More

  16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 4 ನಿರ್ಣಯ; ನಾಮಫಲಕ ಸಂಪೂರ್ಣ ಕನ್ನಡೀಕರಣಕ್ಕೆ ನವೆಂಬರ್ ಗಡುವು

  ಧಾರವಾಡ: ಅಂಗಡಿ, ಬ್ಯಾಂಕ್, ಇತರ ವಾಣಿಜ್ಯ ಸಂಕೀರ್ಣಗಳ ನಾಮಫಲಕಗಳು ಸಂಪೂರ್ಣ ಕನ್ನಡಮಯವಾಗಿರಬೇಕು. ಇದನ್ನು ನವೆಂಬರ್‌ವೊಳಗೆ ಜಾರಿಗೆ ತರುವುದು ಸೇರಿ ಪ್ರಮುಖ ೪ ನಿರ್ಣಯಗಳನ್ನು ೧೬ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.
  ನಗರದ ಜೆಎಸ್‌ಎಸ್ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ನಡೆದ ಸಮ್ಮೇಳನದಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ಜಿನದತ್ತ ಹಡಗಲಿ ನಿರ್ಣಯಗಳನ್ನು ಪ್ರಕಟಿಸಿದರು.
  ಯಾವುದೇ ಮಾಧ್ಯಮದ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಭಾಷೆಗೆ ಪ್ರಾಧಾನ್ಯ ನೀಡಬೇಕು. ವೃತ್ತಿಪರ ಕಾಲೇಜುಗಳಲ್ಲಿ ಕನ್ನಡ ಪಠ್ಯ ಕಡ್ಡಾಯ ಬೋಧನೆ, ಶ್ರೇಣಿ ಕೊಡುವಾಗ ಕನ್ನಡ ವಿಷಯದ ಅಂಕಗಳನ್ನು ಪರಿಗಣಿಸಬೇಕು. ಪ್ರಾಥಮಿಕ ಹಂತದವರೆಗೆ ಎಲ್ಲರೂ ಸರ್ಕಾರಿ ಶಾಲೆಗಳಲ್ಲೇ ಶಿಕ್ಷಣ ಪಡೆಯುವುದು ಕಡ್ಡಾಯವಾಗಬೇಕು ಎಂದು ನಿರ್ಣಯ ಮಂಡಿಸಲಾಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts