More

    ಕೊರೊನಾ, ಅತಿ ಮಳೆ, ತಾಪಮಾನ ಏರಿಕೆಗೆ ಜ್ವಾಲಾಮುಖಿಯೇ ಕಾರಣ!: ಹೊಸ ಹೊಳಹು ನೀಡಿದ ಭೂಗರ್ಭ ವಿಜ್ಙಾನಿ

    ಡಾ.ಚನ್ನಣ್ಣ ವಾಲೀಕರ ವೇದಿಕೆ: ಕೇರಳ- ಕೊಡಗು ಜಲ ದುರಂತಕ್ಕೆ ಹವಾಯಿ ದ್ವೀಪದ ಜ್ವಾಲಾಮುಖಿ ಹಾಗೂ ಕೊರೊನಾ ವೈರಸ್​ಗೆ ಫಿಲಿಫೈನ್ಸ್ ಥಾಲ್ ಜ್ವಾಲಾಮುಖಿ ಕಾರಣ. ಅಷ್ಟೇ ಏಕೆ ಜಾಗತಿಕ ತಾಪಮಾನಕ್ಕೂ ಜ್ವಾಲಾಮುಖಿಗಳೇ ಕಾರಣ ಎಂದು ಭೂಗರ್ಭ ವಿಜ್ಞಾನಿ ಡಾ.ಎಚ್.ಎಸ್.ಎಂ. ಪ್ರಕಾಶ್ ವ್ಯಾಖ್ಯಾನಿಸಿದ್ದಾರೆ.

    ಕನ್ನಡದಲ್ಲಿ ವಿಜ್ಙಾನ ಸಾಹಿತ್ಯ ಗೋಷ್ಠಿಯಲ್ಲಿ ಪರಿಸರ ವಿಜ್ಞಾನದ ಬಗ್ಗೆ ಮಾತನಾಡಿದ ಅವರು, ವಾತಾವರಣದಲ್ಲಿನ ಉಷ್ಣತೆ ಹೆಚ್ಚಲು ಕಾರ್ಬನ್ ಡೈಆಕ್ಸೈಡ್​ನಿಂದ ಜ್ವಾಲಾಮುಖಿ ಪ್ರಮುಖ ಪಾತ್ರ ವಹಿಸುತ್ತಿವೆ. ಇದನ್ನು ನನ್ನ ಹತ್ತಾರು ವರ್ಷದ ಅಧ್ಯಯನ ಕಂಡುಕೊಂಡಿದ್ದೇನೆ ಎಂದರು.

    ಉತ್ತರ ಕರ್ನಾಟಕ ನೆರೆ, ಬೆಂಗಳೂರಿನ ಅತಿ ಮಳೆಗೆ ಚಿಲಿ ದ್ವೀಪದ ಜ್ವಾಲಾಮುಖಿ ಕಾರಣವಾಗಿರಬಹುದು ಎಂದ ಅವರು, ಜ್ವಾಲಾಮುಖಿಯ ಪರಿಣಾಮಗಳನ್ನು ಎಳೆಎಳೆಯಾಗಿ ವಿವರಿಸಿದರು.

    ಕೇರಳ, ಕೊಡಗು ಜಲ ದುರಂತದ ಬಗ್ಗೆ ಐದು ತಿಂಗಳ ಮುಂಚೆಯೇ ಎಚ್ಚರಿಸಿದ್ದೆ. ಆಗಸ್ಟ್​ನಲ್ಲಿ ಘಟನೆ ನಡೆದೇ ಹೋಯಿತು. ಇದು‌ ನನಗೆ ಗೊತ್ತಾಗಿದ್ದು ಜ್ವಾಲಾಮುಖಿ ಅಧ್ಯಯನದಿಂದ ಎಂದರು.

    ಜ್ವಾಲಾಮುಖಿ ಸ್ಫೋಟಿಸಿದಾಗ ಅದರ ಲಾವ 40-50 ಕಿಮೀ ಎತ್ತರದ ವರೆಗೆ ಹಾರುತ್ತದೆ, ಬಳಿಕ ನದಿಯಂತೆ ಹರಿದು ಸಮುದ್ರ ಸೇರಿ ಅದರ ಉಷ್ಣಾಂಶ, ಸಮುದ್ರದ ಉಷ್ಣಾಂಶ ಸೇರಿ ಘನೀಕೃತಗೊಂಡು ಮೋಡಗಳಾಗಿ ಪರಿಣಮಿಸಿ ಹೆಚ್ಚಿನ ಮಳೆ ಸುರಿಸಿತು ಎಂದು ಹೇಳಿದರು.

    ಎಲ್ಲ ಜ್ವಾಲಾಮುಖಿ ಬಿಳಿ ಬಣ್ಣದ ಬೂದಿ ಬಿಡುಗಡೆ ಮಾಡುತ್ತದೆ. ಆದರೆ, ಫಿಲಿಫೈನ್ಸ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ಥಾಲ್ ಜ್ವಾಲಾಮುಖಿ ಕರಿ ಬೂದಿಯನ್ನು ಬಿಡುಗಡೆ ಮಾಡುತ್ತಿದೆ. ಇದು ಕಾರ್ಬನ್ ಡೈ ಆಕ್ಸೈಡ್ ಅಲ್ಲ, ಕಾರ್ಬನ್ ಮಾನಾಕ್ಸೈಡ್ ರೂಪದಲ್ಲಿ ಬೇರೆ ಬೇರೆ ಆಮ್ಲಗಳನ್ನು ಬಿಡುಗಡೆ ಮಾಡುತ್ತದೆ. ಇದು ಮಿಳಿತಗೊಂಡು ಅಮೈನೋ ಮಾನಾಕ್ಸೈಡ್ ಆಗುತ್ತದೆ. ಇದರಿಂದ ವಿಷಕಾರಿ ವೈರಾಣುಗಳು ಉತ್ಪತ್ತಿಯಾಗಿ ಏರಿಯಲ್ ವೈರಲ್ ಆಗಲು ಕಾರಣವಾಗುತ್ತಿದೆ. ಇದು ಕೊರೊನಾಗಿಂತ ಘೋರ ಆಗಿರಲೂಬಹುದು. ಇದು ಭೂ ವೈಜ್ಞಾನಿಕ ಸತ್ಯ ಎಂದು ಹೇಳಿದರು.

    ಹಸಿರು ಮನೆ ಪರಿಣಾಮ, ವಾಹನ, ಕಾರ್ಖಾನೆ ಮಾಲಿನ್ಯದಿಂದಲೇ ಗ್ಲೋಬಲ್ ವಾರ್ಮಿಂಗ್ ಎಂದು ನಾವು ಚರ್ಚೆ ಮಾಡುತ್ತಿದ್ದೇವೆ, ಯಾರೂ ಗ್ಲೋಬಲ್ ಕೂಲಿಂಗ್ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಶೀತಲ ಯುಗದಿಂದ ಎಲ್ಲ ಸಂತತಿ ಪ್ರಬೇಧ ನಾಶವಾಗುತ್ತಿದೆ. ಡೈನೋಸಾರ್ ಸೇರಿ ಹಲವು ಸಂತತಿ ನಾಶವಾಗಿದ್ದಕ್ಕೆ ಗ್ಲೋಬಲ್ ಕೂಲಿಂಗ್ ಕಾರಣ ಎಂದರು.

    ಮತ್ತೊಂದು ಎಚ್ಚರಿಕೆ: ಮುಂದೆ ಹವಾಯಿ ದ್ವೀಪದಲ್ಲಿ ಮೌನಾಲೋವ ಎಂಬ ಜ್ವಾಲಾಮುಖಿ ಸಕ್ರಿಯವಾಗಿದೆ. ಅದು ಈ ವರ್ಷ ಅಥವಾ ಮುಂದಿನ ವರ್ಷ ಯಾವ ಪ್ರಮಾಣದಲ್ಲಿ ಸ್ಫೋಟವಾಗುತ್ತದೆ ಎಂದು ಗೊತ್ತಿಲ್ಲ, ಜ್ವಾಲಾಮುಖಿಗಳ ಪರಿಣಾಮಕ್ಕೆ ಗಡಿಗಳಿಲ್ಲ, ನಮ್ಮ ಮೇಲೂ ಪರಿಣಾಮ ಬೀರಬಹುದು ಎಂದು ವಿಜ್ಞಾನಿ ಪ್ರಕಾಶ್ ಎಚ್ಚರಿಸಿದರು.

    ಜತೆಗೆ ಜ್ವಾಲಾಮುಖಿ ನೆಲದ ಒಳಗೆ ನೂರಾರಿವೆ. ಸಮುದ್ರದ ಆಳದಲ್ಲಿ ಸಾವಿರಾರಿವೆ. ನೆಲದ ಮೇಲಿರುವುದನ್ನು ಸಾಕಷ್ಟು ಅಧ್ಯಯನ ಮಾಡಬಹುದು, ಸಮುದ್ರ ಆಳದಲ್ಲಿ ಅಧ್ಯಯನ ಮಾಡಲು ಸಾಧ್ಯವಾಗುತ್ತಿಲ್ಲ. ಸಮುದ್ರದ ಆಳದಲ್ಲಿರುವ ಜ್ವಾಲಾಮುಖಿ ಹೆಚ್ಚು ಅಪಾಯಕಾರಿ ಎಂದು ವಿಶ್ಲೇಷಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts