More

    ಬೆಳಗಾವಿ ಜಿಲ್ಲೆಯಲ್ಲಿ ಮಂಗಳವಾರ ಮತ್ತೆರಡು ಪಾಸಿಟಿವ್

    ಬೆಳಗಾವಿ: ಜಿಲ್ಲೆಯಲ್ಲಿ ಮಂಗಳವಾರ ಎರಡು ಕರೊನಾ ಪ್ರಕರಣಗಳು ದೃಢಪಟ್ಟಿವೆ. 6 ವರ್ಷದ ಬಾಲಕಿ ಹಾಗೂ 21 ವರ್ಷದ ಯುವತಿಯಲ್ಲಿ ಮಾರಕ ಕರೊನಾ ಸೋಂಕು ಕಾಣಿಸಿಕೊಂಡಿದೆ.

    ಈ ಇಬ್ಬರಲ್ಲಿ ಒಬ್ಬರು ಬೆಳಗಾವಿ ನಗರ, ಇನ್ನೊಬ್ಬರು ಸವದತ್ತಿಯವರಾಗಿದ್ದಾರೆ. ಜಿಲ್ಲೆಯಲ್ಲಿ ಇದೀಗ ಕರೊನಾ ಸೋಂಕಿತರ ಸಂಖ್ಯೆ 305ಕ್ಕೆ ಏರಿಕೆ ಯಾಗಿದೆ. ಮಹಾರಾಷ್ಟ್ರ ದಿಂದ ಬಂದಿದ್ದ ಯುವತಿ ಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಪಿ- 5,385 ಸಂಪರ್ಕಿತ ವ್ಯಕ್ತಿಯಿಂದ ಬಾಲಕಿಗೆ ಕರೊನಾ ಸೋಂಕು ತಗುಲಿದೆ.

    2,981 ವರದಿ ಬಾಕಿ: 2,981 ಕರೊನಾ ಶಂಕಿತರ ಗಂಟಲು ದ್ರವದ ಪರೀಕ್ಷಾ ವರದಿ ಬರುವುದು ಬಾಕಿ ಇದೆ. ಕರೊನಾಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 20,914 ಜನರ ಮೇಲೆ ನಿಗಾ ವಹಿಸಲಾಗಿದೆ. 5,948 ಜನರು 14 ದಿನ ಮನೆ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

    28 ಜನರನ್ನು ಐಸೋಲೇಟೆಡ್ ವಾರ್ಡ್ ನಲ್ಲಿರಿಸಲಾಗಿದೆ. 4,162 ಜನ 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 10,776 ಜನ 28 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 19,618 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. 15,888 ಮಾದರಿಗಳು ನೆಗೆಟಿವ್ ಬಂದಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts