More

    ಶೌಚಾಲಯದಲ್ಲಿ ಚಿತ್ರೀಕರಣ ಮಾಡಿರುವುದೇ ಮಹಾಪರಾಧ: ಯಶ್ಪಾಲ್​ ಸುವರ್ಣ

    ಉಡುಪಿ: ಖಾಸಗಿ ಪ್ಯಾರ ಮೆಡಿಕಲ್​ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟು ಹಿಂದು ವಿದ್ಯಾರ್ಥಿನಿಯರ ವಿಡಿಯೋ ಮಾಡಿರುವುದರ ಹಿಂದೆ ಕಾಣದ ಕೈಗಳ ಕೈವಾಡ ಇದೆ. ಈ ರೀತಿಯ ಹುಡುಗಾಟಿಕೆ ಯಾರು ಮಾಡಿದರೂ ತಪ್ಪು. ಘಟನೆಯ ಬಗ್ಗೆ ಸಂಶಯವಿದೆ. ಪೋಲಿಸ್​ ಇಲಾಖೆ ಮೂರು ಯುವತಿಯರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳ ಗಮನಕ್ಕೂ ತರಲಾಗುವುದು ಎಂದು ಶಾಸಕ ಯಶ್ಪಾಲ್​ ಸುವರ್ಣ ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ಜಿಲ್ಲೆಯಾಗಿದ್ದು, ಮಹಿಳೆಯರಿಗೆ ಗೌರವ ಕೊಡುವ ಜಿಲ್ಲೆ. ಆದರೆ ಈ ಮೂರು ಹುಡುಗಿಯರ ವರ್ತನೆಯಿಂದ ತಲೆ ತಗ್ಗಿಸುವಂತಾಗಿದೆ. ದೇಶದ ಇತರೆ ರಾಜ್ಯಗಳಲ್ಲಿ ಇದೇ ರೀತಿ ಶೌಚಾಲಯದಲ್ಲಿನ ವಿಡಿಯೋ ಮಾಡಿ ಬೆದರಿಸಿ, ನಂತರ ಆ ಹುಡುಗಿಯರನ್ನು ಹೇಯ ಕೃತ್ಯಗಳಿಗೆ ಬಳಸಿಕೊಂಡ ಘಟನೆಗಳಿವೆ. ಇಲ್ಲಿಯೂ ಅದೇ ರೀತಿಯ ಘಟನೆ ನಡೆಸಲು ಕೆಲವು ಮೂಲಭೂತವಾದಿಗಳು ಹುನ್ನಾರ ನಡೆಸಿರುವ ಬಗ್ಗೆ ಶಂಕೆ ಇದೆ. ಕೃತ್ಯಕ್ಕೆ ಬಳಸಿದ ಮೊಬೈಲ್​ ದಾಖಲೆಗಳನ್ನು ಕಲೆ ಹಾಕಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

    ಸಂತ್ರಸ್ತ ವಿದ್ಯಾರ್ಥಿನಿಯರ ಜೊತೆ ಮಾತನಾಡಲು ಮಹಿಳಾಮೋರ್ಚಾ ತಂಡದೊಂದಿಗೆ ಕಾಲೇಜಿಗೆ ಭೇಟಿ ನೀಡಿ ಮಾಹಿತಿಯನ್ನು ಕಲೆ ಹಾಕುತ್ತೇನೆ. ನಮ್ಮ ಕಡೆಯಿಂದಲೂ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿ ಪೋಲಿಸ್​ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇನೆ ಎಂದರು.

    ಸುಮೋಟೊ ದಾಖಲಿಸಬೇಕು

    ಮುಸ್ಲಿಂ ವಿದ್ಯಾರ್ಥಿನಿಯರ ನಡೆ ಸಂಶಯ ಹುಟ್ಟಿಸುತ್ತಿದೆ. ಜಿಹಾದಿ ಸಂಘಟನೆಗಳ ಕೈವಾಡ ಸಂಶಯ ಇದೆ. ವಿಡಿಯೋ ಕ್ಲಿಪಿಂಗ್​ ಇದೆಯೋ ಇಲ್ಲವೋ ಗೊತ್ತಿಲ್ಲ. ಪೋಲಿಸ್​ ಇಲಾಖೆ ಸುಮೋಟೊ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸಬೇಕು. ಇಲ್ಲವಾದಲ್ಲಿ ಹೋರಾಟ ಮಾಡಿಯೇ ಮಾಡುತ್ತೇನೆ. ಹಿಜಾಬ್​ ನಲ್ಲಿ ನ್ಯಾಯ ದೊರಕಿಸಿ ಕೊಟ್ಟಂತೆ, ಈ ಪ್ರಕರಣದಲ್ಲಿಯೂ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇನೆ ಎಂದರು.

    ರಶ್ಮಿ ಸಾಮಂತ್​ಗೆ ಕಿರುಕುಳ ಸಲ್ಲದು

    ಘಟನೆಯ ಬಗ್ಗೆ ಟ್ವೀಟ್​ ಮಾಡಿದ್ದ ರಶ್ಮಿ ಸಾಮಂತ್​ ಅವರ ಮನೆಗೆ ಪೋಲಿಸರನ್ನು ಕಳುಹಿಸಿ ಕಿರುಕುಳ ನೀಡಿದರೆ ಸಹಿಸಲು ಸಾಧ್ಯವಿಲ್ಲ. ರಶ್ಮಿ ಸಾಮಂತ್​ ಮನೆಯವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ರಾಷ್ಟ್ರೀಯ ಚಿಂತನೆಗಳನ್ನು ಪ್ರತಿಪಾದಿಸುವವರಿಗೆ ಕಿರುಕುಳ ನೀಡಿದರೇ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts