More

    ನೂರರ ಗಡಿ ದಾಟಿದ ಸಾವಿನ ಸಂಖ್ಯೆ

    ಮೈಸೂರು: ಜಿಲ್ಲೆಯಲ್ಲಿ ಕರೊನಾ ಸಾವಿನ ಸಂಖ್ಯೆ ಪ್ರತಿನಿತ್ಯ ಏರಿಕೆ ಕಾಣುತ್ತಿದ್ದು, ಶನಿವಾರ 8 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸೋಂಕಿಗೆ ಬಲಿಯಾದವರ ಸಂಖ್ಯೆ ನೂರರ ಗಡಿ (ಒಟ್ಟು 107) ದಾಟಿದೆ.

    ಜಿಲ್ಲೆಯಲ್ಲಿ ಶನಿವಾರ 187 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ 104 ಜನರಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕದ ಮೂಲಕ ಸೋಂಕು ಹರಡಿದೆ. ಉಳಿದಂತೆ 20 ಜನರು ಐಎಲ್‌ಐ (ಶೀತ, ಜ್ವರ), 7 ಜನರು ಸರಿ (ತೀವ್ರ ಉಸಿರಾಟದ ಸಮಸ್ಯೆ) ಪ್ರಕರಣದವರಾಗಿದ್ದಾರೆ. 26 ಜನರು ಅಂತಾರಾಜ್ಯ, ಅಂತರ ಜಿಲ್ಲೆ ಪ್ರವಾಸ ಕೈಗೊಂಡವರಾಗಿದ್ದಾರೆ. 30 ಜನರ ಸೋಂಕಿನ ಮೂಲ ಪತ್ತೆಯಾಗಿಲ್ಲ.

    ಶನಿವಾರ 59 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ ಒಟ್ಟು 808 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ ಒಟ್ಟು 2,638 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ 1,722 ಸಕ್ರಿಯ ಪ್ರಕರಣಗಳು ಇವೆ. ಜಿಲ್ಲೆಯಲ್ಲಿ ಹೊಸದಾಗಿ 148 ಹೊಸ ಕಂಟೇನ್ಮೆಂಟ್ ವಲಯಗಳನ್ನು ಗುರುತಿಸಲಾಗಿದೆ.

    ಜಿಲ್ಲೆಯಲ್ಲಿ ಇಂದು ಮೃತಪಟ್ಟ 8 ಜನರ ಪೈಕಿ 7 ಪುರುಷರು ಹಾಗೂ ಒಬ್ಬರು ಮಹಿಳೆಯರಾಗಿದ್ದಾರೆ. ಎಲ್ಲರೂ ತೀವ್ರ ಉಸಿರಾಟದ ಸಮಸ್ಯೆ (ಸರಿ)ಯಿಂದ ಬಳಲುತ್ತಿದ್ದ ವ್ಯಕ್ತಿಗಳಾಗಿದ್ದರು. 80, 76, 72, 68, 62 ವರ್ಷ ಹಾಗೂ 40 ವರ್ಷದ ಇಬ್ಬರು ಪುರುಷರು,54 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts