More

    ಹಂಪಿ ಕನ್ನಡ ವಿವಿಯಲ್ಲಿ ನುಡಿಹಬ್ಬ, ಮೂವರು ಗಣ್ಯರಿಗೆ ನಾಡೋಜ ಪ್ರದಾನ

    ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಬಳಿ ಇರುವ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ 30ನೇ ನುಡಿಹಬ್ಬದಲ್ಲಿ ಕನ್ನಡ ನಾಡು-ನುಡಿಗೆ ಅನುಪಮ ಕೊಡುಗೆ ನೀಡಿರುವ ಗೊ.ರು.ಚನ್ನಬಸಪ್ಪ, ಡಾ.ಭಾಷ್ಯಂ ಸ್ವಾಮಿ ಮತ್ತು ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರೀ ಅವರಿಗೆ ನಾಡೋಜ ಪದವಿಯನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಪ್ರದಾನ ಮಾಡಿ ಗೌರವಿಸಿದರು.

    ಇದಾದ ನಂತರ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರಿಗೆ ವಚನ ಸಂಸ್ಕೃತಿಯ ಸಮುದಾಯ ತತ್ವ ಮತ್ತು ಸಮಕಾಲೀನ ಸಂದರ್ಭ ವಿಷಯದಡಿ ಹಾಗೂ ಮುದ್ರಣ ಮಾಧ್ಯಮ: ಸಮಕಾಲೀನ ವಿದ್ಯಮಾನಗಳು ವಿಷಯದಡಿ ಪದ್ಮರಾಜ ದಂಡಾವತಿ, ಮಳೆನಾಡು ಅಧ್ಯಯನದ ವಿಷಯದಡಿ ಕಲ್ಕುಳಿ ವಿಠಲ ಹೆಗ್ಡೆ, ಹಳೇ ಮೈಸೂರಿನ ಒಕ್ಕಲಿಗರ ಸ್ಥಿತ್ಯಂತರಗಳು ವಿಷಯದಡಿ ಬಿ.ಎಸ್.ಪುಟ್ಟಸ್ವಾಮಿ ಅವರಿಗೆ ಡಿ.ಲಿಟ್ ಪದವಿ ನೀಡಲಾಯಿತು.

    1030 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

    ಈ ಸಮಾರಂಭದಲ್ಲಿ 100 ವಿದ್ಯಾರ್ಥಿಗಳಿಗೆ ಪಿಎಚ್‌ಡಿ, 28 ಎಂ.ಎ. ಪಿ.ಎಚ್‌ಡಿ ಕನ್ನಡ ಸಾಹಿತ್ಯ, 6 ಗ್ರಾಮೀಣಾಭಿವೃದ್ಧಿ ಎಂ.ಎ.ಪಿ.ಎಚ್‌ಡಿ, 6 ಎಂ.ಎ ಪತ್ರಿಕೋದ್ಯಮ, 9 ಚಿತ್ರಕಲೆ, 12 ಎಂ.ಮ್ಯೂಜಿಕ್ (ಹಿಂದೂಸ್ತಾನಿ ಗಾಯನ), 14 ಬಿ.ಮ್ಯೂಜಿಕ್, 7 ಮಾನವಶಾಸ್ತ್ರ ಸ್ನಾತಕೋತ್ತರ ಡಿಪ್ಲೊಮಾ, 7 ಪತ್ರಿಕೋದ್ಯಮ ಸ್ನಾತಕೋತ್ತರ ಡಿಪ್ಲೊಮಾ, 12 ಪುರಾತತ್ವ ವಸ್ತುಸಂಗ್ರಹಾಲಯಶಾಸ್ತ್ರ ಮತ್ತು ಪ್ರವಾಸೋದ್ಯಮ ಸ್ನಾತಕೋತ್ತರ ಡಿಪ್ಲೊಮಾ, 23 ಯೋಗ ಸ್ನಾತಕೋತ್ತರ ಡಿಪ್ಲೊಮಾ, 15 ವಿದ್ಯಾಥಿಗಳಿಗೆ ಯೋಗ ಸರ್ಟಿಫಿಕೇಟ್ ಕೋರ್ಸ್ ಪದವಿ ಸೇರಿ ಒಟ್ಟು 1030 ನಾನಾ ಕೋರ್ಸ್​ಗಳ ಪದವಿ ಪ್ರದಾನ ಮಾಡಲಾಯಿತು.

    ಮೆರವಣಿಗೆ: ಕನ್ನಡ ವಿವಿಯ ಸೂರ್ಯಚಂದ್ರ ಬೀದಿಯಿಂದ ನವರಂಗ ಬಯಲು ರಂಗ ಮಂದಿರದವರೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ನುಡಿಹಬ್ಬದ ಮೆರವಣಿಗೆ ನಡೆಸಲಾಯಿತು.

    ರೌಡಿಯ ಹೆಂಡ್ತಿಗೇ ಮೆಸೇಜ್ ಮಾಡ್ತಿದ್ದ ಕಿಡಿಗೇಡಿ!; ಬಳಿಕ ರಸ್ತೆಯಲ್ಲಿದ್ದ ವಾಹನಗಳ ಗಾಜು ಪುಡಿಪುಡಿ..

    ಬೇಸಿಗೆಯಲ್ಲಿ ವಾಹನದ ಪೆಟ್ರೋಲ್ ಟ್ಯಾಂಕ್ ಫುಲ್ ಮಾಡಿದ್ರೆ ಬ್ಲಾಸ್ಟ್​ ಆಗುತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts