನ್ನ, ಪಲ್ಲವಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts