More

    ಪುರಸಭೆ ಬಜೆಟ್ ಪೂರ್ವಭಾವಿ ಸಭೆಗೆ ಆಕ್ಷೇಪ

    ಸೊರಬ: ಸೊರಬ ಪಟ್ಟಣ ಪಂಚಾಯಿತಿ ಪುರಸಭೆ ಎಂದು ಗೆಜೆಟ್ ಅಧಿಸೂಚನೆ ಹೊರಬೀಳದೆಯೇ 2021-22ನೇ ಸಾಲಿನ ಪುರಸಭೆ ಮುಂಗಡ ಪತ್ರಕ್ಕೆ ಮುಂದಾದ ಆಡಳಿತದ ವಿರá-ದ್ಧ ನಾಗರಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

    ಶುಕ್ರವಾರ ಸಂಜೆ ಅಂಬೇಡ್ಕರ್ ಸಭಾಭವನದಲ್ಲಿ ಏರ್ಪಡಿಸಿದ್ದ ಬಜೆಟ್ ಪೂರ್ವಭಾವಿ ನಾಗರಿಕರ ಸಭೆಯಲ್ಲಿ ಮಾತನಾಡಿದ ಪಪಂ ಅಧ್ಯಕ್ಷ ಎಂ.ಡಿ.ಉಮೇಶ್, ಸೊರಬ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೇರಿದೆ. ಆದ್ದರಿಂದ ಮುಂದಿನ ಒಂದು ವರ್ಷಕ್ಕೆ ಆಯವ್ಯಯ ಮಂಡನೆ ಮಾಡಬೇಕಿದೆ. ಪಟ್ಟಣದ ನಾಗರಿಕರು ಸೇರಿ ಪುರಸಭೆಗೆ ಸೇರುವ ಎಲ್ಲ ಗ್ರಾಮಗಳ ಗ್ರಾಮಸ್ಥರು ಕಾಮಗಾರಿಗಳ ವಿವರ, ಸಲಹೆ-ಸೂಚನೆ ನೀಡಬೇಕು ಎಂದು ಕೋರಿದರು.

    ಆಗ ಹಿರಿಯ ನಾಗರಿಕ, ಹಿಂದಿನ ಪುರಸಭೆ ಅಧ್ಯಕ್ಷ ಎಚ್.ಎಸ್.ಮಂಜಪ್ಪ, ಪಟ್ಟಣ ಪಂಚಾಯಿತಿ ಪುರಸಭೆಯಾದ ಬಗ್ಗೆ ಸರ್ಕಾರ ಗೆಜೆಟ್​ ಅಧಿಸೂಚನೆ ಹೊರಡಿಸಿದ ಆದೇಶ ನಿಮ್ಮಲ್ಲಿದೆಯೇ ಎಂದರು. ಅದಕ್ಕೆ ಮá-ಖ್ಯಾಧಿಕಾರಿ ಶಲ್ಜಾ, ಮುಂದಿನ ವಾರ ಇಲ್ಲವೇ ತಿಂಗಳಲ್ಲಿ ಬರಬಹುದು. ಮತ್ತೊಮ್ಮೆ ಬಜೆಟ್ ಮಂಡಿಸಲು ಆಗುವುದಿಲ್ಲ. ಆದ್ದರಿಂದ ಈಗಲೇ ಮಂಡಿಸಲು ಸಲಹೆ-ಸೂಚನೆ ಪಡೆಯುತ್ತಿದ್ದೇವೆ ಎಂದು ಹೇಳಿದರು.

    ಮತ್ತೆ ಮಂಜಪ್ಪ ಅವರು, ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕರೆ ಸಾಲದು. ಗೆಜೆಟ್ ಅಧಿಸೂಚನೆ ಹೊರಡಿಸಬೇಕಿದೆ. ಇಲ್ಲವಾದರೆ ಮಂಡಿಸಿರುವುದು ವ್ಯರ್ಥವಾಗುತ್ತದೆ. ಈ ಹಿಂದೆ ಪುರಸಭೆ ಆಗುತ್ತದೆ ಎಂದು ಹಳೇ ಸೊರಬ ಮತ್ತು ಕೊಡಕಣಿ ಗ್ರಾಮಗಳನ್ನು ಸೇರಿಸಿಕೊಂಡು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿತ್ತು. ಎರಡು ಗ್ರಾಮದವರು ಆಕ್ಷೇಪಣೆ ಎತ್ತಿ ನ್ಯಾಯಾಲಯದ ಮೊರ ೆಹೋಗಿದ್ದರು. ಅದು ಅಲ್ಲಿಗೆ ನಿಂತಿತು. ಈಗಲೂ ಪುರಸಭೆಗೆ ಸೇರುವ ಗ್ರಾಮಗಳು ಆಕ್ಷೇಪಣೆ ಎತ್ತಿವೆ ಎಂದು ಹಿಂದಿನ ಘಟನೆಗಳನ್ನು ನೆನಪಿಸಿದರು.

    ಇದಕ್ಕೆ ಸಾಥ್ ನೀಡಿದ ಹಳೇ ಸೊರಬ ಗ್ರಾಮದ ಮೋಹನ್, ಪಪಂ ಸದಸ್ಯರಾಗಿ ನೀವು ಆಯ್ಕೆಯಾಗಿದ್ದೀರಿ. ಇನ್ನೂ ವಾರ್ಡ್​ಗಳ ರಚನೆ ಹಾಗೂ ಗಡಿಗಳನ್ನು ಗುರುತಿಸಿ ಸರ್ಕಾರದ ಹಲವಾರು ನಿಯಮಗಳು ಪಾಲನೆಯಾಗಬೇಕಿದೆ. ಹೀಗಿರುವಾಗ ಯಾವ ರೀತಿ ಆದಾಯ ಕ್ರೋಡೀರಿಸá-ತ್ತೀರಿ? ಆದಾಯ ಹೇಗೆ ಹಂಚಿಕೆ ಮಾಡá-ತ್ತೀರಿ ಎಂದು ಅಧ್ಯಕ್ಷರನ್ನು ಪ್ರಶ್ನಿದರು.

    ಅದಕ್ಕೆ ಪ್ರತಿಕ್ರಿಯಿಸಿದ ಮá-ಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಮತ್ತು ಪುರಸಭೆಗೆ ಪ್ರತ್ಯೇಕ ಬಜೆಟ್ ತಯಾರಿ ಮಾಡಿಕೊಂಡಿದ್ದೇವೆ. ಎಂದರು. ಹಾಗಾದರೆ ಪುರಸಭೆಯಾದರೆ ಮಧ್ಯಂತರ ಬಜೆಟ್ ಮಂಡನೆಗೆ ಅವಕಾಶ ಮಾಡಿಕೊಳ್ಳಬಹುದು. ಈಗ ಪಪಂ ಬಜೆಟ್ ಬಗ್ಗೆ ಸಲಹೆ ಸೂಚನೆ ಪಡೆಯಿರಿ ಎಂದು ಮಂಜಪ್ಪ ಅವರು ಹೇಳಿದರು.

    ನಂತರ ಪಪಂ ಬಜೆಟ್​ಗೆ ಸಲಹೆ- ಸೂಚನೆ ಪಡೆಯಲಾಯಿತು. ಉಪಾಧ್ಯಕ್ಷ ಮಧುರಾಯ್ ಜಿ.ಶೇಟ್, ಸದಸ್ಯರಾದ ವೀರೇಶ್ ಮೇಸ್ತ್ರಿ, ನಾಗರಾಜ್ ಉಪ್ಪಿನ, ಶ್ರೀರಂಜಿನಿ, ಸುಲ್ತಾನಾ ಬೇಗಂ, ಅಫ್ರೀನಾ ಬಾನು, ಪ್ರಶಾಂತ್ ದೊಡ್ಡಮನೆ, ಜಯಲ್ಷ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts